ಬೆಂಗಳೂರು: ಕೆಲ ದಿನಗಳಿಂದ ಸೈಲೆಂಟ್ ಆಗಿ ತಾನಾಯ್ತೂ ತನ್ನ ಕೆಲಸ ಆಯ್ತು ಎಂದುಕೊಂಡಿದ್ದ ಯೂಥ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ನಲಪಾಡ್ ವಿರುದ್ಧ ಮತ್ತೊಂದು ಕಿರಿಕ್ ಆರೋಪ ಕೇಳಿ ಬಂದಿದೆ.
ಪ್ರಚಾರಕ್ಕೆ ಎಂದು ಸ್ನೇಹಿತನ ಕಾರನ್ನ ಪಡೆದು ವಾಪಸ್ ಕೊಡದೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ನಲಪಾಡ್ ವಿರುದ್ದ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಎನ್ ಸಿ ಆರ್ ದಾಖಲಾಗಿದೆ.
ಇದನ್ನೂ ಓದಿ: Health Tips: ವಯಸ್ಸಿಗೆ ಅನುಗುಣವಾಗಿ ನಿಮ್ಮ ತೂಕ ಹೇಗಿರಬೇಕು..?
ಯೂತ್ ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ ನಲಪಾಡ್ ಸ್ನೇಹಿತನಬ್ ಮೊಹಮ್ಮದ್ ನಜೀರ್ ಎಂಬುವವರ ಬಳಿ ಫಾರ್ಚೂನರ್ ಕಾರನ್ನ ಪಡೆದಿಕೊಂಡಿದ್ದರು.ಕಾರು ಪಡೆದುಕೊಂಡು ಚುನಾವಣೆ ಬಳಿಕ ವಾಪಸ್ ಕೇಳಿದಾಗ ಬೆದರಿಕೆ ಹಾಕಿದ್ದಾರೆಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸದ್ಯ ನಜೀರ್ ದೂರಿನ ಆಧಾರದ ಮೇಲೆ ಎನ್ ಸಿಆರ್ ದಾಖಲಿಸಿಕೊಂಡ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.