ಬೆಂಗಳೂರು: ಬರುಬುರುತ್ತಾ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ದಿನಕ್ಕೆ ಕೋಟಿಗಟ್ಟಲೇ ಹಣವನ್ನು ಸೈಬರ್ ವಂಚಕರು ಚಾಲಾಕಿತನದಿಂದ ಎಗರಿಸುತ್ತಿದ್ದಾರೆ.ವಂಚಿಸಿದ ಹಣವನ್ನು ತಮಗೆ ಬೇಕಾದವರಿಗೆ ಕಳುಹಿಸಲು ಸೈಬರ್ ವಂಚಕರು ಹೊಸ ಪ್ಲಾನ್ ಮಾಡಿಕೊಂಡಿದ್ದಾರೆ. ಇದಕ್ಕೆ ಬಲಿಯಾಗ್ತಿರೋದು ಬೇರಾರು ಅಲ್ಲಾ, ಕಾಲೇಜು ವಿದ್ಯಾರ್ಥಿಗಳು ನಿರೋದ್ಯೋಗಿಗಳು.‌


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಲವರ್‌ ಹುಟ್ಟುಹಬ್ಬಕ್ಕೆ Iphone ಗಿಫ್ಟ್‌ ನೀಡಲು, ತಾಯಿಯ..! ದೇಶವನ್ನೇ ಬೆಚ್ಚಿ ಬಿಳಿಸುತ್ತಿದೆ 9ನೇ ತರಗತಿ ವಿದ್ಯಾರ್ಥಿಯ ಕೃತ್ಯ 


ಹೌದು ವಿದ್ಯಾರ್ಥಿಗಳು, ನಿರುದ್ಯೋಗಿಗಳು ತಮಗೆ ಗೊತ್ತಿಲ್ಲದಂತೆ ಈ ಸೈಬರ್ ವಂಚನೆಯ ಜಾಲಕ್ಕೆ ಸಿಲುಕಿ ವಂಚನೆಯ ಪಾಲುದಾರರಾಗುತ್ತಿದ್ದಾರೆ. ಟೆಲಿಗ್ರಾಮ್ ಆ್ಯಪಲ್ಲಿ ಆನ್ ಲೈನ್ ಜಾಬ್, ಮನೆಯಿಂದ ಕೆಲಸ ಮಾಡಿ, ಪಾರ್ಟ್ ಟೈಮ್ ಜಾಬ್ ಅಂತಾ ಗ್ರೂಪ್ ಕ್ರಿಯೇಟ್ ಮಾಡಿ ವಿದ್ಯಾರ್ಥಿಗಳನ್ನು, ನಿರುದ್ಯೋಗಿಗಳನ್ನು ಖೆಡ್ಡಾಗೆ ಕೆಡವಲಾಗುತ್ತಿದೆ.ನೀವೇನಾದ್ರು ಈಗಲೂ ಟೆಲಿಗ್ರಾಮ್ ಆ್ಯಪನ್ನು ಬಳಕೆ ಮಾಡುತ್ತಿದ್ದರೆ ಈಗಲೇ ಒಮ್ಮೆ  ಪರಿಶೀಲಿಸಿಕೊಳ್ಳಿ.


ಇದನ್ನೂ ಓದಿ: ಗಂಡನ ತಲೆ ಒಡೆದು ಕೈಯಿಂದ ಬುರುಡೆಯೊಳಗಿನ ರಕ್ತ ಮಾಂಸ ತೆಗೆದ ಮಹಿಳೆ..! ಕಾರಣ ಇಷ್ಟೇನಾ..?


ಪಾರ್ಟ್ ಟೈಮ್ ಜಾಬ್ ಕೊಡುವ ವಂಚಕರು ಮಾಡಿಸುವ ಕೆಲಸ ಸಿಂಪಲ್ ಆದ್ರೂ ಮುಂದೆ ಅದು ದೊಡ್ಡ ಅನಾಹುತಕ್ಕೆ ಕಾರಣವಾಗುತ್ತೆ. ಪಾರ್ಟ್ ಟೈಂ ಜಾಬ್ ಓಕೆ ಅಂದ ತಕ್ಷಣ ನಿಮ್ಮ ಖಾತೆಗಳಿಗೆ ಒಂದಷ್ಟು ಹಣ ಹಾಕಿ ಅದನ್ನ ಬೇರೆ ಬೇರೆ ಅಕೌಂಟ್ ಗಳಿಗೆ ವರ್ಗಾವಣೆ  ಮಾಡಲು ಸೂಚಿಸುತ್ತಾರೆ. ಹೇಳಿದಂತೆ ಹಣ ವರ್ಗಾವಣೆ ಮಾಡಿದ್ರೆ  ಒಂದಿಷ್ಟು ಕಮಿಷನ್ ಸಹ ಕೊಡುತ್ತಾರೆ. ಆದರೆ ಈ ಹಣ ಸೈಬರ್ ಫ್ರಾಡ್ ಮಾಡಿ ಜನರನ್ನು ಯಾಮಾರಿಸಿ ಗಳಿಸಿದ ಹಣವಾಗಿರುತ್ತೆ.


ಈ ಹಣವನ್ನ ನಿಮ್ಮ ಖಾತೆಗಳ ಮೂಲಕ ತಮ್ಮ ಅಕೌಂಟ್ ಗಳಿಗೆ ವರ್ಗಾವಣೆ ಮಾಡಿಕೊಳ್ಳಲು ನಿಮ್ಮನ್ನ ಬಳಸಿಕೊಳ್ಳುತ್ತಿದ್ದಾರೆ. ಅಂದರೆ ನಿಮಗೆ ಗೊತ್ತಿಲ್ಲದಂತೆ ನೀವು ವಂಚನೆಯಲ್ಲಿ ಭಾಗಿಯಾಗಿರುತ್ತೀರಿ. ಸದ್ಯ ಇಂತಹದೇ ವಂಚನೆ ಪ್ರಕರಣವನ್ನ ಕೇಂದ್ರ ವಿಭಾಗ ಸೈಬರ್ ಕ್ರೈಮ್ ಇನ್ಸ್ಪೆಕ್ಟರ್ ಸುರೇಶ್ ಅಂಡ್ ಟೀಮ್ ಪತ್ತೆ ಮಾಡಿ ಮೈಸೂರು ಮೂಲದ ಯುವಕನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ನಮ್ಮ ಆಶಯವಿಷ್ಟೇ ಯುವಜನತೆ ಆನ್ ಲೈನ್ ನಲ್ಲಿ ಬರುವ ಪಾರ್ಟ್ ಟೈಮ್ ಕೆಲಸದ ಆಫರ್ ಬಗ್ಗೆ ಎಚ್ಚರ ವಹಿಸಬೇಕಿದೆ. ಇಲ್ಲದಿದ್ದರೆ ನೀವು ಈ ವಂಚಕರ ಜಾಲಕ್ಕೆ ಸಿಲುಕಿ ಪಡಬಾರದ ಕಷ್ಟಪಡಬೇಕಾಗುತ್ತೆ ಎಚ್ಚರ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.