ಬೆಂಗಳೂರು: ಇಡ್ಲಿ ಮಾರಾಟಕ್ಕೆ ಫ್ರಾಂಚೈಸಿ ನೀಡುವುದಾಗಿ ಹೇಳಿ ಅನೇಕರಿಗೆ ಹಣ ಪಡೆದುಕೊಂಡು ವಂಚಿಸಿದ್ದ ಆರೋಪದಡಿ ʼಇಡ್ಲಿ ಗುರುʼ ಕಂಪನಿಯ ಮಾಲೀಕನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮುಂಬೈಗೆ ಎಸ್ಕೇಪ್‌ ಆಗಿದ್ದ ಕಾರ್ತಿಕ್‌ ಶೆಟ್ಟಿಯನ್ನು ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. 


COMMERCIAL BREAK
SCROLL TO CONTINUE READING

ʼಇಡ್ಲಿ ಗುರುʼ ಫ್ರಾಂಚೈಸಿಗೆ ಹಣ ಕೊಟ್ಟು ನಷ್ಟ ಅನುಭವಿಸಿದ್ದ ಚೇತನ್‌ ಎಂಬುವರು ದೂರು ನೀಡಿದ್ದರು. ವಂಚನೆ ಆರೋಪದಡಿ ಕಾರ್ತಿಕ್‌ ಶೆಟ್ಟಿ ಮತ್ತು ಅವರ ಪತ್ನಿ ಪಂಜುಳಾ, ತಂದೆ ಬಾಬು ಶೆಟ್ಟಿ ಹಾಗೂ ಹೋಟೆಲ್‌ ಸಿಬ್ಬಂದಿ ವಿರುದ್ಧ FIR ದಾಖಲಿಸಲಾಗಿತ್ತು. ಪ್ರಕರಣ ದಾಖಲಾಗುತ್ತಿದ್ದಂತೆಯೇ ಬೆಂಗಳೂರು ತೊರೆದಿದ್ದ ಕಾರ್ತಿಕ್‌ ಮುಂಬೈಗೆ ಎಸ್ಕೇಪ್‌ ಆಗಿದ್ದ. ಆರೋಪಿಯನ್ನು ಬೆನ್ನಟ್ಟಿ ಮುಂಬೈಗೆ ಹೋದ ಪೊಲೀಸರ ವಿಶೇಷ ತಂಡವು ಆರೋಪಿಯನ್ನು ಬಂಧಿಸಿದ್ದು, ಬೆಂಗಳೂರಿಗೆ ಕರೆತರುತ್ತಿದ್ದಾರೆ. 


ಇದನ್ನೂ ಓದಿ: PINEWZನಲ್ಲಿ ಲೋಕಸಭೆ ಚುನಾವಣಾ ಸರ್ವೇ: ದೇಶದ ಪ್ರತಿಯೊಬ್ಬರೂ ಭಾಗವಹಿಸುವ ಸುವರ್ಣಾವಕಾಶ


ಚೇತನ್‌ ದೂರು ದಾಖಲಿಸಿದ ಬಳಿಕ ಮತ್ತೆ 9 ಜನರು ಠಾಣೆಗೆ ಬಂದು ದೂರು ನೀಡಿದ್ದರು. ತಮಗೂ ಸಹ ಫ್ರಾಂಚೈಸಿ ಹೆಸರಿನಲ್ಲಿ ಕಾರ್ತಿಕ್‌ ಶೆಟ್ಟಿ ವಂಚಿಸಿರುವುದಾಗಿ ಪ್ರತ್ಯೇಕ ದೂರುಗಳನ್ನು ದಾಖಲಿಸಿದ್ದರು. ಎಲ್ಲರ ದೂರಿನ ಮೇರೆಗೆ ಪೊಲೀಸರು ತನಿಖೆ ಕೈಗೊಂಡಿದ್ದರು. ಕಡಿಮೆ ಜಾಗದಲ್ಲಿ ಫುಡ್‌ಕಾರ್ಟ್‌ನಲ್ಲಿ ಇಡ್ಲಿ ಮಾರಾಟ ಮಾಡಿ ಹಣ ಗಳಿಸಿ ಎಂದು ಹೇಳಿದ್ದ ಆರೋಪಿಗಳು, ʼಇಡ್ಲಿ ಗುರುʼ ಮಳಿಗೆ ಆರಂಭಿಸಿದ್ದರು. ನಂತರ ಅದೇ ಹೆಸರಿನಲ್ಲಿ ಫ್ರಾಂಚೈಸಿ ನೀಡುವುದಾಗಿ ಜಾಹೀರಾತು ನೀಡಿದ್ದರು. ಆರೋಪಿಗಳ ಮಾತು ನಂಬಿದ್ದ 10ಕ್ಕೂ ಹೆಚ್ಚು ಜನರು ಫ್ರಾಂಚೈಸಿ ಪಡೆಯಲು ಆಸಕ್ತಿ ತೋರಿದ್ದರು. ಪ್ರತಿಯೊಬ್ಬರಿಂದ ತಲಾ 3 ಲಕ್ಷ ಹಣ ಪಡೆದಿದ್ದ ಆರೋಪಿಗಳು ಎಲ್ಲರಿಗೂ ವಂಚಿಸಿದ್ದಾರೆ. 


ಕೆಲವರಿಗೆ ʼಇಡ್ಲಿ ಗುರುʼ ಫುಡ್‌ಕಾರ್ಟ್‌ ನೀಡಿದ್ದ ವಂಚಕರು ಇಡ್ಲಿ ಮಾರಾಟದ ಮೇಲೆ ಕಮಿಷನ್‌ ಸಹ ಪಡೆದುಕೊಳ್ಳುತ್ತಿದ್ದರಂತೆ. ಫ್ರಾಂಚೈಸಿ ಪಡೆದವರಿಗೆ ಹೆಚ್ಚಿನ ಆದಾಯ ಬರುತ್ತಿರಲಿಲ್ಲ. ಇದರಿಂದ ಬೇಸತ್ತ ಜನರು ತಮ್ಮ ಫ್ರಾಂಚೈಸಿ ಹಣವನ್ನು ವಾಪಸ್‌ ನೀಡುವಂತೆ ಕೇಳಿದ್ದರು. ಆದರೆ ಆರೋಪಿಗಳು ಹಣ ವಾಪಸ್‌ ನೀಡಲು ನಿರಾಕರಿಸಿದ್ದಾರೆ. ಹಣ ವಾಪಸ್‌ ಕೇಳಲು ಹೋದವರಿಗೆ ಜೀವ ಬೆದರಿಕೆಯೊಡ್ಡಿರುವ ಆರೋಪ ಸಹ ಕೇಳಿಬಂದಿದೆ. ಹಣ ಕಳೆದುಕೊಂಡು ನೊಂದವರು ಠಾಣೆ ಮೆಟ್ಟಿಲೇರಿದ್ದು, ತಮಗೆ ನ್ಯಾಯ ಕೊಡಿಸುವಂತೆ ಮನವಿ ಮಾಡಿಕೊಂಡಿದ್ದಾರೆ. 


ಇದನ್ನೂ ಓದಿ: Electoral Bonds: ಏನಿದು ಎಲೆಕ್ಟೋರಲ್ ಬಾಂಡ್ ಯೋಜನೆ.. ಸುಪ್ರೀಂ ಕೋರ್ಟ್ ರದ್ದುಗೊಳಿಸಲು ಕಾರಣ ಏನು?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.