ರಾಜ್ಯ ಹೆದ್ದಾರಿಯಲ್ಲಿ ಹೊತ್ತಿ ಉರಿದ ಕಾರ್: ಚಾಲಕ ಸಜೀವ ದಹನ
ಸುಟ್ಟುಕರಕಲಾದ ಸ್ಥಿತಿಯಲ್ಲಿ ಕಾರ್ ಚಾಲಕನ ಮೂಳೆಗಳು ಪತ್ತೆಯಾಗಿವೆ. ಇನ್ನೂ ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಸ್ಥಳಕ್ಕೆ ಗುಂಪುಗುಂಪಾಗಿ ಆಗಮಿಸಲು ಆರಂಭಿಸಿದ್ರು. ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ರು
Criem News: ಆತ ಸೌಮ್ಯ ಸ್ವಭಾವದ ವ್ಯಕ್ತಿ. ಪಟ್ಟಣದಲ್ಲಿ ಉದ್ಯಮಿಯಾಗಿಯೂ ಗುರುತಿಸಿಕೊಂಡಿದ್ದ. ಕಾಂಗ್ರೆಸ್ ಕಾರ್ಯಕರ್ತನಾಗಿ ಜನಮನ್ನಣೆಯನ್ನೂ ಸಹ ಗಳಿಸಿದ್ದ. ಆದ್ರೆ ನಿನ್ನೆ ಮಧ್ಯರಾತ್ರಿ ಬೆಳಗಾವಿಯಿಂದ ಚಿಕ್ಕೋಡಿಗೆ ಆಗಮಿಸುತ್ತಿದ್ದಾಗ ಜೈನಾಪುರ ಗ್ರಾಮದ ಬಳಿ ಆತ ಚಲಾಯಿಸುತ್ತಿದ್ದ ಕಾರ್ ಧಗಧಗನೆ ಹೊತ್ತಿ ಉರಿದು ಸಜೀವ ದಹನವಾಗಿದ್ದಾನೆ. ಇದು ಅಪಘಾತವೋ ಅಥವಾ ಕೊಲೆಯೋ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಚಿಕ್ಕೋಡಿ - ಬೆಳಗಾವಿ ರಾಜ್ಯ ಹೆದ್ದಾರಿಯಲ್ಲಿ ಕಾರೊಂದು ಹೊತ್ತಿ ಉರಿದಿರುವ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಜೈನಾಪುರ ಗ್ರಾಮದ ಹೊರವಲಯದಲ್ಲಿ ದುರ್ಘಟನೆ ಜರುಗಿದೆ. ಮಂಗಳವಾರ ಮಧ್ಯರಾತ್ರಿ ಅಂದಾಜು 1 ಗಂಟೆಗೆ ಈ ಘಟನೆ ಜರುಗಿದೆ. ಮೃತನನ್ನು ಚಿಕ್ಕೋಡಿ ಪಟ್ಟಣದ ಮುಲ್ಲಾ ಪ್ಲಾಟ್ ನಿವಾಸಿ ಪೈರೋಜ್ ಬಡಗಾಂವ ಎನ್ನಲಾಗ್ತಿದೆ. ಕಾರ್ ಹೊತ್ತಿದ್ದ ಬೆಂಕಿಯ ತೀವ್ರತೆಗೆ ಚಾಲಕ ಸಜೀವ ದಹನವಾಗಿದ್ದಾನೆ. ಕಾರು ಸಂಪೂರ್ಣ ಸುಟ್ಟು ಕರಕಲಾದ ಹಿನ್ನೆಲೆ ಮೃತನ ಗುರುತು ಕೂಡ ಸಿಗದಂತಾಗಿದೆ. ಕಾರ್ ಚೆಸ್ಸಿ ನಂಬರ್ ಮುಖಾಂತರ ಕಾರ್ ಮಾಲೀಕನ ಪತ್ತೆಗೆ ಪೊಲೀಸ್ರು ಮುಂದಾಗಿದ್ದಾರೆ.
ಇದನ್ನೂ ಓದಿ- ಆಟೋ ವಿಚಾರಕ್ಕೆ ಮೂವರು ಮಹಿಳೆಯರಿಂದ ಹಲ್ಲೆ: ವ್ಯಕ್ತಿ ಸಾವು!
ಸುಟ್ಟುಕರಕಲಾದ ಸ್ಥಿತಿಯಲ್ಲಿ ಕಾರ್ ಚಾಲಕನ ಮೂಳೆಗಳು ಪತ್ತೆಯಾಗಿವೆ. ಇನ್ನೂ ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಸ್ಥಳಕ್ಕೆ ಗುಂಪುಗುಂಪಾಗಿ ಆಗಮಿಸಲು ಆರಂಭಿಸಿದ್ರು. ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಇನ್ನೂ ಸ್ಥಳಕ್ಕೆ ಎಫ್‌ಎಸ್ಎಲ್ ತಂಡದವರು ಆಗಮಿಸಿ ಕಾರ್‌ಗೆ ಬೆಂಕಿ ಹತ್ತಿರುವ ಬಗ್ಗೆ ಪರೀಕ್ಷೆ ನಡೆಸಿದ್ರು. ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮೃತ ಪೈರೋಜ್ ಚಿಕ್ಕೋಡಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತನಾಗಿಯೂ ಗುರುತಿಸಿಕೊಂಡಿದ್ದ. ಕಾರ್ ಅಪಘಾತದ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ವಿಧಾನ ಪರಿಷತ್ ಸದಸ್ಯ ಪ್ರಕಾಶ್ ಹುಕ್ಕೇರಿ ಭೇಟಿ ನೀಡಿದ್ರು. ಸ್ಥಳಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪ್ರಕಾಶ ಹುಕ್ಕೇರಿ ಪೊಲೀಸರು ತರಾಟೆಗೆ ತೆಗೆದುಕೊಂಡ್ರು. ಇತ್ತಿಚೇಗೆ ಪಟ್ಟಣದಲ್ಲಿ ಕಳ್ಳತನ ಸೇರಿದಂತೆ ಕ್ರೈಂ ರೇಟ್ ಜಾಸ್ತಿ ಆಗ್ತಿದೆ. ಪೊಲೀಸರು ನೀವೇನು ಮಾಡ್ತಿದ್ದೀರಿ ಎಂದು ಪ್ರಶ್ನಿಸಿದ್ರು. ರಾಜ್ಯ ಹೆದ್ದಾರಿಯಲ್ಲಿಯೇ ಇಂತಹ ದುರ್ಘಟನೆ ಜರುಗಿದೆ. ಇದೆಲ್ಲಾ ಆಗಲು ಹೇಗೆ ಸಾದ್ಯವೆಂದು ಪೊಲೀಸರ ವಿರುದ್ಧ ಪ್ರಕಾಶ ಹುಕ್ಕೇರಿ ತೀವ್ರ ಅಸಮಾಧಾನ ಹೊರಹಾಕಿದ್ರು. ಇದು ಕಾರ್ ಅಪಘಾತವೋ ಅಥವಾ ಕೊಲೆಯೋ ಎಂಬುದು ತಿಳಿಯುತ್ತಿಲ್ಲ. ಈ ಪ್ರಕರಣವನ್ನು ಸಿಬಿಐ ಅಥವಾ ಸಿಒಡಿಗೆ ವರ್ಗಾವಣೆ ಮಾಡಿ. ಬೇಕಾದ್ರೆ ನಾನು ಸಿಎಂ ಜತೆ ಮಾತನಾಡುತ್ತೇನೆ ಎಂದು ತಿಳಿಸಿದ್ರು. ಕಾರ್ ಅಪಘಾತದ ಬಗ್ಗೆ ಪ್ರಕಾಶ ಹುಕ್ಕೇರಿ ಅನುಮಾನ ವ್ಯಕ್ತಪಡಿಸಿದ್ರು.
ಇದನ್ನೂ ಓದಿ- Fake ₹500 notes: ₹500 ಮುಖಬೆಲೆಯ ನಕಲಿ ನೋಟಿನಲ್ಲಿ ಗಾಂಧೀಜಿ ಬದಲು ನಟ ಅನುಪಮ್ ಖೇರ್ ಫೋಟೊ!
ಒಟ್ಟಿನಲ್ಲಿ ರಾಜಕೀಯವಾಗಿ ಬೆಳೆಯಬೇಕೆಂಬ ಆಸೆ ಇಟ್ಟುಕೊಂಡಿದ್ದ ಪೈರೋಜ್ ಮೃತಪಟ್ಟಿರುವುದು ದುರಂತ. ಇದು ಕೊಲೆಯೋ ಅಥವಾ ಅಪಘಾತವೋ ಎಂಬುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬರಬೇಕಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.