ಮಾಂಸದ ಅಡುಗೆ ಮಾಡು ಅಂತಾ ಪೀಡಿಸುತ್ತಿದ್ದ, ನಿಜವಾದ ಸಂತ್ರಸ್ತೆ ನಾನು..! ಅತುಲ್ ಪತ್ನಿ ಶಾಕಿಂಗ್ ಹೇಳಿಕೆ..
Atul Subhash case updates : ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಕೇಸ್ ತನಿಖೆ ನಡೆಸುತ್ತಿರುವ ಪೊಲೀಸರ ಮುಂದೆ ಅರೆಸ್ಟ್ ಆಗಿರುವ ಅತುಲ್ ಪತ್ನಿ ನಿಕಿತಾ ಹೇಳಿಕೆ ದಾಖಲಿಸಿದ್ದಾಳೆ. ಅತ್ತ ಪ್ರಕರಣದ ಆರೋಪಿಯೊಬ್ಬನಿಗೆ ಕೋರ್ಟ್ ನೀರಿಕ್ಷಣಾ ಜಾಮೀನು ನೀಡಿದ್ದು, ಈ ಬಗೆಗಿನ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
Atul Subhash case update : ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣ ಇಡೀ ದೇಶದಲ್ಲೇ ಸೌಂಡ್ ಮಾಡಿದ ಪ್ರಕರಣ. ಅತುಲ್ ಸುಸೈಡ್ ಮಾಡಿಕೊಳ್ಳಲು ಪ್ರೇರಣೆ, ಕಿರುಕುಳ ನೀಡಿದ ಆರೋಪದಲ್ಲಿ ನಾಲ್ವರ ಮೇಲೆ ಪ್ರಕರಣ ದಾಖಲಿಸಿ ಮೂವರನ್ನು ಮಾರತ್ ಹಳ್ಳಿ ಪೊಲೀಸರು ಲಾಕ್ ಮಾಡಿದ್ರು. ಆದರೆ ಪೊಲೀಸರ ತನಿಖೆಯಲ್ಲಿ ಅತುಲ್ ಹೆಂಡತಿ ನಿಕಿತಾ ಸಿಂಘಾನಿಯಾ ಪೊಲೀಸರ ಮುಂದೆ ಕೆಲ ಸ್ವಾರಸ್ಯಕರ ವಿಷಯ ಹೇಳಿಕೊಂಡಿದ್ದಾಳೆ.
ಯೆಸ್.. ಅತುಲ್ ಸುಭಾಷ್ ನನಗೆ ಕಿರುಕುಳ ನೀಡುತ್ತಿದ್ದ ಅಂತಾ ಪೊಲೀಸರ ಮುಂದೆ ಅತುಲ್ ಪತ್ನಿ ನಿಕಿತಾ ಹೇಳಿಕೆ ನೀಡಿದ್ದಾಳೆ. ಘಟನೆಯಲ್ಲಿ ಅತುಲ್ ಸಂತ್ರಸ್ತ ಅಲ್ಲಾ, ನಾನೇ ನಿಜವಾದ ಸಂತ್ರಸ್ತೆ. ಅಡುಗೆ ಚೆನ್ನಾಗಿ ಮಾಡಿಲ್ಲ ಅಂತಾ ಅತುಲ್ ಸಾಕಷ್ಟು ಕಿರುಕುಳ ನೀಡುತ್ತಿದ್ದ. ನಾನು ನಾನ್ ವೆಜ್ ತಿನ್ನಲ್ಲ ಅಂದ್ರು ಕೇಳದೇ ನಾನ್ ವೆಜ್ ಅಡುಗೆ ಮಾಡು ಅಂತಾ ಪೀಡಿಸುತ್ತಿದ್ದ.
ಇಷ್ಟೆಲ್ಲಾ ಅದರೂ ನಾನು ಮನೆ ಬಿಟ್ಟು ಹೋಗಿರಲಿಲ್ಲ. ಆದರೆ ನಾನು ಮನೆ ಬಿಟ್ಟು ಹೋಗುವಂತೆ ಮಾಡಿದ್ದು ಅತುಲ್ ಅಂತಾ ಸುಸೈಡ್ ಮಾಡಿಕೊಂಡಿರುವ ಗಂಡ ಅತುಲ್ ಮೇಲೆ ನಿಕಿತಾ ಗಂಭೀರ ಆರೋಪ ಮಾಡಿದ್ದಾಳೆ. ಈ ಎಲ್ಲಾ ಹೇಳಿಕೆಯನ್ನು ಪೊಲೀಸರು ನೋಟ್ ಮಾಡಿಕೊಂಡಿದ್ದಾರೆ.
ಆದರೆ ಇಲ್ಲಿ ಗಮನಿಸಬೇಕಾದ ಸಂಗತಿ ಎಂದ್ರೆ ಅತುಲ್ ಬರೆದಿರುವ ಡೆತ್ ನೋಟ್ ಹಾಗೂ ಮಾಡಿಟ್ಟಿರುವ ವಿಡಿಯೋದಲ್ಲಿ ತನ್ನ ಮೇಲೆ ಹಾಕಿರುವ 9 ಕೇಸ್ ಗಳ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಿದ್ದಾನೆ. ತನ್ನ ಪತ್ನಿಯಿಂದ ಏನೇನೂ ಕಿರುಕುಳ ಆಗಿದೆ ಎಂಬುದನ್ನು ಸಹ ಹೇಳಿಕೊಂಡಿದ್ದಾನೆ. ಹೀಗಾಗಿ ಪೊಲೀಸರು ನಿಕಿತಾ ಹೇಳಿಕೆಯನ್ನು ಎಷ್ಟು ಸಿರಿಯಸ್ಸಾಗಿ ತಗೊಂತಾರೆ ಅಂತಾ ನೋಡ್ಬೇಕು.
ಇದನ್ನೂ ಓದಿ:ಸರ್ಜರಿ ಇಲ್ಲದೆ ಆಸ್ಪತ್ರೆಯಿಂದ ಡಿಸ್ಚಾರ್ಜ್..! ಜೈಲಿಂದ ಹೊರಬರೋಕೆ ದಾಸನ ನಾಟಕ..!?
ಇನ್ನೂ ಅತುಲ್ ಕೇಸಲ್ಲಿ ಪೊಲೀಸರು ನಾಲ್ವರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದರು. ತಲೆಮರೆಸಿಕೊಂಡಿದ್ದವರಲ್ಲಿ ನಿಕಿತಾ ಸಿಂಘಾನಿಯಾ, ನಿಶಾ ಸಿಂಘಾನಿಯಾ, ಅರುರಾಘ್ ಸಿಂಘಾನಿಯಾರನ್ನು ಅರೆಸ್ಟ್ ಮಾಡಿದ್ರು. ಸದ್ಯ ನಾಪತ್ತೆಯಾಗಿದ್ದ ಅತುಲ್ ಮಾವ ಸುಶೀಲ್ ಸಿಂಘಾನಿಯಾಗೆ ಅಲಹಾಬಾದ್ ಹೈ ಕೋರ್ಟ್ ನಿಂದ ನಿರೀಕ್ಷಣಾ ಜಾಮೀನು ಸಿಕಿದ್ದು, ಕಾಂಗ್ರೆಸ್ ಸಂಸದ ಕಮ್ ವಕೀಲ ಮನೀಶ್ ತಿವಾರಿ ಆರೋಪಿ ಪರ ವಾದ ಮಂಡಿಸಿದ್ದರು.
ಇತ್ತ ಬೆಂಗಳೂರು ಪೊಲೀಸರು ಅರೆಸ್ಟ್ ಮಾಡಿದ್ದ ಮೂವರು ಜೈಲಿನಲ್ಲಿದ್ದು, ಮೂವರು ಬೆಂಗಳೂರು ಸೆಷನ್ ಕೋರ್ಟ್ ನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಬೇಕಿದೆ. ಒಟ್ನಲ್ಲಿ ಅತುಲ್ ಸುಭಾಷ್ ಆತ್ಮಹತ್ಯೆ ಕೇಸ್ ದೇಶದಲ್ಲಿ ದೊಡ್ಡ ಸದ್ದು ಮಾಡಿ ಗಂಡಸರ ಮೇಲಿನ ದೌರ್ಜನ್ಯವನ್ನು ಎತ್ತಿ ತೋರಿಸುತ್ತಿದೆ. ಮುಂದೆ ಪ್ರಕರಣ ಯಾವೆಲ್ಲ ತಿರುವು ಪಡೆದುಕೊಳ್ಳುತ್ತೆ ಎಂಬುದನ್ನು ಕಾದು ನೋಡಬೇಕಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.