ಬೆಂಗಳೂರು: ಬರ್ಬರವಾಗಿ ಕೊಚ್ಚಿ ಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾದ ಶವದ ಬೆನ್ನಟ್ಟಿದ  ತಲಘಟ್ಟಪುರ ಕೊಲೆ ಆರೋಪಿಗಳು ಬಂಧಿಸಿದ್ದಾರೆ. ಕೊಲೆಗೆ ಕೊಲೆಯಾದವನ ಹೆಂಡತಿಯೇ ಮಾಸ್ಟರ್ ಮೈಂಡ್ ಎಂಬುದು ಗೊತ್ತಾಗಿದೆ.  ಅನೈತಿಕ ಸಂಬಂಧ ಮುಂದುವರೆಸಲು ಗಂಡ ಅಡ್ಡಿ ಆಗಿದ್ದಕ್ಕೆ ಹೆಂಡತಿಯೇ ಸ್ಕೆಚ್ ಹಾಕಿಸಿದ್ದು ತನಿಖೆ ವೇಳೆ ಬಯಲಾಗಿದೆ.


COMMERCIAL BREAK
SCROLL TO CONTINUE READING

ಕಳೆದ ಜೂನ್ 29ರಂದು ಗೊಟ್ಟಿಗೆರೆ ಪಾಳ್ಯದ ನೈಸ್ ರಸ್ತೆಯ ಫ್ಲೈಓರ್ ಕೆಳಭಾಗದಲ್ಲಿ ಪತ್ತೆಯಾದ ಶವ ಚನ್ನಪಟ್ಟಣ ಮೂಲದ ಅರುಣ್ (43) ಎಂಬುವರದಾಗಿತ್ತು. ಈತನ ಹತ್ಯೆಯ ಹಿಂದಿದ್ದ ಆತನ ಪತ್ನಿ‌ ರಂಜಿತಾ ಹಾಗೂ ಆಕೆಯ ಪ್ರಿಯಕರ ಗಣೇಶ್ ಸಹಿತ ಐವರು ಆರೋಪಿಗಳನ್ನು ಸದ್ಯ ಪೊಲೀಸರು ಬಂಧಿಸಿದ್ದಾರೆ.


ಇದನ್ನೂ ಓದಿ: ಬೃಹತ್‌ ಆಕಾರದ ಮೊಸಳೆ ಹಿಡಿಯಲು ಬುಲ್ಡೋಜರ್ ಬಳಕೆ


6 ವರ್ಷದ ಹಿಂದೆ ರಂಜಿತಾಳನ್ನು ಮದುವೆಯಾಗಿದ್ದ ಅರುಣ್ ಬೆಂಗಳೂರಿನ ಆರ್.ಆರ್.ನಗರದಲ್ಲಿ ಗೌಡ್ರು ಬೀಗರೂಟ ಎಂಬ ಹೆಸರಿನ ಹೋಟೆಲ್ ನಡೆಸುತ್ತಿದ್ದ. ಅದೇ ಹೊಟೇಲಿಗೆ ನೀರು ಹಾಕಲು ಬರುತ್ತಿದ್ದ ಗಣೇಶನೊಂದಿಗೆ ಅರುಣ್ ಪತ್ನಿ ರಂಜಿತಾ ಲವ್ವಿ ಡವ್ವಿ ಶುರುಮಾಡಿಕೊಂಡಿದ್ದಳು. ಇವರ ಕಳ್ಳಾಟ ಅರುಣ್‍ಗೆ  ಗೊತ್ತಾಗುತ್ತಿದ್ದಂತೆ ಆತನನ್ನು ಮುಗಿಸಲು ಸಂಚು ರೂಪಿಸಿದ್ದರು. ಅದರಂತೆ ಹತ್ಯೆಗೆ ಒಂದು ದಿನ ಮೊದಲೇ ರಂಜಿತಾ ತನ್ನ ಹುಟ್ಟೂರು ಮಂಡ್ಯಕ್ಕೆ ತೆರಳಿದ್ದಳು.


ಜೂನ್ 28ರಂದು ರಾತ್ರಿ 11 ಗಂಟೆ ಸುಮಾರಿಗೆ 'ಪಾರ್ಟಿ ಮಾಡೋಣ, ಜೊತೆಗೆ ಉದ್ಯಮಕ್ಕೆ ಸ್ವಲ್ಪ ಹಣ ಕೊಡಿಸುತ್ತೇನೆ ಅಂತಾ ಅರುಣ್‍ನನ್ನು ಗಣೇಶ್ ಕರೆಸಿಕೊಂಡಿದ್ದ. ಅರುಣ್ ಬರುವ ಮುನ್ನವೇ ಆತನ ಹತ್ಯೆಗಾಗಿ ಶಿವಾನಂದ, ದೀಪು ಹಾಗೂ ಶರತ್ ಎಂಬುವವರನ್ನು ಗಣೇಶ್ ರೆಡಿ ಮಾಡಿಕೊಂಡಿದ್ದ. ಅರುಣ್ ಬರುತ್ತಿದ್ದಂತೆ ಆತನ ಕಣ್ಣಿಗೆ ಖಾರದಪುಡಿ ಎರಚಿ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆಗೈದಿದ್ದ ಆರೋಪಿಗಳು, ಆತನ ಶವವನ್ನು ಅಜ್ಞಾತ ಸ್ಥಳದಲ್ಲಿ ಎಸೆದು ಪರಾರಿಯಾಗಿದ್ದರು.


ಇದನ್ನೂ ಓದಿ: ವಿಪಕ್ಷ ನಾಯಕನ ಜೊತೆ ಹೊಸ ರಾಜ್ಯಾಧ್ಯಕ್ಷ ಆಯ್ಕೆಗೂ ಚರ್ಚೆ..?


ಮಾರನೇ ದಿನ ಶವವನ್ನು ಕಂಡ ಸಾರ್ವಜನಿಕರು ತಲಘಟ್ಟಪುರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದಾಗ ಆರಂಭದಲ್ಲಿ ಇದೊಂದು ಹಣದ ವ್ಯವಹಾರದ ಜಿದ್ದಿಗೆ ನಡೆದಿರಬಹುದಾದ ಕೊಲೆ ಎಂದು ಪೊಲೀಸರು ಅನುಮಾನಪಟ್ಟಿದ್ದರು. ಆದರೆ ಮತ್ತಷ್ಟು ತನಿಖೆ ಕೈಗೊಂಡಾಗ ಅಕ್ರಮ ಸಂಬಂಧದ ಕಹಾನಿ ತೆರೆದುಕೊಂಡಿದೆ.‌ ಸದ್ಯ ಗಣೇಶ್, ರಂಜಿತಾ, ಶಿವಾನಂದ, ದೀಪು ಹಾಗೂ ಶರತ್‍ನನ್ನು ತಲಘಟ್ಟಪುರ ಠಾಣಾ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.