Be Careful: ಪರಿಚಯಸ್ಥರು & ಬ್ರೋಕರ್‍ಗಳಿಗೆ ಪ್ರಾಪರ್ಟಿ ಪತ್ರ ಕೊಡುವವರೇ ಎಚ್ಚರ ಎಚ್ಚರ!
ಎಚ್‍ಎಸ್‍ಆರ್ ಲೇ ಔಟ್‍ನಲ್ಲಿ ಪ್ರಾಪರ್ಟಿ ಹೊಂದಿದ್ದ 76 ವರ್ಷದ ವೃದ್ಧ ಕೃಷ್ಣಾರೆಡ್ಡಿ ಎಂಬುವರಿಗೆ ಖತರ್ನಾಕ್ ಖದೀಮನೊಬ್ಬ ವಂಚನೆ ಮಾಡಿದ್ದಾನೆ.
ಬೆಂಗಳೂರು: ಪರಿಚಯಸ್ಥರು ಮತ್ತು ಬ್ರೋಕರ್‍ಗಳಿಗೆ ನಿಮ್ಮ ಪ್ರಾಪರ್ಟಿ ಪತ್ರ ಕೊಡುವ ಮುನ್ನ ತುಂಬಾ ಎಚ್ಚರ ವಹಿಸಿ. ಯಾಕಂದ್ರೆ ಜೆರಾಕ್ಸ್ ಡಾಕ್ಯುಮೆಂಟ್ಸ್ ಕೊಟ್ರೂ ಖದೀಮರು ನಿಮ್ಮನ್ನು ಪೊಲೀಸ್ ಠಾಣೆ ಮೆಟ್ಟಿಲು ಹತ್ತಿಸುತ್ತಾರೆ. ನಿಮಗೆ ಅರಿವಿಲ್ಲದಂತೆ ನಿಮ್ಮ ಪ್ರಾಪರ್ಟಿಯನ್ನೇ ಮಾರಾಟ ಮಾಡಿ ವಂಚಿಸುತ್ತಾರೆ ಹುಷಾರ್!
ಇದಕ್ಕೆ ನಿದರ್ಶನವೆಂಬಂಗೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಘಟನೆ ನಡೆದಿದೆ. ಮಾಲೀಕನ ಹೆಸರು ವಂಚಕನ ಹೆಸರು ಒಂದೇ ಇದಿದ್ದರಿಂದ ವಂಚನೆ ಮಾಡೋದಕ್ಕೆ ಸುಲಭವಾಯ್ತಾ ಅನ್ನೋ ಪ್ರಶ್ನೆ ಕೂಡ ಮೂಡಿದೆ. ಎಚ್‍ಎಸ್‍ಆರ್ ಲೇ ಔಟ್‍ನಲ್ಲಿ ಪ್ರಾಪರ್ಟಿ ಹೊಂದಿದ್ದ 76 ವರ್ಷದ ವೃದ್ಧ ಕೃಷ್ಣಾರೆಡ್ಡಿ ಎಂಬುವರಿಗೆ ಖತರ್ನಾಕ್ ಖದೀಮನೊಬ್ಬ ವಂಚನೆ ಮಾಡಿದ್ದಾನೆ.
ಇದನ್ನೂ ಓದಿ: ವಾಲ್ಮೀಕಿ ಮೀಸಲಾತಿ; ಮುಂದಿನ ವಾರ ಸರ್ವ ಪಕ್ಷಗಳ ಸಭೆ: ಸಿಎಂ
ವೃದ್ಧ ಕೃಷ್ಟಾರೆಡ್ಡಿಯವರಿಗೆ ಬ್ಯಾಂಕ್‍ನಲ್ಲಿ ಕೆಲಸ ಮಾಡುತ್ತಿದ್ದ ಅವರದ್ದೇ ಹೆಸರು ಹೊಂದಿದ್ದ ವಂಚಕ ಕೃಷ್ಣಾರೆಡ್ಡಿ ಪರಿಚಯವಾಗಿದ್ದ. ಪ್ರಾಪರ್ಟಿ ಮೇಲೆ ಲೋನ್ ತೆಗೆದುಕೊಳ್ಳುವ ಸಲುವಾಗಿ ಈ ಕೃಷ್ಣಾರೆಡ್ಡಿಗೆ ಜೆರಾಕ್ಸ್ ದಾಖಲೆಗಳನ್ನು ವೃದ್ಧ ಕೃಷ್ಣಾರೆಡ್ಡಿ ನೀಡಿದ್ದರು. ಈ ಎಲ್ಲಾ ದಾಖಲೆಗಳನ್ನು ಬ್ಯಾಂಕ್ ಉದ್ಯೋಗಿ ಕೃಷ್ಣಾರೆಡ್ಡಿ ಇನ್ನೊಬ್ಬ ವಂಚಕ ನಾಗರಾಜ್‍ಗೆ ನೀಡಿದ್ದ. ಅ ದಾಖಲೆಗಳನ್ನು ಒರಿಜಿನಲ್ ರೀತಿ ಮಾಡಿ ಆರೋಪಿ ನಾಗರಾಜ್ ಆಸ್ತಿ ಮಾರಾಟ ಮಾಡಿದ್ದಾನೆ.
ಇಂಜಿನಿಯರ್ ದಿಲೀಪ್ ಕುಮಾರ್ ಎಂಬುವರಿಗೆ ವೃದ್ಧ ಕೃಷ್ಣಾರೆಡ್ಡಿಯವರ ಹೆಚ್‍ಎಸ್‍ಆರ್ ಲೇ ಔಟ್‍ನ ಪ್ರಾಪರ್ಟಿ ಮಾರಲಾಗಿತ್ತು. ನಾಗರಾಜ್ ನೀಡಿದ್ದ ದಾಖಲೆಗಳೆಲ್ಲವೂ ಒರಿಜಿನಲ್ ಎಂದು ತಿಳಿದು ದಿಲೀಪ್ ಕುಮಾರ್ ಆಸ್ತಿ ಖರೀದಿ ಮಾಡಿದ್ದರು. ಸ್ವಲ್ಪ ಸಮಯದ ನಂತರ ಈ ಪ್ರಾಪರ್ಟಿಯನ್ನು ಇಳ್ಳ ಗೋವನ್ ಮತ್ತು ಪ್ರೇಮ್ ಸಾಯಿಗೆ ದಿಲೀಪ್ ಮಾರಾಟ ಮಾಡಿದ್ದರು. ಈ ಪ್ರಾಪರ್ಟಿ ಮೇಲೆ ಇಳ್ಳ ಗೋವನ್ ಮತ್ತು ಪ್ರೇಮ್ ಸಾಯಿ ಎಲ್‍ಐಸಿಯಿಂದ ಲೋನ್ ತೆಗೆದು ಕೊಂಡಿದ್ದರು.
ಇದನ್ನೂ ಓದಿ: ಶಂಕಿತ ಉಗ್ರರ ಬಂಧನದಿಂದ ದೊಡ್ಡ ಅನಾಹುತ ತಪ್ಪಿದೆ : ಎಡಿಜಿಪಿ ಅಲೋಕ್ ಕುಮಾರ್
ಲೋನ್ ತೆಗೆದುಕೊಂಡ ಬಳಿಕ ಅದನ್ನು ವಾಪಸ್ ಮಾಡದೆ ಇಳ್ಳ ಗೋವನ್ ಮತ್ತು ಪ್ರೇಮ್ ಸಾಯಿ ಯಾಮಾರಿಸುತ್ತಿದ್ದರು. ಹೀಗಾಗಿ ಇವರ ವಿರುದ್ಧ ಎಲ್‍ಐಸಿ ಅಧಿಕಾರಿಗಳು ಆಶೋಕ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅಶೋಕ್ ನಗರ ಪೊಲೀಸರು 76 ವರ್ಷದ ವೃದ್ಧ ಕೃಷ್ಣಾರೆಡ್ಡಿಯನ್ನು ಪ್ರಕರಣ ಸಂಬಂಧ ಭೇಟಿ ಮಾಡಿದ್ದರು.
ಪೊಲೀಸರು ಬಂದಾಗಲೇ ತನ್ನ ಪ್ರಾರ್ಪಟಿ ಮೇಲೆ ಲೋನ್ ತೆಗೆದುಕೊಂಡಿದ್ದ ವಿಚಾರ ವೃದ್ಧ ಕೃಷ್ಣಾರೆಡ್ಡಿಗೆ ತಿಳಿದಿದಿದೆ. ತಕ್ಷಣವೇ ಅವರು ಈ ಬಗ್ಗೆ ಹೆಚ್‍ಎಸ್‍ರ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸದ್ಯ ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಿರುವ ಹೆಚ್‍ಎಸ್‍ಆರ್ ಲೇ ಔಟ್ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.