ನವದೆಹಲಿ: ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಅವರಿಗೆ ಕೊಲೆ ಬೆದರಿಕೆಯ ಪತ್ರ ಬಂದಿದ್ದು, ಮುಂಬೈ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ. ಹಿಂದಿಯಲ್ಲಿ ಬರೆಯಲಾದ ಪತ್ರದಲ್ಲಿ ನೇರವಾಗಿ ನಟಿಗೆ ಸ್ವರಾ ಭಾಸ್ಕರ್ ಅವರಿಗೆ ಬೆದರಿಕೆ ಹಾಕಲಾಗಿದೆ. ಪತ್ರದ ಕೊನೆಯಲ್ಲಿ ‘ಇಸ್ ದೇಶ್ ಕೆ ನೌಜವಾನ್’ ಎಂದು ಸಹಿ ಹಾಕಲಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ:  Taliban: ತಾಲಿಬಾನ್‌ನಿಂದ ಪಾಕ್‌ಗೆ ಶಸ್ತ್ರಾಸ್ತ್ರಗಳ ಕಳ್ಳಸಾಗಣೆ!


ಅಧಿಕಾರಿಯೊಬ್ಬರ ಪ್ರಕಾರ, ಮುಂಬೈನ ವರ್ಸೋವಾದಲ್ಲಿರುವ ಅವರ ನಿವಾಸಕ್ಕೆ ಪತ್ರವನ್ನು ಕಳುಹಿಸಲಾಗಿದೆ. ಪತ್ರವನ್ನು ಸ್ವೀಕರಿಸಿದ ನಂತರ, ಸ್ವರಾ ಭಾಸ್ಕರ್ ಎರಡು ದಿನಗಳ ಹಿಂದೆ ವರ್ಸೋವಾ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದರು ಮತ್ತು ಅಪರಿಚಿತ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


ಸಮಾಜವನ್ನು ಕಾಡುತ್ತಿರುವ ಸಾಮಾಜಿಕ-ರಾಜಕೀಯ ಸಮಸ್ಯೆಗಳ ಬಗ್ಗೆ ಸ್ವರಾ ಭಾಸ್ಕರ್ ಸಾಕಷ್ಟು ಬಾರಿ ಧ್ವನಿಯೆತ್ತಿದ್ದಾರೆ. 2017 ರಲ್ಲಿ ಅವರು ಟ್ವೀಟ್ ಒಂದನ್ನು ಪೋಸ್ಟ್ ಮಾಡಿದ್ದರು, "ಸಾವರ್ಕರ್ ಬ್ರಿಟಿಷ್ ಸರ್ಕಾರಕ್ಕೆ ಕ್ಷಮೆಯಾಚಿಸಿದ್ದರು. ಜೈಲಿನಿಂದ ಹೊರಬರಲು ಮನವಿ ಮಾಡಿಕೊಂಡಿದ್ದರು. ಅದು ಖಚಿತವಾಗಿ 'ವೀರ್' ಅಲ್ಲ..." ಎಂದು ಆ ಟ್ವೀಟ್‌ನಲ್ಲಿ ಬರೆದಿದ್ದರು. 2019 ರಲ್ಲಿ, ಅವರು ವಿಡಿಯೋದೊಂದಿಗೆ ವೀರ್‌ ಸಾವರ್ಕರ್‌ ವಿರುದ್ಧ ಮತ್ತೊಂದು ಟ್ವೀಟ್ ಅನ್ನು ಪೋಸ್ಟ್ ಮಾಡಿದ್ದರು. ಇದಕ್ಕೆ ಭಾರಿ ವಿರೋಧ ಸಹ ವ್ಯಕ್ತವಾಗಿತ್ತು.


ಇದನ್ನೂ ಓದಿ:  ಆಲಿಯಾ ಗರ್ಭದಿಂದ ಸುಶಾಂತ್ ಸಿಂಗ್ ಪುನರ್ಜನ್ಮ, ZEE NEWS ಹೆಸರಿನಲ್ಲಿ ಹರಿದಾಡುತ್ತಿದೆ fake news


ಈ ತಿಂಗಳ ಆರಂಭದಲ್ಲಿ, ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಕೊಲೆ ಬೆದರಿಕೆ ಬಂದಿತ್ತು. ದೀಗ ನಟಿ ಸ್ವರಾ ಭಾಸ್ಕರ್‌ ಅವರಿಗೂ ಜೀವ ಬೆದರಿಕೆಯ ಪತ್ರ ಬಂದಿದೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.