Bengaluru : ಸೆರೆಸಿಕ್ಕಿದ್ದು ಒಬ್ಬರಲ್ಲ ಇಬ್ಬರು ಶಂಕಿತ ಉಗ್ರರು : 10 ದಿನ ಸಿಸಿಬಿ ವಶಕ್ಕೆ ನೀಡಿದ ಕೋರ್ಟ್
ಇಂದು ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರಿಗೆ ಸೆರೆ ಸಿಕ್ಕಿದ್ದು ಒಬ್ಬರಲ್ಲ ಇಬ್ಬರು ಶಂಕಿತ ಉಗ್ರರು ಎಂಬ ಸ್ಪೋಟಕ ಮಾಹಿತಿ ಲಭಿಸಿದೆ. ಇಬ್ಬರೂ ಶಂಕಿತರನ್ನು ಎನ್ಐಎ ನ್ಯಾಯಾಲಯ 10 ದಿನ ಸಿಸಿಬಿ ವಶಕ್ಕೆ ನೀಡಿದೆ.
ಬೆಂಗಳೂರು : ಇಂದು ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರಿಗೆ ಸೆರೆ ಸಿಕ್ಕಿದ್ದು ಒಬ್ಬರಲ್ಲ ಇಬ್ಬರು ಶಂಕಿತ ಉಗ್ರರು ಎಂಬ ಸ್ಪೋಟಕ ಮಾಹಿತಿ ಲಭಿಸಿದೆ. ಇಬ್ಬರೂ ಶಂಕಿತರನ್ನು ಎನ್ಐಎ ನ್ಯಾಯಾಲಯ 10 ದಿನ ಸಿಸಿಬಿ ವಶಕ್ಕೆ ನೀಡಿದೆ.
ಸಿಸಿಬಿ ಪೊಲೀಸರು ನಿನ್ನೆ ತಿಲಕ್ ನಗರದಲ್ಲಿ ಕಾರ್ಯಾಚರಣೆ ನಡೆಸಿ ಅಸ್ಸಾಂ ಮೂಲದ ಇಬ್ಬರು ಶಂಕಿತ ಉಗ್ರರಾದ ಅಖ್ತರ್ ಹುಸೇನ್, ಆದಿಲ್ ಹುಸೇನ್ ಎಂಬುವವರನ್ನು ಬಂಧಿಸಿದ್ದಾರೆ. ಇಬ್ಬರೂ ಅಣ್ಣ-ತಮ್ಮಂದಿರಾಗಿದ್ದು, ಸಿಲಿಕಾನ್ ಸಿಟಿಯಲ್ಲಿ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರು. ಇಂದು ಸಿಸಿಬಿ ಪೊಲೀಸರು ಎನ್ಐಎ ಕೋರ್ಟ್ ಗೆ ಶಂಕಿತ ಉಗ್ರರನ್ನು ಹಾಜರುಪಡಿಸಿದ್ದ ಹಿನ್ನೆಲೆ ಕೋರ್ಟ್ ಇಬ್ಬರನ್ನೂ 10 ದಿನ ಸಿಸಿಬಿ ಪೊಲೀಸರ ವಶಕ್ಕೆ ನೀಡಿ ಆದೇಶಿಸಿದೆ.
ಇದನ್ನೂ ಓದಿ : Suspected Terrorist Arrested: ಬೆಂಗಳೂರಲ್ಲಿ ವಾಸವಿದ್ದ ಶಂಕಿತ ಉಗ್ರ ಸಿಸಿಬಿ ವಶಕ್ಕೆ
ಇಂದು ಸಿಸಿಬಿ ಪೊಲೀಸರು ಶಂಕಿತ ಉಗ್ರರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ಪ್ರಕರಣ ತನಿಖೆ ಬಾಕಿ ಇರುವ ಕಾರಣ ಅಧಿಕಾರಿಗಳು ಶಂಕಿತ ಉಗ್ರ ಹುಸೇನ್ ನನ್ನು ಕಸ್ಟಡಿಗೆ ನೀಡುವಂತೆ ಮನವಿ ಮಾಡಿದ್ದರು. ಹೀಗಾಗಿ ನ್ಯಾಯಧೀಶರು ಶಂಕಿತ ಉಗ್ರನನ್ನು 10 ದಿನಗಳ ಕಾಲ ಕಸ್ಟಡಿಗೆ ನೀಡಿದ್ದಾರೆ.
ನ್ಯಾಯಾಧೀಶರಿಗೆ ಎಸಿಪಿ ಧರ್ಮೇಂದ್ರ ನೀಡಿರುವ ಮಾಹಿತಿ ಪ್ರಕಾರ, ಶಂಕಿತ ಉಗ್ರ ಅಖ್ತರ್ ಹುಸೇನ್, ಫೇಸ್ ಬುಕ್,ಟೆಲಿಗ್ರಾಂ ಮೆಸೆಂಬರ್ ಮೂಲಕ ಗ್ರೂಪ್ ಮಾಡಿಕೊಂಡಿದ್ದ. ಈ ಗ್ರೂಪ್ ನಲ್ಲಿ ಐಎಸ್ಐ ಸೇರುವಂತೆ ಪ್ರೇರೇಪಿಸುತ್ತಿದ್ದ. ಸಧ್ಯ ನಾವು ಕೊಲ್ಕತ್ತಾ ಅಸ್ಸಾಂ ಚೆನ್ನೈ ಹೋಗಿ ಪರಿಶೀಲನೆ ನಡೆಸಿದ್ದೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : NavyaShree Rao : ಪೊಲೀಸ್ ವಿಚಾರಣೆಗೆ ಹಾಜರಾಗಿದ ನವ್ಯಶ್ರೀ ರಾವ್..!
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.