Crime News: ನಾಲ್ಕು ವರ್ಷದ ಪುಟ್ಟ ಕಂದಮ್ಮನನ್ನು ಕೊಲೆ ಮಾಡಿ ತಾಯಿ ಸೂಟ್‌ಕೇಸ್‌ನಲ್ಲಿ ಸಾಗಿಸಿದ ಪ್ರಕರಣದ ರಹಸ್ಯ ಬಯಲಾಗಿದೆ. ಗಂಡ, ಹೆಂಡತಿಯ ಜಗಳ ಉಂಡು ಮಲಗುವ ತನಕ ಎಂದು ಹೇಳಲಾಗುತ್ತದೆ. ಆದರಿಲ್ಲಿ, ದಾಂಪತ್ಯ ಕಲಹ ಮುದ್ದು ಕಂದನನ್ನು ಬಲಿ ಪಡೆದಿದೆ. ಸ್ಟಾರ್ಟ್‌ ಅಪ್ ಫೌಂಡರ್‌ ಹಾಗೂ ಸಿಇಒ ಸುಚನಾ ಸೇಠ್‌ ಗೋವಾದ ಹೋಟೆಲ್‌ನಲ್ಲಿ ಮಗುವನ್ನು ಉಸಿರುಗಟ್ಟಿಸಿ ಕೊಲೆ ಗೈದಿರುವ ಶಂಕೆ ವ್ಯಕ್ತವಾಗಿದ್ದು, ಮಗುವಿನ ಕೊರಳಿನ ಭಾಗದಲ್ಲಿ ನರಗಳು ಊದಿ ಕೊಂಡಿರೋದು ಅನುಮಾನ ಇನ್ನಷ್ಟು ಹೆಚ್ಚಾಗುವಂತೆ ಮಾಡಿದೆ.


COMMERCIAL BREAK
SCROLL TO CONTINUE READING

ಕಳೆದ ಜನವರಿ 6ರಂದು ಸುಚೇನಾ ಸೇಠ್ ತನ್ನ ಮಗನ ಜೊತೆ ಗೋವಾಕ್ಕೆ ತೆರಳಿದ್ದರು. ಉತ್ತರ ಗೋವಾದ ಹೋಟೆಲ್‌ನಲ್ಲಿ ತಂಗಿದ್ದ ಸುಚೇನಾ ಸೇಠ್ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.


ಇದನ್ನೂ ಓದಿ- ಗೋವಾದಲ್ಲಿ ನಾಲ್ಕು ವರ್ಷದ ಮಗು ಕೊಂದು ಬ್ಯಾಗ್‌ನಲ್ಲಿ ಶವ ಸಾಗಿಸುತ್ತಿದ್ದ ಮಹಿಳೆ ಚಿತ್ರದುರ್ಗದಲ್ಲಿ ಅರೆಸ್ಟ್!


ಪ್ರಸ್ತುತ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಾಸಿಸುತ್ತಿದ್ದ ಸ್ಟಾರ್ಟ್ ಅಪ್ ಫೌಂಡರ್ ಹಾಗೂ ಸಿಇಒ ಸುಚೇನಾ ಸೇಠ್‌ ಅವರು ಪಶ್ಚಿಮ ಬಂಗಾಳದ ಕೊಲ್ಕತ್ತಾ ಮೂಲದವರು. 2008-09ರಲ್ಲಿ ಸುಚೇನಾ ಅವರು ಬೆಂಗಳೂರಿನಲ್ಲಿ ತಮಿಳುನಾಡಿನ ಟೆಕ್ಕಿ ವೆಂಕಟರಮಣ ಜೊತೆ ವಿವಾಹವಾಗಿದ್ದರು. ಆದರೆ, ಪತಿ ಪತ್ನಿ ನಡುವಿನ ಹೊಂದಾಣಿಕೆ ಸಮಸ್ಯೆಯಿಂದಾಗಿ  ಸುಚೇನಾ ಕಳೆದೆರಡು ವರ್ಷಗಳಿಂದ ಗಂಡನಿಂದ ದೂರವಿದ್ದರು. ಡಿವೋರ್ಸ್ ಗಾಗಿ ಈ ದಂಪತಿ ಕೋರ್ಟ್‌ ಮೆಟ್ಟಿಲೇರಿದ್ದರು. ಡಿವೋರ್ಸ್ ಕೇಸ್ ವಿಚಾರಣೆ ನಡೆಸಿದ ಕೋರ್ಟ್, ಪ್ರತಿ ಭಾನುವಾರ ಮಗುವನ್ನು ನೋಡಲು ತಂದೆಗೆ  ಅವಕಾಶ ನೀಡಿತ್ತು. ಸುಚೇನಾ ಸೇಠ್ ಪತಿ ವೆಂಕಟರಮಣ, ವಿಡಿಯೋ ಕಾಲ್ ಮೂಲಕ ಪ್ರತಿ ಭಾನುವಾರ ಮಗುವನ್ನು ಸಂಪರ್ಕಿಸುತ್ತಿದ್ದರು. ಈ ಕೌಟುಂಬಿಕ ಕಲಹದಿಂದಾಗಿ ಸುಚೇನಾ ಸೇಠ್ ಮಾನಸಿಕ ಒತ್ತಡದಲ್ಲಿದ್ದರು ಎಂದು ಹೇಳಲಾಗುತ್ತಿದೆ. 


ಪೊಲೀಸ್ ಮೂಲಗಳ ಮಾಹಿತಿ ಪ್ರಕಾರ ಸ್ಟಾರ್ಟ್ ಅಪ್ ಸಿಇಒ ಸುಚೇನಾ ಸೇಠ್‌ ಅವರು ತನ್ನ ಮಾಜಿ ಪತಿಯ ಜೊತೆ ಜಗಳದಿಂದ ಮಗು ಕೊಂದಿರುವ ಶಂಕೆ ವ್ಯಕ್ತವಾಗಿದೆ. ಪ್ರತಿ ಭಾನುವಾರ ಮಗುವನ್ನು ನೋಡುವುದಕ್ಕೆ ಸುಚೇನಾ ಸೇಠ್ ಅವರ ಮಾಜಿ ಪತಿಗೆ ಕೋರ್ಟ್ ಅವಕಾಶ ನೀಡಿತ್ತು. ಇದೇ ಕಾರಣಕ್ಕೆ ಬೇಸರಗೊಂಡಿದ್ದ ಸುಚೇನಾ ಸೇಠ್ ಮಗುವನ್ನು ಕೊಂದಿರುವ ಶಂಕೆ ವ್ಯಕ್ತವಾಗಿದೆ. ಗಂಡ, ಹೆಂಡತಿಯ ಜಗಳಕ್ಕೆ ಮಗು ಬಲಿಯಾಗಿರುವುದು ದುರಂತ.‌ ಸುಚೇನಾಳನ್ನು ಬಂಧಿಸಿರುವ ಚಿತ್ರದುರ್ಗ ಪೊಲೀಸರು, ಮಗುವಿನ ಮೃತದೇಹವನ್ನು ಹಿರಿಯೂರು ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಟ್ಟಿದ್ದಾರೆ. ಮಗುವಿನ ಕೊರಳಿನ ಭಾಗದಲ್ಲಿ ನರಗಳು ಊದಿಕೊಂಡಿದ್ದು, ಮಗುವನ್ನ ಕತ್ತು ಹಿಸುಕಿ ಸುಚನಾ ಸೇಠ್ ಸಾಯಿಸಿರುವ ಶಂಕೆ ವ್ಯಕ್ತವಾಗಿದೆ. ನಾಲ್ಕು ವರ್ಷದ ಪುಟಾಣಿ  ಕಂದನನ್ನು ಕೊಲೆ ಮಾಡಿದ ಸುಚೇನಾ ಸೇಠ್ ಕೈ ಕೊಯ್ದುಕೊಂಡು ತಾನು ಸಹ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಬಗ್ಗೆಯೂ ಅನುಮಾನಗಳು ವ್ಯಕ್ತವಾಗಿವೆ.


ಇದನ್ನೂ ಓದಿ- ಕೊಡಗು ಹೆದ್ದಾರಿಯಲ್ಲಿ 61 ಲಕ್ಷ ದರೋಡೆ ಪ್ರಕರಣ: ಕೇವಲ ಹತ್ತು ದಿನಗಳಲ್ಲಿ ದರೋಡೆಕೋರರನ್ನು ಬಂಧಿಸಿದ ಪೊಲೀಸರು


ಶವಾಗಾರಕ್ಕೆ ಭೇಟಿ ನೀಡಿದ ವೈದ್ಯಾಧಿಕಾರಿ ಕುಮಾರ್ ನಾಯಕ್ ಅವರು ಗೋವಾ ಪೊಲೀಸರು ಆಗಮಿಸಿದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಮರಣೋತ್ತರ ಪರೀಕ್ಷೆ ವೇಳೆ ಗೋವಾ ಪೊಲೀಸರು ಇರಬೇಕು ಎಂದಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.