ತಾಲಿಬಾನ್‌ನಿಂದ ಪಾಕ್‌ಗೆ ಶಸ್ತ್ರಾಸ್ತ್ರಗಳ ಕಳ್ಳಸಾಗಣೆ! ಅಫ್ಘಾನಿಸ್ತಾನದಲ್ಲಿದ್ದ ಅಮೆರಿಕದ ಆಯುಧಗಳು ಹೋಗಿದ್ದೆಲ್ಲಿ?

ಕಳೆದ ವರ್ಷ, ತಾಲಿಬಾನ್ ಆಕ್ರಮಣದ ನಂತರ ಅಮೆರಿಕ ಸೇನೆ ಅಫ್ಘಾನಿಸ್ತಾನವನ್ನು ತೊರೆದಾಗ, ಅದರ ಅನೇಕ ಅಪಾಯಕಾರಿ ಶಸ್ತ್ರಾಸ್ತ್ರಗಳನ್ನು ಅಲ್ಲಿಯೇ ಬಿಡಲಾಗಿತ್ತು. ಆ ಆಯುಧಗಳು ಅಲ್ಲಿವೆಯೇ ಅಥವಾ ಅವು ಎಲ್ಲೋ ಕಾಣೆಯಾಗಿವೆಯೇ? ಇದೀಗ ಈ ಬಗ್ಗೆ ದೊಡ್ಡ ಮಾಹಿತಿಯೊಂದು ಹೊರಬಿದ್ದಿದೆ.

Written by - Chetana Devarmani | Last Updated : Jun 30, 2022, 10:44 AM IST
  • ತಾಲಿಬಾನ್‌ನಿಂದ ಪಾಕ್‌ಗೆ ಶಸ್ತ್ರಾಸ್ತ್ರಗಳ ಕಳ್ಳಸಾಗಣೆ!
  • ಅಫ್ಘಾನಿಸ್ತಾನದಲ್ಲಿದ್ದ ಅಮೆರಿಕದ ಆಯುಧಗಳು ಹೋಗಿದ್ದೆಲ್ಲಿ?
  • ಇದೀಗ ಈ ಬಗ್ಗೆ ದೊಡ್ಡ ಮಾಹಿತಿಯೊಂದು ಹೊರಬಿದ್ದಿದೆ.
ತಾಲಿಬಾನ್‌ನಿಂದ ಪಾಕ್‌ಗೆ ಶಸ್ತ್ರಾಸ್ತ್ರಗಳ ಕಳ್ಳಸಾಗಣೆ! ಅಫ್ಘಾನಿಸ್ತಾನದಲ್ಲಿದ್ದ ಅಮೆರಿಕದ ಆಯುಧಗಳು ಹೋಗಿದ್ದೆಲ್ಲಿ? title=
ಶಸ್ತ್ರಾಸ್ತ್ರಗಳ ಕಳ್ಳಸಾಗಣೆ

ಕಳೆದ ವರ್ಷ, ತಾಲಿಬಾನ್ ಆಕ್ರಮಣದ ನಂತರ ಅಮೆರಿಕ ಸೇನೆ ಅಫ್ಘಾನಿಸ್ತಾನವನ್ನು ತೊರೆದಾಗ, ಅದರ ಅನೇಕ ಅಪಾಯಕಾರಿ ಶಸ್ತ್ರಾಸ್ತ್ರಗಳನ್ನು ಅಲ್ಲಿಯೇ ಬಿಡಲಾಗಿತ್ತು. ಆ ಆಯುಧಗಳು ಅಲ್ಲಿವೆಯೇ ಅಥವಾ ಅವು ಎಲ್ಲೋ ಕಾಣೆಯಾಗಿವೆಯೇ? ಇದೀಗ ಈ ಬಗ್ಗೆ ದೊಡ್ಡ ಮಾಹಿತಿಯೊಂದು ಹೊರಬಿದ್ದಿದೆ.

ಮಾಧ್ಯಮ ವರದಿಗಳ ಪ್ರಕಾರ, ಅಫ್ಘಾನಿಸ್ತಾನದ ಅಧಿಕಾರವನ್ನು ಆಕ್ರಮಿಸಿಕೊಂಡಿರುವ ತಾಲಿಬಾನ್ ಈಗ ಅಮೆರಿಕದ ಆ ಶಸ್ತ್ರಾಸ್ತ್ರಗಳನ್ನು ರಹಸ್ಯವಾಗಿ ಮಾರಾಟ ಮಾಡುತ್ತಿದೆ ಮತ್ತು ಪಾಕಿಸ್ತಾನವು ಅದರ ದೊಡ್ಡ ಖರೀದಿದಾರನಾಗಿದೆ. ಮೂಲಗಳ ಪ್ರಕಾರ, ಅಮೆರಿಕದ ಈ ವಿನಾಶಕಾರಿ ಆಯುಧಗಳು ಅಫ್ಘಾನಿಸ್ತಾನದ ಜಬುಲ್ ಪ್ರಾಂತ್ಯದ ಮುಕ್ತ ಮಾರುಕಟ್ಟೆಯಲ್ಲಿ ಸುಲಭವಾಗಿ ಮಾರಾಟವಾಗುವುದನ್ನು ಕಾಣಬಹುದು. ಆ ನಂತರ ಈ ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಣೆ ಮೂಲಕ ಪಾಕಿಸ್ತಾನಕ್ಕೆ ತಲುಪಿಸಲಾಗುತ್ತದೆ.

ಇದನ್ನೂ ಓದಿ:  US: ತಂದೆಯ ಬಂದೂಕಿನಿಂದ ಆಟವಾಡುತ್ತಾ ಶೂಟ್ ಮಾಡಿದ 8 ವರ್ಷದ ಬಾಲಕ

ಅಫ್ಘಾನಿಸ್ತಾನದಲ್ಲಿ ಕೆಲಸ ಮಾಡುತ್ತಿರುವ ಮೀಡಿಯಾ ಒಂದರ ಪ್ರಕಾರ, ಅಫ್ಘಾನಿಸ್ತಾನದ ಆಕ್ರಮಣದ ನಂತರ ತಾಲಿಬಾನ್ ಸಾವಿರಾರು ಆಕ್ರಮಣಕಾರಿ ರೈಫಲ್‌ಗಳು, ಬುಲೆಟ್ ಪ್ರೂಫ್ ಜಾಕೆಟ್‌ಗಳು, ಹೆಲ್ಮೆಟ್‌ಗಳು, ಮೆಷಿನ್ ಗನ್‌ಗಳು ಮತ್ತು ಅಲ್ಲಿನ ಸರ್ಕಾರಿ ಸೇನೆಯ ಇತರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದೆ. ಈ ಶಸ್ತ್ರಾಸ್ತ್ರಗಳನ್ನು ಈಗ ಜಬುಲ್ ಪ್ರಾಂತ್ಯದ ಮಾರುಕಟ್ಟೆಯಲ್ಲಿ ಮುಕ್ತವಾಗಿ ಮಾರಲಾಗುತ್ತಿದೆ. ಅನೇಕ ತಾಲಿಬಾನ್ ಕಮಾಂಡರ್‌ಗಳು ಈ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುತ್ತಿದ್ದಾರೆ. ಅಲ್ಲಿಂದ ಈ ಶಸ್ತ್ರಾಸ್ತ್ರಗಳನ್ನು ಖರೀದಿಸಿ ಪಾಕಿಸ್ತಾನಕ್ಕೆ ಕಳುಹಿಸಲಾಗುತ್ತದೆ ಎನ್ನಲಾಗ್ತಿದೆ.

ದಕ್ಷಿಣ ಕಂದಹಾರ್ ಪ್ರಾಂತ್ಯದಲ್ಲಿ (ತಾಲಿಬಾನ್) ಹೋರಾಟಗಾರರು ಆಕ್ರಮಣಕಾರಿ ರೈಫಲ್‌ಗಳು ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಶಸ್ತ್ರಾಸ್ತ್ರಗಳನ್ನು ಪಾಕಿಸ್ತಾನಕ್ಕೆ ಕಳ್ಳಸಾಗಣೆ ಮಾಡಲಾಗುತ್ತಿತ್ತು ಎಂದು ತಿಳಿದುಬಂದಿದೆ. ವಶಪಡಿಸಿಕೊಂಡಿರುವ ಶಸ್ತ್ರಾಸ್ತ್ರಗಳಲ್ಲಿ 6 ಎಕೆ-47 ರೈಫಲ್‌ಗಳು, ಸಾವಿರಾರು ಬುಲೆಟ್‌ಗಳು ಮತ್ತು 19 ರಾಕೆಟ್ ಲಾಂಚರ್‌ಗಳು ಸೇರಿವೆ. ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ ಎಂದು ತಾಲಿಬಾನ್ ಹಿರಿಯ ಪೊಲೀಸ್ ಅಧಿಕಾರಿ ಮುಲ್ಲಾ ಅಬ್ದುಲ್ ಘನಿ ಹಕ್ಬೀನ್ ತಿಳಿಸಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಖಾಸಗಿ ಜನರನ್ನು ತಲುಪಿದ ಶಸ್ತ್ರಾಸ್ತ್ರಗಳನ್ನು ರಾಜ್ಯದ ಖಜಾನೆಗೆ ಮರಳಿ ಪಡೆಯಲು ಪ್ರಯತ್ನಿಸುತ್ತಿದ್ದೇವೆ ಎಂದು ತಾಲಿಬಾನ್ ಕಮಾಂಡರ್ ಹೇಳಿದ್ದಾರೆ. ಹಾಗಾಗಿ ದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕು. ಅವುಗಳನ್ನು ಅಕ್ರಮಗಳಲ್ಲಿ ಬಳಸಿಕೊಳ್ಳಬಾರದು. ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳನ್ನು ತಲುಪಿಸುವಲ್ಲಿ ತಾಲಿಬಾನ್ ಕಮಾಂಡರ್‌ಗಳ ಕೈವಾಡವಿಲ್ಲ ಎಂದು ಮುಲ್ಲಾ ಅಬ್ದುಲ್ ಘನಿ ಹೇಳಿದ್ದಾರೆ. ಈ ಶಸ್ತ್ರಾಸ್ತ್ರಗಳು ಅಫ್ಘಾನಿಸ್ತಾನದ ಆಸ್ತಿಯಾಗಿದ್ದು, ಯಾವುದೇ ಸಂದರ್ಭದಲ್ಲೂ ಅವುಗಳನ್ನು ದೇಶದಿಂದ ಹೊರಗೆ ತೆಗೆದುಕೊಂಡು ಹೋಗಲು ಬಿಡುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ:  ವಿಷಕಾರಿ ಅನಿಲ ಸೋರಿಕೆ: 13 ಮಂದಿ ದುರ್ಮರಣ.. ನೂರಾರು ಜನರಿಗೆ ಗಾಯ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News