ಬೆಂಗಳೂರು: ಇದು ಖಾಸಗಿ ಕಾಲೇಜು ವಿದ್ಯಾರ್ಥಿಯೊಬ್ಬನ ಟ್ರೈ ಆ್ಯಂಗಲ್ ಲವ್ ಸ್ಟೋರಿ. ಬೇಡ ಅಂದ್ರೂ ಯುವತಿ ಹಿಂದೆ ಬಿದ್ದಿದ್ದ ವಿಚಾರ ಗ್ಯಾಂಗ್ ವೊಂದರ ಕೈಗೆ ಸೇರಿತ್ತು. ಮೊದಲೇ ರಕ್ತದ ಕಲೆ ಕೈಗೆ ಹಚ್ಚಿಕೊಂಡಿದ್ದ ಯುವಕರು ಅಮಾಯಕನೊಬ್ಬನನ್ನ ಕೊಲೆ ಮಾಡಿದ್ದಾರೆ. ಟೀ ಕುಡಿಯೋಕೆ ನಿಂತಿದ್ದವನನ್ನ ಕರೆದಿದ್ದವರು ಕೊಂದು ಬಿಟ್ಟಿದ್ದಾರೆ. ಇವರೆಲ್ಲಾ 20-21ವರ್ಷದ ಹುಡುಗರು.


COMMERCIAL BREAK
SCROLL TO CONTINUE READING

ಕಾಲೇಜು ಓದುತ್ತಲೇ ರಕ್ತ ಕೈಗೆ ಹತ್ತಿಸಿಕೊಂಡಿದ್ದರು. ಓದಿನಲ್ಲಿ ಡ್ರಾಪೌಟ್ ಆಗಿ ಪೋಲಿ ಸುತ್ತಿದ್ರು. ಹೀಗಿದ್ದಾಗ ಅದೊಂದು ಯುವತಿಯ ವಿಚಾರ ಕಿವಿಗೆ ಬಿದ್ದಿತ್ತು. ಗೆಳೆಯನ ಹುಡುಗಿ ಹಿಂದೆ ಸುತ್ತುತ್ತಿದ್ದ ಯುವಕನ ಬೆನ್ನಟ್ಟಿದ್ರು. ಟ್ರೈ ಆ್ಯಂಗಲ್ ಲವ್ ಸ್ಟೋರಿಯೊಂದಕ್ಕೆ ಕನೆಕ್ಟೇ ಇಲ್ಲದ ಅಮಾಯಕನೊಬ್ಬನನ್ನ ಕೊಲೆ ಮಾಡಿದ್ದ ಆರು ಜನ ಹಂತಕರನ್ನ ಹೆಣ್ಣೂರು ಮತ್ತು ಬಾಣಸವಾಡಿ ಪೊಲೀಸರು ಸದ್ಯ ಬಂಧಿಸಿದ್ದಾರೆ. 


ಕಳೆದೆರಡು ದಿನದ ಹಿಂದೆ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ಖಾಸಗಿ ಕಾಲೇಜು ವಿದ್ಯಾರ್ಥಿ ಕೇಸ್. ಕಾರ್ತಿಕ್, ಅಭಿಷೇಕ್, ನೆಲ್ಸನ್, ರಾಕಿ, ಡ್ಯಾನಿಯಲ್, ಶ್ರಿಕಾಂತ್ ಕೊಲೆ ಆರೋಪಿಗಳು. ಈ ಸಂಪೂರ್ಣ ಕೊಲೆ ಕೇಸ್ ನ ರುವಾರಿ ಶ್ರೀಕಾಂತ್. ಈತನ ಹುಡುಗಿಯ ಟ್ರೈ ಆ್ಯಂಗಲ್ ಲವ್ ಸ್ಟೋರಿ ಕೊಲೆಯವರೆಗೆ ತಂದು ನಿಲ್ಲಿಸಿದೆ. 


ಇದನ್ನೂ ಓದಿ- OMG: ರೀಲ್ಸ್ ಹುಚ್ಚು, ಐಫೋನ್ ಖರೀದಿಸಲು ಕರುಳ ಕುಡಿಯನ್ನೇ ಮಾರಿದ ದಂಪತಿ!


ಶ್ರೀಕಾಂತ್ ಯುವತಿಯೊಬ್ಬಳನ್ನ ಲವ್ ಮಾಡುತ್ತಿದ್ದ.. ಆದರೆ ಅದೇ ಯುವತಿಯ ಹಿಂದೆ ಕೊಲೆಯಾದ ಮಾರ್ವೇಶ್ ಗೆಳೆಯ ಬಿದ್ದಿದ್ದ. ಪ್ರೀತ್ಸು ಪ್ರೀತ್ಸು ಅಂತಾ ಕಾಟ ಕೊಡುತ್ತಿದ್ದ. ಈ ವಿಚಾರ ಯಾವಾಗ ಶ್ರೀಕಾಂತ್ ಕಿವಿಗೆ ಬಿತ್ತೋ ತನ್ನ ಹುಡುಗಿ ಹಿಂದೆ ಬಿದ್ದವನ ಹುಡುಕಾಟಕ್ಕೆ ನಿಂತಿದ್ದ.. ಆಗ ಸಿಕ್ಕಿದ್ದು ಅವನ ಗೆಳೆಯ ಮಾರ್ವೇಶ್. ಕಾಲೇಜು ಬಳಿ ಮೊನ್ನೆ ಮಧ್ಯಾಹ್ನ ಟೀ ಕುಡಿಯುತ್ತಿದ್ದವನ ಬಳಿ ಶ್ರೀಕಾಂತ್ ತನ್ನ ಗೆಳೆಯ ಆರೋಪಿ ಡ್ಯಾನಿಯಲ್ ಮತ್ತು ರಾಕಿಯನ್ನ ಕಳಿಸಿದ್ದ. ಟೀ ಕುಡಿಯೋಕೆ ನಿಂತಿದ್ದವನ್ನ ಮಾತಾಡಬೇಕು ಬಾ ಅಂತಾ ಕರೆದೊಯ್ದಿದ್ದವರು ಒಪ್ಪಿಸಿದ್ದು ಕಾರ್ತಿಕ್ ಆ್ಯಂಡ್ ಗ್ಯಾಂಗ್ ಗೆ. ಅಷ್ಟೇ ಮಾರ್ವೇಶ್ ಗೆಳೆಯನ ಪತ್ತೆಗೆ ಈತನ ಬಾಯ್ಬಿಡಿಸಲು ಹೊಡೆದಿದ್ದ ಆರೋಪಿಗಳು ಆತನ ಕೊಲೆ ಮಾಡಿದ್ದಾರೆ. 


ಆರೋಪಿಗಳಲ್ಲಿ ಕಾರ್ತಿಕ್, ನೆಲ್ಸನ್, ಅಭಿಷೇಕ್ ಈ ಮೂವರೂ ಕಾಲೇಜ್ ಡ್ರಾಪೌಟ್.. ಬಿಕಾಂ ಓದುವಾಗಲೇ ಅಪರಾಧ  ಕೊಲೆಯತ್ನ ಕೇಸ್ ಗಳಲ್ಲಿ ಭಾಗಿಯಾಗಿದ್ರು.. ಕಾರ್ತಿಕ್ ಮೇಲೆ ರಾಮಮೂರ್ತಿ ನಗರ ಸ್ಟೇಷನ್ ನಲ್ಲಿ ರೌಡಿಶೀಟರ್ ಕೂಡ ಓಪನ್ ಆಗಿತ್ತು.. ಹೀಗಿರೋವಾಗ ಶ್ರೀಕಾಂತ್ ತನ್ನ ಲವರ್ ಹಿಂದೆ ಬೇರೊಬ್ಬ ಬಿದ್ದಿದ್ದ ವಿಚಾರ ಇವರ ಕಿವಿಗೆ ಹಾಕಿದ್ದ.. ಆತ ಸಿಗದೇ ಮಾರ್ವೇಶ್ ನನ್ನ ಕರೆದು ಕರೆಸಲು ಯತ್ನಿಸಿದ್ರು.. ಆದರೆ ಮಾರ್ವೇಶ್ ಕರೆ ಮಾಡಿದಾಗ ಆತನ ಗೆಳೆಯ ಕರೆ ರಿಸೀವ್ ಮಾಡಿರಲಿಲ್ಲ. ನಂತರ ಪೈಪ್ ನಿಂದ ಹೊಡೆದು ಕೊಂದುಬಿಟ್ಟಿದ್ದಾರೆ.‌


ಇದನ್ನೂ ಓದಿ- ಪೋಷಕರೇ ಹುಷಾರ್! ರಾಜ್ಯದ ಈ ಭಾಗದಲ್ಲಿ ಸಕ್ರಿಯವಾಗಿದೆ ಮಕ್ಕಳ ಅಪಹರಣಕಾರರ ಗ್ಯಾಂಗ್!


ಸದ್ಯ ಅಮಾಯಕನೊಬ್ಬನನ್ನ ಕೊಲೆ ಮಾಡಿದ ಎಲ್ಲಾ ಆರೋಪಿಗಳನ್ನ ಬಂಧಿಸಿರುವ ಪೊಲೀಸರ ಕಸ್ಟಡಿಗೆ ಪಡೆದಿದ್ದಾರೆ. ಕೇಸ್ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಆದರೆ   ಕೊಲೆಯಾದ ಮಾರ್ವೇಶ್  ಯಾರದ್ದೋ ತಪ್ಪಿಗೆ  ಮತ್ಯಾರಿಗೋ ಶಿಕ್ಷೆ ಎಂಬತೇ ಜೀವ ಕಳೆದುಕೊಂಡಿರುವುದು ದುರಂತವೇ ಸರಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.