ಮಾವನ ಒನ್ಸೈಡ್ ಲವ್, ಸೊಸೆ ಫೋನ್ಗೆ ಮೆಸೆಜ್.. ಚಾರ್ಮಾಡಿಘಾಟ್ನಲ್ಲಿ ಬಿತ್ತು ಹೆಣ..!
ಈ ಸ್ಟೋರಿ ಯಾವ ಸಿನಿಮಾ ಕಥೆಗೂ ಕಮ್ಮಿ ಇಲ್ಲ. ಆದರೆ, ನಿಜ ಜೀವನದಲ್ಲಿ ಮಾತ್ರ ಇದು ದುರಂತ ಕಥೆ. ಅತ್ತೆ ಮಗಳನ್ನ ಮದ್ವೆಯಾಗಬೇಕೆಂಬ ಆಸೆ ಇಟ್ಕೊಂಡಿದ್ದ ಸೋದರ ಮಾವನೊಬ್ಬ ಆಕೆಯ ಮೇಲೆ ಅಪಾರವಾದ ಪ್ರೀತಿ ಇಟ್ಕೊಂಡು ಚೆನ್ನಾಗಿ ಓದಲೆಂದು ಯುವತಿಯನ್ನ ತಾನೇ ಓದಿಸ್ತಿದ್ದ. ಆದ್ರೆ ಕಾಲೇಜಿಗೆ ಹೋಗ್ತಿದ್ದ ಆ ಯುವತಿ ಪ್ರೀತಿಯ ಬಲೆಗೆ ಬಿದ್ದುಬಿಟ್ಟಿದ್ದಳು. ಆ ಪ್ರೀತಿಯೇ ಇವತ್ತು ಪ್ರಿಯಕರನ ಬಲಿ ಪಡೆದ್ರೆ, ಯುವತಿಯನ್ನು ಮದುವೆ ಆಗುವ ಆಸೆ ಇಟ್ಕೊಂಡಿದ್ದ ಸೋದರ ಮಾವ ಪ್ರೀತಿಯ ಕೊಂದ ಕೊಲೆಗಾರನಾಗಿ ಪರಪ್ಪನ ಅಗ್ರಹಾರ ಸೇರಿದ್ದಾನೆ.
ಬೆಂಗಳೂರು : ಆತ ತನ್ನ ಅತ್ತೆಮಗಳನ್ನ ಚೆನ್ನಾಗಿ ಓದಿಸಿ ಅವಳನ್ನೆ ಮದ್ವೆಯಾಗ್ಬೇಕು ಎಂಬ ಆಸೆ ಇಟ್ಕೊಂಡಿದ್ದ. ಆದರೆ ಆಕೆಯ ಮೊಬೈಲ್‌ಗೆ ಅದೊಂದು ಮೆಸೇಜ್ ಬಂದಿತ್ತು. ಆ ಮೆಸೇಜೇ ಇವತ್ತು ಆತನನ್ನ ಹಂತಕನನ್ನಾಗಿ ಮಾಡಿ ಸ್ನೇಹಿತರೊಂದಿಗೆ ಜೈಲು ಸೇರುವಂತೆ ಮಾಡಿದೆ. ಹಾಗಾದ್ರೆ ಆಕೆಯ ಮೊಬೈಲ್‌ಗೆ ಬಂದ ಮೆಸೇಜ್ ಏನೂ..? ಬಿದ್ದ ಹೆಣ ಯಾರದ್ದು..? ಅಂತಾ ತಿಳಿಬೇಕು ಅಂದ್ರೆ ಈ ಸ್ಟೋರಿ ಓದಿ..
ಹೌದು... ಈ ಸ್ಟೋರಿ ಯಾವ ಸಿನಿಮಾ ಕಥೆಗೂ ಕಮ್ಮಿ ಇಲ್ಲ. ಆದರೆ, ನಿಜ ಜೀವನದಲ್ಲಿ ಮಾತ್ರ ಇದು ದುರಂತ ಕಥೆ. ಅತ್ತೆ ಮಗಳನ್ನ ಮದ್ವೆಯಾಗಬೇಕೆಂಬ ಆಸೆ ಇಟ್ಕೊಂಡಿದ್ದ ಸೋದರ ಮಾವನೊಬ್ಬ ಆಕೆಯ ಮೇಲೆ ಅಪಾರವಾದ ಪ್ರೀತಿ ಇಟ್ಕೊಂಡು ಚೆನ್ನಾಗಿ ಓದಲೆಂದು ಯುವತಿಯನ್ನ ತಾನೇ ಓದಿಸ್ತಿದ್ದ. ಆದ್ರೆ ಕಾಲೇಜಿಗೆ ಹೋಗ್ತಿದ್ದ ಆ ಯುವತಿ ಪ್ರೀತಿಯ ಬಲೆಗೆ ಬಿದ್ದುಬಿಟ್ಟಿದ್ದಳು. ಆ ಪ್ರೀತಿಯೇ ಇವತ್ತು ಪ್ರಿಯಕರನ ಬಲಿ ಪಡೆದ್ರೆ, ಯುವತಿಯನ್ನು ಮದುವೆ ಆಗುವ ಆಸೆ ಇಟ್ಕೊಂಡಿದ್ದ ಸೋದರ ಮಾವ ಪ್ರೀತಿಯ ಕೊಂದ ಕೊಲೆಗಾರನಾಗಿ ಪರಪ್ಪನ ಅಗ್ರಹಾರ ಸೇರಿದ್ದಾನೆ.
ಇದನ್ನೂ ಓದಿ: ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ, ಹತ್ತು ಜನರಿಗೆ ಗಂಭೀರ ಗಾಯ
ಮತ್ತಿಕೆರೆಯ ನಿವಾಸಿಯಾದ ಗೊವೀಂದರಾಜ್ (19) ತನ್ನದೇ ಏರಿಯಾದಲ್ಲಿದ್ದ ತನ್ನ ಸಂಬಂಧಿ ಯುವತಿಯನ್ನೇ ಪ್ರೀತಿಸ್ತಿದ್ದ. ಆ ವಿಚಾರ ಯಾರಿಗೂ ತಿಳಿಯದಂತೆ ಇಬ್ಬರು ಮೈಂಟೇನ್ ಮಾಡ್ತಿದ್ರು. ಆದ್ರೆ ಮೊನ್ನೆ ರಾತ್ರಿ ಗೋವಿಂದರಾಜು ಎಂದಿನಂತೆ ತನ್ನ ಪ್ರೇಯಸಿಗೆ ಮೆಸೇಜ್ ಮಾಡಿದ್ದಾನೆ. ಆದ್ರೆ ದುರದೃಷ್ಟವಶಾತ್ ಆ ಮೆಸೇಜ್ ನ್ನ ಯುವತಿ ನೋಡೋ ಬದಲಿಗೆ ಆಕೆಯ ಸೋದರ ಮಾವ ಅನಿಲ್ ನೋಡಿದ್ದ. ಆ ಮೆಸೇಜ್ ನೋಡ್ತಿದ್ದಂತೆ ರೊಚ್ಚಿಗೆದ್ದಿದ್ದ ಅನಿಲ್, ಗೋವಿಂದರಾಜುಗೆ ಕಾಲ್ ಮಾಡಿ ಮಾತನಾಡಬೇಕೆಂದು ಕರೆಸಿಕೊಂಡಿದ್ದ.
ಹಾಗೆ ಕರೆಸಿಕೊಂಡ ಅನಿಲ್ ಗೋವಿಂದರಾಜುನ ಬೈಕ್ ನಲ್ಲಿ ಕೂರಿಸಿಕೊಂಡು ನೇರವಾಗಿ ಬ್ಯಾಡರಹಳ್ಳಿ ಸಮೀಪದ ಅಂದ್ರಹಳ್ಳಿಗೆ ಕರೆದುಕೊಂಡು ಹೋಗಿದ್ದ. ಅಲ್ಲಿಗೆ ತನ್ನ ಸ್ನೇಹಿತರಾದ ಭರತ್, ಕಿಶೋರ್ ಹಾಗೂ ಲೋಹಿತ್ರನ್ನ ಕರೆಸಿಕೊಂಡಿದ್ದ. ಎಲ್ಲರು ಸೇರಿಕೊಂಡು ಗೋವಿಂದರಾಜುಗೆ ಮೇಸೇಜ್ ಸಂಬಂಧ ಪ್ರಶ್ನೆ ಮಾಡಿ ಮರದ ಪೀಸ್ ನಿಂದ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಆ ವೇಳೆ ಕುಸಿದು ಬಿದ್ದ ಗೋವಿಂದರಾಜು ಏಟು ತಾಳಲಾರದೇ ಮೃತಪಟ್ಟಿದ್ದಾನೆ. ಇದರಿಂದ ಗಾಬರಿಗೊಂಡ ಅನಿಲ್ ಅಂಡ್ ಗ್ಯಾಂಗ್ ಶವವನ್ನ ಕಾರಿನ ಹಿಂಬದಿ ಸೀಟ್ ನಲ್ಲಿ ಯಾರಿಗೂ ಅನುಮಾನ ಬರದಂತೆ ಕೂರಿಸಿಕೊಂಡು ನೇರವಾಗಿ ಚಾರ್ಮಾಡಿಘಾಟ್ ನಲ್ಲಿ ಬಿಸಾಡಿ ಬಂದಿದ್ದಾರೆ. ಬಳಿಕ ಅನಿಲ್ ತನ್ನ ತಾಯಿ ಬಳಿ ಗೋವಿಂದರಾಜುನ ಕೊಂದುಬಿಟ್ಟೆ ಎಂದು ಹೇಳಿಕೊಂಡಿದ್ದ. ಅನಿಲ್ ತಾಯಿ ಪೊಲೀಸ್ ಸಹಾಯವಾಣಿ 112 ಗೆ ಕರೆ ಮಾಡಿ ಹತ್ಯೆ ವಿಷಯ ತಿಳಿಸಿದ್ದಾಳೆ.
ಇದನ್ನೂ ಓದಿ: ನಿಗದಿತ ಅವಧಿಯಲ್ಲಿ ಪ್ಲ್ಯಾಟ್ ಕೊಡದ ಬಿಲ್ಡರ್‍ಗೆ ರೂ.36.50 ಲಕ್ಷ ಪರಿಹಾರ ಮತ್ತು ದಂಡ
ಹಾಗೆ ಬಂದ 112 ಕರೆ ಹಾಗೂ ಗೋವಿಂದರಾಜು ಪೋಷಕರು ನೀಡಿದ್ದ ಮಿಸ್ಸಿಂಗ್ ಕಂಪ್ಲೈಂಟ್ ಆಧಾರದ ಮೇಲೆ ತನಿಖೆ ಕೈಗೊಂಡ ಯಶವಂತಪುರ ಪೊಲೀಸ್ರು, ಕೃತ್ಯ ನಡೆದ 24 ಗಂಟೆಗಳಲ್ಲಿ ಗೋವಿಂದರಾಜುನ ಕಿಡ್ನಾಪ್ ಮಾಡಿ ಹತ್ಯೆಗೈದು ಶವ ಬಿಸಾಡಿದ್ದ ಅನಿಲ್ ಹಾಗೂ ಆತನ ಮೂವರು ಸ್ನೇಹಿತರನ್ನ ಬಂಧಿಸಿದ್ದಾರೆ. ಸದ್ಯ ಆರೋಪಿಗಳನ್ನ ವಶಕ್ಕೆ ಪಡೆದಿರೋ ಪೊಲೀಸ್ರು ಚಾರ್ಮಾಡಿಘಾಟ್ ನಲ್ಲಿ ಬಿಸಾಡಿದ್ದ ಗೋವಿಂದರಾಜು ಶವವನ್ನ ಹೊರ ತೆಗೆದಿದ್ದಾರೆ.
ಇನ್ನೂ ಕೊಲೆಯ ಹಿಂದೆ ಯುವತಿಯ ಪಾತ್ರವಿದ್ಯ ಇಲ್ವ ಅನ್ನೋ ಬಗ್ಗೆ ತನಿಖೆ ಮುಂದುವರೆಸಿದ್ದಾರೆ. ಅದನೇ ಇರ್ಲಿ. ಏನೇ ಇದ್ರೂ ಅನಿಲ್ ಗೋವಿಂದರಾಜು ಬುದ್ದಿಮಾತು ಬಿಟ್ಟಿದ್ರೆ ಏನೂ ಆಗ್ತಾ ಇರಲಿಲ್ಲ. ಆದರೆ ಕೋಪದ ಕೈಗೆ ಬುದ್ದಿ ಕೊಟ್ಟು ಈಗ ಸ್ನೇಹಿತರೊಂದಿಗೆ ಜೈಲು ಸೇರುವಂತಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.