ಪೆನ್ ಡ್ರೈವ್ ನಲ್ಲಿ ಖಾಸಗಿ ಫೋಟೋ, ವಿಡಿಯೋ ಇಟ್ಟುಕೊಳ್ಳುತ್ತೀರಾ: ಹಾಗಾದ್ರೆ ಜೋಕೆ..!
ಕಳೆದುಹೋಗಿದ್ದ ಪೆನ್ ಡ್ರೈವ್ ನಲ್ಲಿ ಯುವತಿಯ ಖಾಸಗಿ ಪೋಟೋಸ್ ಹಾಗೂ ವಿಡಿಯೊ ಇಟ್ಟುಕೊಂಡು ಹಣಕ್ಕಾಗಿ ಬೆದರಿಕೆ ಹಾಕುತ್ತಿದ್ದ ಆರೋಪಿಯನ್ನ ಆಗ್ನೇಯ ವಿಭಾಗದ ಸೆನ್ ಠಾಣೆ ಪೊಲೀಸರು ಬಂಧಿಸಿದ್ದಾರೆ
ಬೆಂಗಳೂರು: ಕಳೆದುಹೋಗಿದ್ದ ಪೆನ್ ಡ್ರೈವ್ ನಲ್ಲಿ ಯುವತಿಯ ಖಾಸಗಿ ಪೋಟೋಸ್ ಹಾಗೂ ವಿಡಿಯೊ ಇಟ್ಟುಕೊಂಡು ಹಣಕ್ಕಾಗಿ ಬೆದರಿಕೆ ಹಾಕುತ್ತಿದ್ದ ಆರೋಪಿಯನ್ನ ಆಗ್ನೇಯ ವಿಭಾಗದ ಸೆನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.ಶೋಯೆಬ್ ಮೊಹಮ್ಮದ್ ಬಂಧಿತ ಆರೋಪಿಯಾಗಿದ್ದಾನೆ.
ಇದನ್ನೂ ಓದಿ : ಪ್ರಚಾರಕ್ಕೆ ಸ್ನೇಹಿತನ ಕಾರು ಪಡೆದು ವಾಪಸ್ ನೀಡೋಕೆ ನಲಪಾಡ್ ನಕ್ರ..!
ಕಳೆದ ಎರಡು ತಿಂಗಳ ಹಿಂದೆ ಯುವತಿಯೊಬ್ಬಳು ಸ್ಕೂಟರ್ ನಲ್ಲಿ ತೆರಳುವಾಗ ಪೆನ್‌ಡ್ರೈವ್ ಕಳೆದುಕೊಂಡಿದ್ದಳು. ಇದೇ ಪೆನ್‌ಡ್ರೈವ್ ಆರೋಪಿ ಶೊಯೇಬ್ ಕೈಗೆ ಸಿಕ್ಕಿತ್ತು. ಸಿಕ್ಕ ಪೆನ್ ಡ್ರೈವ್ ಚೆಕ್ ಮಾಡಿದಾಗ ಯುವತಿ ಖಾಸಗಿ ಪೋಟೋ ಹಾಗೂ ವಿಡಿಯೋ ಇರುವುದು ಶೊಯೇಬ್ ಗೆ ಗೊತ್ತಾಗಿದೆ. ಸ್ನೇಹಿತೆಯರಿಗೆ ಮೇಸೆಜ್ ಮಾಡಿರುವ ಸ್ಕ್ರಿನ್ ಶಾಟ್ ಇರುವುದನ್ನ ಕಂಡ ಶೋಯೆಬ್ ಯುವತಿಗೆ ಫೋನ್ ಮಾಡಿದ್ದಾನೆ.
ಇದನ್ನೂ ಓದಿ : ನಕಲಿ ಭೂ ದಾಖಲೆ ಸೃಷ್ಟಿಸಿ ವಂಚನೆಗೆ ಯತ್ನ: ಬಿಬಿಎಂಪಿ ಕಚೇರಿ ಸಿಬ್ಬಂದಿ ಸಹಿತ ಐವರ ಬಂಧನ!
ನಿಮ್ಮ ಪೆನ್ ಡ್ರೈವ್ ನಲ್ಲಿ ನಿಮ್ಮ ಖಾಸಗಿ ಫೋಟೊ ಹಾಗೂ ವಿಡಿಯೋಗಳಿವೆ. ಪೆನ್‌ಡ್ರೈವ್ ನೀಡಬೇಕಾದರೆ 70 ಸಾವಿರ ಕೊಡಬೇಕು ಎಂದು ಬ್ಲ್ಯಾಕ್‌ಮೇಲ್ ಮಾಡಿ ಕ್ಯೂ ಆರ್ ಕೋಡ್ ಕಳುಹಿಸಿ ಹಣ ಹಾಕುವಂತೆ ಬೆದರಿಸಿದ್ದಾನೆ. ಆತಂಕಕ್ಕೊಳಗಾದ ಯುವತಿ ಕೂಡಲೇ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಸೆನ್ ಪೊಲೀಸರು ಆರೋಪಿಯನ್ನ ಬಂಧಿಸಿ ಸದ್ಯ ಜೈಲಿಗಟ್ಟಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.