ಬೆಂಗಳೂರು : 2020ರಲ್ಲಿ ರಾಷ್ಟ್ರಾದ್ಯಂತ ಸದ್ದು ಮಾಡಿದ್ದ ಬಿಟ್ ಕಾಯಿನ್ ಹಗರಣದ ಮತ್ತೆ ಮುನ್ನಲೆಗೆ ಬಂದಿದೆ. ಸದ್ಯ ಸಿಸಿಬಿ ಚಾರ್ಜ್ ಶೀಟ್ ಸಲ್ಲಿಸಿದ್ದ ಪ್ರಕರಣಕ್ಕೆ ಕಾಂಗ್ರೆಸ್ ಸರ್ಕಾರ ಮರು ಜೀವ ನೀಡಿ ಎಸ್‌ಐಟಿ ರಚನೆ ಮಾಡಿದೆ. ತನಿಖೆ ಶುರುವಾಗಿರುವ ಹೊತ್ತಲ್ಲೆ ಜೀ ಕನ್ನಡ ನ್ಯೂಸಲ್ಲಿ ಶ್ರೀಕಿ ಐಷಾರಾಮಿ ಜೀವನ ಹೇಗಿತ್ತು ಎಂಬುದರ ಮಾಹಿತಿ ಕೆದಕಿದೆ.‌ 


COMMERCIAL BREAK
SCROLL TO CONTINUE READING

ಸಿಸಿಬಿ ತನಿಖೆ ವೇಳೆ ಬಯಲಾಗಿದ್ದ ಶ್ರೀಕಿಯ ಐಷಾರಾಮಿ ಜೀವನವನ್ನ ಜೀ ಕನ್ನಡ ನ್ಯೂಸ್ ರಿವಿಲ್ ಮಾಡಿದೆ. ಒಂದಲ್ಲ ಎರಡಲ್ಲ ಮೂರು ವರ್ಷಗಳು ನಗರದ ಪ್ರತಿಷ್ಟಿತ ಹೋಟೆಲ್ ಗಳಲ್ಲೇ  ಶ್ರೀಕಿ ವಾಸ್ತವ್ಯ ಹೂಡಿದ್ದ.‌ ಮನೆಯಲ್ಲಿ ಉಳಿಯದೆ ಬರೀ ಸ್ಟಾರ್ ಹೋಟೆಲ್ ನಲ್ಲೇ ಇದ್ದು ಮಜಾ ಮಾಡುತ್ತಿದ್ದ ಎಂಬುದಕ್ಕೆ ಹೊಟೇಲ್ ಬಿಲ್ ಗಳು ಸಾಕ್ಷಿಯಾಗಿವೆ.


ಇದನ್ನೂ ಓದಿ : ಕೊಬ್ಬರಿಗೆ ಬೆಂಬಲ ಬೆಲೆ ನೀಡುವ ವಿಚಾರ : ಶಿವಲಿಂಗೇಗೌಡ - ಹೆಚ್‌ಡಿಕೆ ನಡುವೆ ವಾಗ್ವಾದ


ಒಂದು ಹೋಟೆಲ್ ಗೆ ಹೋದರೆ ಕನಿಷ್ಟ  ಮೂರು ತಿಂಗಳು ಶ್ರೀಕಿ ಅಲ್ಲೆ ಇರುತ್ತಿದ್ದ. ದಿನಕ್ಕೆ ಹೋಟೆಲ್ ಬಿಲ್, ಊಟದ ಬಿಲ್, ಮಸಾಜ್ ಬಿಲ್ ಎಂದುಕೊಂಡು ಲಕ್ಷಾಂತರ ರೂಪಾಯಿ ಖರ್ಚು ಮಾಡಿರುವುದು ದಾಖಲೆ ಸಮೇತ ಬಯಲಾಗಿದೆ. ಯಾವುದೇ ಹೋಟೆಲ್ ಗೆ ಹೋದರು ಶ್ರೀಕಿ ಆನ್ ಲೈನ್ ಮೂಲಕವೇ ಬಿಲ್ ಕ್ಲೀಯರ್ ಮಾಡುತ್ತಿದ್ದ. ಶ್ರೀಕಿಯ ಹೋಟೆಲ್ ಬಿಲ್ ಹಾಗೂ ಮಸಾಜ್ ಬಿಲ್ ಡಿಟೈಲ್ ಸಹ ಲಭ್ಯವಾಗಿದೆ. ಇನ್ನೂ ಎರಡು ಮೂರು ದಿನಕ್ಕೊಮ್ಮೆ ಶ್ರೀಕಿ ಅಕೌಂಟ್‌ಗೆ  50 ಸಾವಿರ ರೂಪಾಯಿ ಕ್ರೆಡಿಟ್ ಆಗಿದ್ದು ಇದರ ಮೂಲ ಮಾತ್ರ ನಿಗೂಢವಾಗಿದೆ.


ಇದೇ ಹಣದಲ್ಲಿ ಹೋಟೆಲ್ ಬಿಲ್ ಹಾಗೂ ಮಸಾಜ್ ಬಿಲ್ ಕಟ್ಟುತ್ತಿದ್ದ ಶ್ರೀಕಿ, 2019 ರ ಮೇನಿಂದ ಜುಲೈವರೆಗೂ ಮೂರು ತಿಂಗಳಲ್ಲಿ ಹೊಟೇಕ್ ಬಿಲ್ ಅಂತಾ ಲಕ್ಷಾಂತರ ರೂಪಾಯಿ ಪಾವತಿ ಮಾಡಿದ್ದಾನೆ. ಮೂರು ತಿಂಗಳಿಗೆ ಶ್ರೀಕಿ ಖರ್ಚು ಮಾಡಿರುವ ಬರೋಬ್ಬರಿ ಹಣ 25 ಲಕ್ಷ 54 ಸಾವಿರ ರೂಪಾಯಿ. ಹೀಗೆ ಮೂರು ವರ್ಷಕ್ಕೆ ಸರಾಸರಿ ತಗೆದುಕೊಂಡರೆ 7 ಕೋಟಿಗೂ ಅಧಿಕ ಮೊತ್ತದ ಹಣವನ್ನ ಶ್ರೀಕಿ ಹೋಟೆಲ್‌ಗೆ ಸುರಿದಿದ್ದಾನೆ. ಇನ್ನೂ ಎಸ್ಐಟಿ ತನಿಖೆಯಲ್ಲಿ ಶ್ರೀಕಿಯ ಇನ್ನಷ್ಟೂ ಅವತಾರಗಳು ಗೊತ್ತಾಗುವ ಸಾಧ್ಯತೆ ಇದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.