ಕ್ಯಾಂಪಸ್ ನಲ್ಲಿಯೇ ನಶೆಯಲ್ಲಿ ತೇಲಾಡುತ್ತಿರುವ ವಿದ್ಯಾರ್ಥಿಗಳು, ರಾಜ್ಯದ ಪ್ರತಿಷ್ಟಿತ ಕಾಲೇಜಿನ ದೃಶ್ಯ

ಇದು ಶಿವಮೊಗ್ಗದ ಪ್ರತಿಷ್ಠಿತ ಕಾಲೇಜು ಕ್ಯಾಂಪಸ್ ನಲ್ಲಿ ಕಂಡು ಬಂದಿರುವ ದೃಶ್ಯ ಎನ್ನಲಾಗಿದೆ. ಜಿಲ್ಲೆಯ ಪ್ರತಿಷ್ಠಿತ ಕಾಲೇಜಿನ ಕ್ಯಾಂಪಸ್ ನಲ್ಲಿ ಕಾಲೇಜಿವ ವಿದ್ಯಾರ್ಥಿಗಳು ಹಾಡಹಗಲೇ ಡ್ರಗ್ಸ್ ಸೇವಿಸಿ, ಗುಂಗಿನ ನಶೆಯಲ್ಲಿ ಒದ್ದಾಡುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Written by - Ranjitha R K | Last Updated : Jul 25, 2022, 09:55 AM IST
  • ಎಲ್ಲಿ ನೋಡಿದರೂ ನಶೆಯಲ್ಲಿ ತೂರಾಡುತ್ತಿರುವ ವಿದ್ಯಾರ್ಥಿಗಳು.
  • ಎರಡು ಹೆಜ್ಜೆ ಇಡುವುದು ಕೂಡಾ ಆ ವಿದ್ಯಾರ್ಥಿಗಳಿಂದ ಸಾಧ್ಯವಾಗುತ್ತಿಲ್ಲ.
  • ಪೋಷಕರನ್ನು ಬೆಚ್ಚಿ ಬೀಳಿಸುವಂತಿದೆ ಘಟನೆ
ಕ್ಯಾಂಪಸ್ ನಲ್ಲಿಯೇ ನಶೆಯಲ್ಲಿ ತೇಲಾಡುತ್ತಿರುವ ವಿದ್ಯಾರ್ಥಿಗಳು, ರಾಜ್ಯದ ಪ್ರತಿಷ್ಟಿತ ಕಾಲೇಜಿನ ದೃಶ್ಯ  title=
drugs in collge campus (file photo)

ಶಿವಮೊಗ್ಗ : ಎಲ್ಲಿ ನೋಡಿದರೂ ನಶೆಯಲ್ಲಿ ತೂರಾಡುತ್ತಿರುವ  ವಿದ್ಯಾರ್ಥಿಗಳು. ಎಲ್ಲಿದ್ದೇವೆ, ಏನು ಮಾಡುತ್ತಿದ್ದೇವೆ ಎನ್ನುವ ಪರಿವೇ ಆ ವಿದ್ಯಾರ್ಥಿಗಳಿಗೆ ಇದ್ದ ಹಾಗೆ ಕಾಣುತ್ತಿಲ್ಲ.  ಎದ್ದು ನಿಂತು ಸರಿಯಾಗಿ ಎರಡು ಹೆಜ್ಜೆ ಇಡುವುದು ಕೂಡಾ ಆ ವಿದ್ಯಾರ್ಥಿಗಳಿಂದ ಸಾಧ್ಯವಾಗುತ್ತಿಲ್ಲ. ಅಷ್ಟರ ಮಟ್ಟಿಗೆ ನಶೆ ಏರಿ ಹೋಗಿದೆ. ಕಾಲೇಜು ಕ್ಯಾಂಪಸ್ ನಲ್ಲಿ ವಿದ್ಯಾರ್ಥಿಗಳು ಈ ರೀತಿ ತೂರಾಡುತ್ತಿದ್ದರೆ,  ಕೆಲವು ವಿದ್ಯಾರ್ಥಿಗಳು ವಿಡಿಯೋ ಮಾಡುತ್ತಿರುವುದು ಗಮನಕ್ಕೆ ಬಂದಿದೆ.   

ಇದು ಶಿವಮೊಗ್ಗದ ಪ್ರತಿಷ್ಠಿತ ಕಾಲೇಜು ಕ್ಯಾಂಪಸ್ ನಲ್ಲಿ ಕಂಡು ಬಂದಿರುವ ದೃಶ್ಯ ಎನ್ನಲಾಗಿದೆ. ಜಿಲ್ಲೆಯ ಪ್ರತಿಷ್ಠಿತ ಕಾಲೇಜಿನ ಕ್ಯಾಂಪಸ್ ನಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಹಾಡಹಗಲೇ ಡ್ರಗ್ಸ್ ಸೇವಿಸಿ, ನಶೆಯಲ್ಲಿ ಒದ್ದಾಡುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ : Suspected Terrorist Arrested: ಬೆಂಗಳೂರಲ್ಲಿ ವಾಸವಿದ್ದ ಶಂಕಿತ ಉಗ್ರ ಸಿಸಿಬಿ ವಶಕ್ಕೆ

ಹೌದು ಕಾಲೇಜು ವಿದ್ಯಾರ್ಥಿಗಳು ಡ್ರಗ್ಸ್ ಸೇವಿಸಿ ಗಾಳಿಯಲ್ಲಿ ತೂರಾಡುತ್ತಿರುವುದು. ನಿಂತು ಹೆಜ್ಜೆ ಹಾಕುವುದಕ್ಕೂ ಆಗದೆ, ನಶೆಯಲ್ಲಿ  ಒದ್ದಾಡುತ್ತಿರುವ ಪರಿ ನೋಡಿದರೆ, ಜಿಲ್ಲೆಯ ಪೊಷಕರು ಆತಂಕ ಪಡುವಂತಾಗಿದೆ. ಈ ವಿದ್ಯಾರ್ಥಿಗಳು ತರಗತಿಗಳು ನಡೆಯುತ್ತಿರುವ ಸಂದರ್ಭದಲ್ಲಿ, ತರಗತಿಗೆ ಹೋಗದೆ ಡ್ರಗ್ಸ್ ಸೇವಿಸಿ, ಕ್ಯಾಂಪಸ್ ನಲ್ಲಿ  ಬಿದ್ದುಕೊಂಡಿದ್ದಾರೆ. ಇದನ್ನು ಸಹಪಾಠಿ ವಿದ್ಯಾರ್ಥಿಗಳು ವಿಡಿಯೋ ಮಾಡಿಕೊಂಡಿದ್ದಾರೆ. 

ಶನಿವಾರ ಈ ಘಟನೆ ನಡೆದಿದೆ ಎನ್ನಲಾಗಿದೆ. ವಿದ್ಯಾರ್ಥಿಗಳ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.  ಶಿಕ್ಷಣ ಸಂಸ್ಥೆಯ  ಹೆಸರಿನ ಟ್ಯಾಗ್ ಲೈನ್ ನಲ್ಲಿ  ವೈರಲ್ ಆಗಿದೆ.

ಇದನ್ನೂ ಓದಿ : Suspected Terrorist Arrested: ಬೆಂಗಳೂರಲ್ಲಿ ವಾಸವಿದ್ದ ಶಂಕಿತ ಉಗ್ರ ಸಿಸಿಬಿ ವಶಕ್ಕೆ

ಈ ವಿದ್ಯಾರ್ಥಿಗಳು ಮೊದಲ ಬಾರಿಗೆ ಡ್ರಗ್ಸ್ ಸೇವಿಸಿರಬಹುದು ಎನ್ನಲಾಗಿದೆ. ಯಾರೋ ಸ್ನೇಹಿತರ ಜೊತೆ ಸೇರಿ ಗಾಂಜಾ ಇಲ್ಲವೇ ಡ್ರಗ್ಸ್ ಸೇವಿಸಿರಬಹುದು ಎಂದು ಹೇಳಲಾಗುತ್ತಿದೆ. ದೀರ್ಘ ಕಾಲದ ವ್ಯಸವಿಗಳಾದಗಿದ್ದರೆ, ಡ್ರಗ್ಸ್ ಸೇವಿಸಲು ನಿರ್ಜನ ಪ್ರದೇಶಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಆದರೆ ಈ ವಿದ್ಯಾರ್ಥಿಗಳು ತರಗತಿಗಳು ನಡೆಯುತ್ತಿರುವ ಸಂದರ್ಭದಲ್ಲಿಯೇ ಡ್ರಗ್ಸ್ ಸೇವಿಸಿದ್ದು, ಇದರ ಹಿಂದೆ ವ್ಯವಸ್ಥಿತ ನೆಟ್ ವರ್ಕ್ ಕೆಲಸ ಮಾಡುತ್ತಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಎಲ್ಲೇ ನಡೆದಿದ್ದರೂ ಪೊಲೀಸರು ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ. ಶಾಲಾ ಕಾಲೇಜು ಕ್ಯಾಂಪಸ್ ಹಾಗು ಹಾಸ್ಟೆಲ್ ಗಳ ಮೇಲೆ ಹದ್ದಿನ ಕಣ್ಣಿಡಬೇಕಿದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News