Tragedy Love Story: ಆಂಟಿ ಪ್ರೀತ್ಸೆ ಎಂದು 42ರ ಹರೆಯದ ಆಂಟಿ ಹಿಂದೆ ಬಿದ್ದು ಕಾಡಿದ್ದ 25ರ ಯುವಕ ಮತ್ತೊಂದು ಮದುವೆಯಾಗಿ ಆಂಟಿಗೆ ಮಸಣದ ದಾರಿ ತೋರಿದ್ದ. ಆಂಟಿ ಸಾವಿನ ಸತ್ಯ ತಿಳಿಯುತ್ತಿದ್ದಂತೆ ಆತ ಜೈಲು ಪಾಲಾಗಿದ್ದಾನೆ. ಒಟ್ನಲ್ಲಿ ಆಂಟಿ ಪ್ರೀತ್ಸೆ ಸ್ಟೋರಿಯಲ್ಲಿ ಮಗ ತಾಯಿ ಕಳೆದುಕೊಂಡರೆ, ನವ ವಿವಾಹಿತೆ ತನ್ನ ಗಂಡನಿಂದ ದೂರವಾಗಿರುವ ಘಟನೆ ಚಿಕ್ಕಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಹೌದು, ಚಿಕ್ಕಮಗಳೂರಿನಲ್ಲಿ 42 ವರ್ಷ ವಯಸ್ಸಿನ ಆಂಟಿ ಹಿಂದೆ ಬಿದ್ದಿದ್ದ 25ವರ್ಷದ ಪೋರ ಆಂಟಿಗೆ ಕೈಕೊಟ್ಟು ಮದುವೆ ಆಗಿದ್ದ. ಆಂಟಿ ಬೇಸರದಿಂದ ಅವನನ್ನ ಕರೆಸಿ ಮಾತನಾಡಿದಾಗ ಇಬ್ಬರ ನಡುವೆ ಮದುವೆ ವಿಚಾರವಾಗಿ ಗಲಾಟೆ ನಡೆದಿದೆ. ಈ ಗಲಾಟೆಯಲ್ಲಿ ಆಂಟಿ ಮೃತಪಟ್ಟಿದ್ದಾಳೆ.
ಘಟನೆ ಹಿನ್ನಲೆ:
ಆಂಟಿ ಪ್ರೀತ್ಸೆ ಸ್ಟೋರಿಯಲ್ಲಿ ಕಳೆದ ಐದು ತಿಂಗಳ ಹಿಂದೆಯೇ ಆಂಟಿ ಮೃತಪಟ್ಟಿದ್ದಳು. ಚಿಕ್ಕಮಗಳೂರು ಪೊಲೀಸರು ಈ ಕೊಲೆ ಪ್ರಕರಣವನ್ನ ಈಗ ಭೇದಿಸಿದ್ದಾರೆ. ಮೃತ ದುರ್ದೈವಿ ಆಂಟಿಯ ಹೆಸರು ವಾಸಂತಿ. ಇನ್ನೂ ಆಂಟಿ ಹಿಂದೆ ಬಿದ್ದು ಕಾಡಿದ್ದ ಯುವಕನ ಹೆಸರು ಪ್ರಕಾಶ್. ಈಕೆ ಶೃಂಗೇರಿ ತಾಲೂಕಿನ ನೆಮ್ಮಾರು ನಿವಾಸಿ. ಯುವಕ ಓರ್ವ ಕಲಾವಿದನಾಗಿದ್ದು, ಈತ ಕಳಸ ತಾಲೂಕಿನವರು.
ಇದನ್ನೂ ಓದಿ- ಅಪಘಾತಕ್ಕೆ ಕಾರಣವೇ ಈ ಬ್ಲಾಕ್ ಸ್ಫಾಟ್ ಗಳು: ಬೆಂಗಳೂರಲ್ಲಿ ಎಲ್ಲೆಲ್ಲಿವೆ ಗೊತ್ತಾ..!?
ದುಡಿಮೆಗಾಗಿ ಶೃಂಗೇರಿಗೆ ಬಂದಿದ್ದ ಯುವಕ ಕೆಲಸ ಮಾಡೋ ಜಾಗದಲ್ಲಿ ಆಂಟಿ ಜೊತೆ ಸ್ನೇಹ ಬೆಳೆಸಿದ್ದ. ಅವರಿಬ್ಬರದ್ದು ಸ್ವಲ್ಪ ಕ್ಲೋಸ್ ಸ್ನೇಹವೆ. ಒಂದೂವರೆ ವರ್ಷ ಇಬ್ಬರೂ ಅನ್ಯೋನ್ಯವಾಗಿಯೇ ಇದ್ದರೂ. ವಯಸ್ಸಿನ ಹುಡ್ಗ ಎಷ್ಟು ದಿನ ಆಂಟಿ ಜೊತೆ ಇರ್ಲಿ ಅಂತ, ಹಳೇ ಆಂಟಿ ಬಿಟ್ಟು ಹೊಸ ಹುಡ್ಗಿ ಕೈಹಿಡ್ದಿದ್ದ.
ಇತ್ತ ಒಂದೂವರೆ ವರ್ಷದಿಂದ ಜೊತೆಗಿದ್ದ ಜೊತೆಗಾರನನ್ನ ಕಳ್ಕೊಂಡಿದ್ದ ಆಂಟಿ ಸಿಕ್ಕಾಪಟ್ಟೆ ಫೀಲ್ ಆಗಿದ್ಲು. ಅದಕ್ಕೆ ಅವನನ್ನ ಕಾಫಿ ಎಸ್ಟೇಟ್ಗೆ ಕರೆಸಿ ಯಾಕ್ ಮದ್ವೆ ಆದೆ, ನನ್ನ ಜೊತೆಯೇ ಇರಬೇಕಿತ್ತು ಅಂತ ರಗಳೆ ಮಾಡಿದ್ದಾಳೆ. ವಿಷ ಕುಡಿತೀನಿ ಅಂತ ಹೆದರಿಸಿದ್ದಾಳೆ. ಈ ಸಂದರ್ಭದಲ್ಲಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು 42ರ ಆಂಟಿಗೆ 25ರ ಯುವಕ ಕೊಟ್ಟ ಒಂದೇ ಒಂದು ಏಟಿಗೆ ಆಕೆ ಉಸಿರು ಚೆಲ್ಲಿ ಬಿದ್ದಿದ್ದಾಳೆ.
ಇದನ್ನೂ ಓದಿ- ಮಹಿಳೆಯಿಂದ ಪಾದ್ರಿ ಮೇಲೆ ಲೈಂಗಿಕ ಕಿರುಕುಳ ಕೇಸ್: ಸುಳ್ಳು ಅಂತಾ ಪ್ರತಿದೂರು ದಾಖಲಿಸಿದ ಪಾದ್ರಿ
ಆಂಟಿ ಮೂರ್ಛೆ ಹೋಗಿದ್ದಾಳೆ ಎಂದು ಭಾವಿಸಿದ್ದ ಯುವಕ ಆಕೆಯ ಮುಖಕ್ಕೆ ನೀರು ಹಾಕಿ ಎಬ್ಸೋಕೆ ಯತ್ನಿಸಿದ್ರು ಆಕೆ ಏಳಲಿಲ್ಲ. ನಂತರ ಆಕೆ ಮೃತ ಪಟ್ಟಿರುವ ವಿಷಯ ತಿಳಿಯುತ್ತಿದ್ದಂತೆ ಕೂಡಲೇ ಮೃತದೇಹವನ್ನ 25 ಮೀಟರ್ ಎಳೆದು ಮುರಿದು ಬಿದ್ದಿದ್ದ ಮರದ ಬುಡಕ್ಕೆ ಆಂಟಿಯ ಮೃತದೇಹ ಹಾಕಿ ಮಣ್ಣು ಮುಚ್ಚಿ ಬಂದಿದ್ದ. ಬಳಿಕ ಏನೂ ಆಗೇ ಇಲ್ಲ ಎಂಬಂತೆ ಇದ್ದ ಯುವಕ ಹೆಂಡ್ತಿ ಜೊತೆ ಆರಾಮವಾಗಿದ್ದ. ಐದು ತಿಂಗಳ ಬಳಿಕ ಈ ಘಟನೆ ಬೇಧಿಸಿರುವ ಶೃಂಗೇರಿ ಪೊಲೀಸರು ಆತನನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.