ಬೆಂಗಳೂರು : ಶ್ರೀಲಂಕಾದ ಸುಪಾರಿ ಕಿಲ್ಲರ್ಸ್ ಗೆ ಹಣದ ನೆರವು ನೀಡುತ್ತಿದ್ದ ಇಬ್ಬರು ಆರೋಪಿಗಳನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಚನ್ನೈ ಮೂಲದ ಮನ್ಸೂರ್ ಮತ್ತು ಬೆಂಗಳೂರಿನ ವಿವೇಕ ನಗರದ ಅನ್ಬು ಬಂಧಿತ ಆರೋಪಿಗಳು. ಮನ್ಸೂರ್ ಬಳಿಯಿದ್ದ 57 ಲಕ್ಷ ನಗದು,1.5 ಕೋಟಿ ಡಿ.ಡಿ ವಶಕ್ಕೆ ಪಡೆಯಲಾಗಿದೆ. 


COMMERCIAL BREAK
SCROLL TO CONTINUE READING

ಆರೋಪಿಗಳಿಗೆ ಬೆಂಗಳೂರಿನಲ್ಲಿ ನೆಲೆಸಲು ಅಗತ್ಯ ಖರ್ಚು ವೆಚ್ಚಕ್ಕೆಂದು ಸುಮಾರು 57 ಲಕ್ಷ ರೂ ಹೊಂದಿಸಿದ್ದ ಮನ್ಸೂರ್, ಕೆಲವೇ ದಿನಗಳಲ್ಲಿ ಆ ಹಣವನ್ನು ಆರೋಪಿಗಳಿಗೆ ತಲುಪಿಸಲು ಸಿದ್ದವಾಗಿದ್ದ.ಹಣ ಕೈ ಸೇರಿದ ಬಳಿಕ ಬೆಂಗಳೂರಿನಿಂದ ಇತರೆಡೆಗೆ ತೆರಳಲು ಆರೋಪಿಗಳು ಸಿದ್ಧರಾಗಿದ್ದರು ಎನ್ನಲಾಗಿದೆ. 


ಇದನ್ನೂ ಓದಿ- Raichur: ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ವಿದ್ಯಾರ್ಥಿನಿ ಆತ್ಮಹತ್ಯೆ! ಸರಿಯಾಗಿ ಓದು ಎಂದಿದ್ದೇ ತಪ್ಪಾಯ್ತಾ?


ಆರೋಪಿಗಳು ಸಮುದ್ರ ಮಾರ್ಗ ಬಳಸಿ ಬೆಂಗಳೂರಿಗೆ ಬರಲು ನೆರವಾಗಿದ್ದ ಜಲಾಲ್ ನ ಮಾರ್ಗದರ್ಶನದಂತೆ ಮನ್ಸೂರ್ ಕೆಲಸ ಮಾಡುತ್ತಿದ್ದ.  ಒಮಾನ್ ನಲ್ಲಿದ್ದ ಜಲಾಲ್, ಬೆಂಗಳೂರಿನಲ್ಲಿರುವ ಆರೋಪಿಗಳಿಗೆ 50 ಲಕ್ಷ ರೂ. ನೀಡುವಂತೆ ಮನ್ಸೂರ್ ಗೆ ಸೂಚಿಸಿದ್ದ. ಅದರಂತೆ ಬೆಂಗಳೂರಿಗೆ ಬಂದಿಳಿದಿದ್ದ ಶ್ರೀಲಂಕಾದ ಆರೋಪಿಗಳಿಗೆ ಹಣ ನೀಡಲು ಮನ್ಸೂರ್ ರೆಡಿಯಾಗಿದ್ದ. ಇತ್ತ ಅನ್ಬು ಬೆಂಗಳೂರಿನಲ್ಲಿ ಪಾಸ್‌ಪೋರ್ಟ್ ರೆಡಿ ಮಾಡಿ ಕೊಡುವ ಕೆಲಸ ವಹಿಸಿಕೊಂಡು ಪಾಸ್ ಪೋರ್ಟ್ ಗೆ  ಬೇಕಾದ ದಾಖಲೆಗಳನ್ನ ಸಿದ್ಧಪಡಿಸುತ್ತಿದ್ದಾಗ ಆತನನ್ನ ಬಂಧಿಸಲಾಗಿದೆ. 


ಹಣ ಪಡೆದು ನೇಪಾಳದಲ್ಲಿರುವ ಸಂಜೀವ್ ಎಂಬಾತನ ಜೊತೆ ಸೇರಿಕೊಳ್ಳಲು ಆರೋಪಿಗಳು ಸಿದ್ಧವಾಗಿದ್ದರು. ಸಂಜೀವ್ ಜೊತೆ ಆರೋಪಿಗಳು ಸಿಂಹಳೀಯ ಭಾಷೆಯಲ್ಲಿ ನಡೆಸಿರುವ ಮೊಬೈಲ್ ಸಂಭಾಷಣೆ ನಡೆಸಿರುವುದು ಸಹ ಪತ್ತೆಯಾಗಿದೆ. ಬಂಧಿತರಿಗೆ ಸಿಂಹಳೀಯ ಭಾಷೆ ಮಾತ್ರವೇ ತಿಳಿದಿದ್ದು, ಭಾಷಾಂತರಿಸುವವರ ನೆರವು ಪಡೆಯಲಾಗುತ್ತಿದೆ. 


ಇದನ್ನೂ ಓದಿ- ಆಂಟಿ ಪ್ರೀತ್ಸೆ.. ಆಂಟಿ ಮಸಣಕ್ಕೆ.. ಯುವಕ ಜೈಲಿಗೆ.. ಇಬ್ಬರು ಅನಾಥರು


ಶ್ರೀಲಂಕಾದಲ್ಲಿ ಕೊಲೆ, ಗ್ಯಾಂಗ್ ವಾರ್ ನಂತಹ ಕೃತ್ಯಗಳಲ್ಲಿ ಭಾಗಿಯಾಗಿ ಬೆಂಗಳೂರಿಗೆ ಬಂದು ಅಕ್ರಮವಾಗಿ ನೆಲೆಸಿದ್ದ ಕಸನ್ ಕುಮಾರ್ ಸಂಕ (36), ಅಮಿಲಾ ನುವಾನ್ ಅಲಿಯಾಸ್ ಗೋತಾ ಸಿಲ್ವಾ (36) ರಂಗಪ್ರಸಾದ್ ಅಲಿಯಾಸ್ ಚುಟ್ಟಾ (36) ಹಾಗೂ ಆರೋಪಿಗಳಿಗೆ ಬೆಂಗಳೂರಿನಲ್ಲಿ ನೆಲೆಸಲು ಆಶ್ರಯ ನೀಡಿದ್ದ ಜೈ ಪರಮೇಶ್ (42) ಎಂಬಾತನನ್ನ  ನಿನ್ನೆ ಸಿಸಿಬಿ ಅಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.