ಬಾಸ್ ಗೊತ್ತಿಲ್ಲ ಎಂದಿದ್ದಕ್ಕೆ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್..!
ಬಾಸ್ ವಿಚಾರವಾಗಿ ಹುಟ್ಟುಹಬ್ಬ ದಿನದಂದೇ ಬರ್ಬರ ಹತ್ಯೆಯಾಗಿದ್ದ ಯುವಕ ಹೇಮಂತ್ ಕುಮಾರ್ ಕೊಲೆ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ.
ಬೆಂಗಳೂರು : ಬಾಸ್ ವಿಚಾರವಾಗಿ ಹುಟ್ಟುಹಬ್ಬ ದಿನದಂದೇ ಬರ್ಬರ ಹತ್ಯೆಯಾಗಿದ್ದ ಯುವಕ ಹೇಮಂತ್ ಕುಮಾರ್ ಕೊಲೆ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ.
ಅಪ್ರಾಪ್ತರನ್ನು ಬಳಸಿಕೊಂಡು ಕೊಲೆ ಮಾಡಿಸಿದರೆ ಕಾನೂನಿನಿಂದ ತಪ್ಪಿಸಿಕೊಳ್ಳಬಹುದು ಅಂತಾ ಪ್ಲ್ಯಾನ್ ಮಾಡಿದ ಕುಖ್ಯಾತ ರೌಡಿಶೀಟರ್ ರಿಜ್ವಾನ್ ಪಾಷಾ ಅಲಿಯಾಸ್ ಕುಳ್ಳು ರಿಜ್ವಾನ್ ಕಾನೂನು ಸಂಘರ್ಷಕ್ಕೆ ಒಳಗಾದವರನ್ನು ಮುಂದಿಟ್ಟು ಹತ್ಯೆ ಮಾಡಿಸಿರುವುದು ತನಿಖೆ ವೇಳೆ ಬಹಿರಂಗವಾಗಿದೆ. ಈ ಪ್ರಕರಣದಲ್ಲಿ ಕುಳ್ಳು ರಿಜ್ವಾನ್ ಸಹಚರ ಹರೀಶ್ ನನ್ನು ಬಂಧಿಸಿರುವ ಪೊಲೀಸರು ಕೃತ್ಯದಲ್ಲಿ ಭಾಗಿಯಾಗಿದ್ದ ಕಾನೂನು ಸಂಘರ್ಷಕ್ಕೆ ಒಳಗಾದ ನಾಲ್ವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕೆಂಪೇಗೌಡನಗರ ಪೊಲೀಸರು ಶಿವಮೊಗ್ಗದಲ್ಲಿ ಕುಳ್ಳು ರಿಜ್ವಾನನ್ನ ಬಂಧಿಸಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಬಾಡಿ ವಾರೆಂಟ್ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುವುದು ಎಂದು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ನಿಮ್ ಬಾಸ್ ಗೊತ್ತಿಲ್ಲ ಎಂದಿದ್ದಕ್ಕೆ ಕೊಂದೇಬಿಟ್ರು : ಕೊಲೆ ಹಿಂದೆ ನಟೋರಿಯಸ್ ರೌಡಿಶೀಟರ್ ಶಿಷ್ಯರು!
ಕೊಲೆ ಆಕಸ್ಮಿಕವಲ್ಲ, ಪ್ಲ್ಯಾನ್ ಮಾಡೇ ಹತ್ಯೆ
ಟಿ.ಗೊಲ್ಲಹಳ್ಳಿ ನಿವಾಸಿ ಹೇಮಂತ್ ಹಾಗೂ ಬಂಧಿತ ಹರೀಶ್ ಗೆ ನಡುವೆ ಮೊದಲೇ ಮಾತಿನ ಚಕಮಕಿ ನಡೆದಿತ್ತು. ಮೃತ ಹೇಮಂತ್ ಕುಳ್ಳು ರಿಜ್ವಾನ್ ಹಾಗೂ ಹರೀಶನ ಕುರಿತು ಕೆಟ್ಟದಾಗಿ ಮಾತನಾಡಿದ್ದ. ಇದನ್ನ ಸಹಿಸದ ಹರೀಶ್, ತಮ್ಮ ಗುರು ರಿಜ್ವಾನ್ ಗಮನಕ್ಕೂ ತಂದಿದ್ದ. ಇದರಿಂದ ಅಕ್ರೋಶಗೊಂಡ ರಿಜ್ವಾನ್ ಹೇಮಂತ್ ನನ್ನ ಮುಗಿಸುವಂತೆ ಹೇಳಿದ್ದ. ತಮ್ಮ ಗುರುವಿನ ಅಣತಿಯಂತೆ ಪ್ಲ್ಯಾನ್ ಮಾಡಿಕೊಂಡ ಹರೀಶ್,ತನ್ನ ಜೊತೆಯಿದ್ದ ನಾಲ್ವರು ಬಾಲಕರನ್ನು ಹತ್ಯೆಗೆ ಸಜ್ಜುಗೊಳಿಸಿದ್ದ. ಅಪ್ರಾಪ್ತರಿಗೆ ಪ್ರಕರಣದಲ್ಲಿ ಆರೋಪ ಸಾಬೀತಾದರೂ ಹೆಚ್ಚು ಶಿಕ್ಷೆಯಾಗುವುದಿಲ್ಲ. ಜೊತೆಗೆ ತಮಗೆ ಏನು ತೊಂದರೆಯಾಗುವುದಿಲ್ಲ ಎಂದು ಭಾವಿಸಿದ್ದ.
ಹುಟ್ಟುಹಬ್ಬದ ದಿನವೇ ಮರ್ಡರ್ ಮಾಡಿದ್ದ ಅಪ್ರಾಪ್ತರು
ಮೃತ ಹೇಮಂತ್ ನಾಲ್ಕು ತಿಂಗಳಿಂದ ಚಾಮರಾಜಪೇಟೆಯಿಂದ ಟಿ.ಗೊಲ್ಲಹಳ್ಲಿಯ ಮನೆಗೆ ಶಿಫ್ಟ್ ಮಾಡಿದ್ದ. ಜುಲೈ 16ರಂದು ಹೇಮಂತ್ ಬರ್ತ್ಡೇ ಸಲುವಾಗಿ ಚಾಮರಾಜಪೇಟೆಯಲ್ಲಿರುವ ಸ್ನೇಹಿತರೊಂದಿಗೆ ಬಂದು ಬಾರ್ ನಲ್ಲಿ ಪಾರ್ಟಿ ಮಾಡಿದ್ದ. ಪಾರ್ಟಿ ಆದ್ಮೇಲೆ ಹೇಮಂತ್ ಹೊರಟಾಗ ಸ್ನೇಹಿತರು ಮನೆ ಸ್ವಲ್ಪ ದೂರ ಇರುವಾಗಲೇ ಡ್ರಾಪ್ ಮಾಡಿದ್ರು. ಇನ್ನೂ ಸ್ಕೆಚ್ ಹಾಕಿ ಹಿಂಬಾಲಿಸಿಕೊಂಡು ಬಂದಿದ್ದ ಆರೋಪಿಗಳು ಡ್ರಾಪ್ ಕೊಡುವ ನೆಪದಲ್ಲಿ ಹೇಮಂತ್ ನನ್ನ ಗಾಡಿ ಹತ್ತಿಸಿಕೊಂಡಿದ್ದರು. ನೈಸ್ ರೋಡ್ ತಲುಪುತ್ತಿದ್ದಂತೆ ನಮ್ಮ ಗುರು ಕುಳ್ಳು ರಿಜ್ವಾನ್ ಗೊತ್ತಿಲ್ವಾ ನಿನಗೆ ಎಂದ ಕ್ಯಾತೆ ತೆಗೆದಿದ್ದರು. ಯಾವ ಗುರು ಗೊತ್ತಿಲ್ಲ ಎಂದು ಹೇಮಂತ್ ಮತ್ತೆ ಜೋರಾಗಿಯೇ ಮಾತನಾಡಿದ್ದ. ಇದರಿಂದ ರೊಚ್ಚಿಗೆದ್ದ ಆರೋಪಿಗಳು ಪೂರ್ವ ಸಂಚಿನಂತೆ ಮಾರಕಾಸ್ತ್ರಗಳಿಂದ ತಲೆಭಾಗಕ್ಕೆ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು. ಮರ್ಡರ್ ಮಾಡುವಾಗ ವಿಡಿಯೋ ರೆಕಾರ್ಡ್ ಮಾಡಿ ಕುಳ್ಳು ರಿಜ್ವಾನ್ ಗೆ ಕಳುಹಿಸಿದ್ದರು ಎಂದು ದಕ್ಷಿಣ ವಿಭಾಗ ಡಿಸಿಪಿ ಲಕ್ಷ್ಮಣ್ ನಿಂಬರಗಿ ಹೇಳಿದ್ದಾರೆ.
ಇದನ್ನೂ ಓದಿ : ಕ್ಯಾಂಪಸ್ ನಲ್ಲಿಯೇ ನಶೆಯಲ್ಲಿ ತೇಲಾಡುತ್ತಿರುವ ವಿದ್ಯಾರ್ಥಿಗಳು, ರಾಜ್ಯದ ಪ್ರತಿಷ್ಟಿತ ಕಾಲೇಜಿನ ದೃಶ್ಯ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.