ಬೆಂಗಳೂರು: ಬೆಂಗಳೂರಿನಲ್ಲೊಂದು ಅಮಾನವೀಯ ಘಟನೆ ನಡೆದಿದೆ. ಯುವಕನಿಗೆ ಮನಬಂದಂತೆ ಹಲ್ಲೆ ಮಾಡಿ, ಬಳಿಕ ಆತನನ್ನು ನಗ್ನಗೊಳಿಸಿ ವಿಡಿಯೋ ಮಾಡಿರುವ ಆರೋಪ ಕೇಳಿಬಂದಿದೆ. ಬೆಂಗಳೂರಿನ ಸುಬ್ರಮಣ್ಯಪುರದ ಉತ್ತರಹಳ್ಳಿಯ ಅಂಗಡಿಯೊಂದರಲ್ಲಿ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. 


COMMERCIAL BREAK
SCROLL TO CONTINUE READING

ಬೆತ್ತ ಹಿಡಿದ ವ್ಯಕ್ತಿಯೊಬ್ಬ ಯುವಕನ ಮೇಲೆ ಮನ ಬಂದಂತೆ ಹಲ್ಲೆ ಮಾಡಿದ್ದಾನೆ. ಬೇರೆಡೆ ಇದ್ದ ಆ ಯುವಕನ ಕರೆಸಿ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಆಂಧ್ರಪ್ರದೇಶ ಮೂಲದ ಶರೀಫ್ ಹಲ್ಲೆಗೊಳಗಾದ ವ್ಯಕ್ತಿ ಎಂದು ತಿಳಿದುಬಂದಿದೆ.  


ಉತ್ತರಹಳ್ಳಿಯ ಹಾಸಿಗೆ ವ್ಯಾಪಾರಿ ಶೆಕ್ಷಾಮವಲ್ಲಿ ಹಲ್ಲೆ ಮಾಡಿದ್ದಾಗೆ ತಿಳಿದುಬಂದಿದೆ. ಶೇಕ್ಷವಾಲಿ ನಿಗೆ ಶರೀಫ್ ಸಂಬಂಧಿಯಾಗಿದ್ದಾನೆ. ಹಾಸಿಗೆ ಕೆಲಸಕ್ಕೆಂದು  ಶರೀಫ್ ನನ್ನು ಆಂಧ್ರದಿಂದ ಕರೆತಂದಿದ್ದ ಎನ್ನಲಾಗಿದೆ. ಬಳಿಕ ಹೆಚ್ಚಿಗೆ ಕೆಲಸ ಕೊಟ್ಟು ಕಡಿಮೆ ಸಂಬಳ ನೀಡುತ್ತಿದ್ದನು. 


ಇದನ್ನೂ ಓದಿ: ನಾಳೆ ರಾಜಧಾನಿಯ ಕೆಲವೆಡೆ ಕರೆಂಟ್ ಕಟ್ !ಸಂಜೆ 4 ಗಂಟೆವರೆಗೂ ಆಗಲಿದೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ


ಹಗಲು ರಾತ್ರಿ ಎನ್ನದೇ ಹೆಚ್ಚು ಕೆಲಸ ನೀಡುತಿದ್ದ ಕಾರಣ ಬೇಸತ್ತ ಶರೀಫ್ ಕೆಲಸ ಬಿಟ್ಟಿದ್ದನು ಎನ್ನಲಾಗಿದೆ.  ಶರೀಫ್ ಮತ್ತೋರ್ವ ಅಂಗಡಿಯಲ್ಲಿ ಕೆಲಸಕ್ಕೆ ಸೇರಿದ್ದನು. ವಿಚಾರ ತಿಳಿದು ಶರೀಫ್ ಗೆ ಶೇಕ್ಷವಾಲಿ ಕರೆ ಮಾಡಿದ್ದನಂತೆ. ಈ ವೇಳೆ ಮಾತಿಗೆ ಮಾತು ಬೆಳೆದಿದೆ. ಬಾಕಿ ಸಂಬಳ ಕೊಡೊದಾಗಿ ಕರೆಸಿದ ಶೇಕ್ಷವಾಲಿ ಈತನನ್ನು ಥಳಿಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.


ತಾಯಿ ಬಗ್ಗೆ ಅವಾಚ್ಯ ನಿಂದನೆ ಮಾಡಿದ್ದಕ್ಕೆ ಶರೀಫ್‌ ನನ್ನು ಥಳಿಸಿದ್ದಾಗಿ ಹೇಳಲಾಗಿದೆ. ಜುಲೈ 24 ರಂದು ಉತ್ತರಹಳ್ಳಿಯ ಬಟ್ಟೆ ಅಂಗಡಿಯಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 


ಬೆತ್ತದಿಂದ ಮನ ಬಂದಂತೆ ಶರೀಫ್ ಗೆ ಹಲ್ಲೆ ಮಾಡಿ, ಬಳಿಕ ನಗ್ನಗೊಳಿಸಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದ ಎಂಬ ಆರೋಪ ಕೇಳಿಬಂದಿದೆ. ನಂತರ ಈ ವಿಚಾರ ಸಾಮಾಜಿಕ ಕಾರ್ಯಕರ್ತರೊಬ್ಬರಿಗೆ ಗೊತ್ತಾಗಿತ್ತು. ಮಾನವಹಕ್ಕುಗಳ ಡಿಫೆನ್ಸ್ ಎಂಬ ಆರ್ಗನೈಸೇಷನ್ ನಡೆಸುತ್ತಿದ್ದ ಲಕ್ಷ್ಮಿ ನಾರಾಯಣ್ ಶೆಟ್ಟಿ ಅವರು ಶರೀಫ್ ಪರ ನಿಂತು ದೂರು ನೀಡುವಂತೆ ಹೇಳಿದ್ದರು. 


ಇದನ್ನೂ ಓದಿ: ಇಳಿ ವಯಸ್ಸಿನಲ್ಲಿ ಗಾರೆ ಕೆಲಸ, ಇಬ್ಬರು ಹೆಣ್ಣು ಮಕ್ಕಳನ್ನು ಓದಿಸುವ ಛಲ..! ಸಹಾಯ ಮಾಡಲು ಬಂದು ವೃದ್ಧ ಕೂಡಿಟ್ಟಿದ್ದ ಹಣ ದೋಚಿದ ಖದೀಮರು


ಆದರೆ ಶರೀಫ್ ಊರು ಬಿಟ್ಟ ಬಳಿಕ ಅಂಗಡಿಯ ಮಾಲೀಕನೇ ಪೊಲೀಸರಿಗೆ ಮೊದಲ ದೂರು ನೀಡಿದ್ದ. ತನ್ನ ತಾಯಿ ಬಗ್ಗೆ ಅವಾಚ್ಯ ಪದಗಳ ಬಳಸಿ ನಿಂದಿಸಿದ್ದಾನೆಂದು ದೂರು ದಾಖಲಿಸಿದ್ದ. ದೂರು ನೀಡಿದ ಹಿನ್ನೆಲೆ‌ ಶರೀಫ್ ಕರೆಸಿ ಪೊಲೀಸರು ಬುದ್ದಿ ಹೇಳಿದ್ದರು. 


ಆದರೆ ಕೆಲ ದಿನಗಳ ಬಳಿಕ ಪೊಲೀಸರೇ ಶರೀಫನಿಗೆ ಬೆಂಗಳೂರಿಗೆ ಬರುವಂತೆ ತಿಳಿಸಿದ್ದರು. ಕಾರಣ ಅದಾಗಲೇ ಶರೀಫ್ ಮೇಲೆ ನಡೆದಿದ್ದ ಹಲ್ಲೆಯ ವಿಡಿಯೋ ಪೊಲೀಸರ ಕೈ ಸೇರಿತ್ತು. ಪೊಲೀಸರಿಗೆ ಸಾಮಾಜಿಕ ಕಾರ್ಯಕರ್ತ ಲಕ್ಷ್ಮಿ ನಾರಾಯಣ್ ಶೆಟ್ಟಿ ವಿಡಿಯೋ ತಲುಪಿಸಿದ್ದರು.  


ಬಳಿಕ ಹಲ್ಲೆಗೊಳಗಾದ ಶರೀಫ್ ನಿಂದ ಕೃತ್ಯ ಸಂಬಂಧ ದೂರು ನೀಡಿದ್ದಾನೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಎಫ್ ಐಆರ್ ಮಾಡಿದ್ದು, ತನಿಖೆ ಮುಂದುವರೆದಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.