ಹಣ ಕೊಟ್ಟರೆ ಇಲ್ಲಿ ಸಿಗುತ್ತೆ ಫೇಕ್ ಮಾರ್ಕ್ಸ್ ಕಾರ್ಡ್: ಖಾಸಗಿ ಸಂಸ್ಥೆಯ ದಂಧೆ ಬಯಲಿಗೆಳೆದ ಸಿಸಿಬಿ
ಇತ್ತೀಚೆಗೆ ಯುವಕನೋರ್ವನನ್ನ ಸಂಪರ್ಕಿಸಿದ ಆರೋಪಿಗಳು ಪರೀಕ್ಷೆಯಿಲ್ಲದೆ ಡಿಗ್ರಿ ಮಾರ್ಕ್ಸ್ ಕಾರ್ಡ್ ಬೇಕಾದರೆ ಒಂದು ಲಕ್ಷ ರೂಪಾಯಿ ಕೊಡು ಎಂದಿದ್ದರು. ಇದರಂತೆ ಆರೋಪಿಗಳು ಯುವಕನ ವಾಟ್ಸಾಪ್ ನಂಬರ್ ಗೆ ಫೇಕ್ ಮಾರ್ಕ್ಸ್ ಕಾರ್ಡ್ ಕಳುಹಿಸಿದ್ದರು. ಇದರಿಂದ ಅನುಮಾನಗೊಂಡ ಯುವಕ ಸೈಬರ್ ಕ್ರೈಂ ಪೊಲೀಸರಿಗೆ ನೀಡಿದ್ದನು.
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ನಾಯಿಕೊಡೆಗಳಂತೆ ನಕಲಿ ಅಂಕಪಟ್ಟಿ ಜಾಲ ಬೆಳೆಯುತ್ತಿವೆ. ಹಣ ಕೊಟ್ಟರೆ ಪರೀಕ್ಷೆ ಬರೆಸದೆ ನಕಲಿ ಮಾರ್ಕ್ಸ್ ಕಾರ್ಡ್ ನೀಡುವ ದಂಧೆ ಸಕ್ರಿಯವಾಗಿದೆ. ಇದಕ್ಕೆ ಪೂರಕವಾಗಿದ್ದ ಖಾಸಗಿ ಇನ್ ಸ್ಟಿಟ್ಯೂಟ್ ಮೇಲೆ ದಾಳಿ ನಡೆಸಿ ಅಕ್ರಮ ಜಾಲವನ್ನ ಸಿಸಿಬಿ ಅಧಿಕಾರಿಗಳು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.
ಅಸಲಿ ಎಂಬಂತೆ ಬಿಂಬಿಸಿ ಪಿಯುಸಿ, ಪದವಿ ಸೇರಿ ವಿವಿಧ ರೀತಿಯ ನಕಲಿ ಅಂಕಪಟ್ಟಿಗಳನ್ನು ಸಿದ್ಧಪಡಿಸಿ ಲಕ್ಷಾಂತರ ರೂಪಾಯಿ ಮಾರಾಟ ಮಾಡುತ್ತಿದ್ದ ವೆಂಕಟೇಶ್ವರ ಇನ್ ಸ್ಟಿಟ್ಯೂಟ್ ಸಂಸ್ಥೆಯ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕಳೆದ ಐದು ವರ್ಷಗಳಿಂದ ವಿಎಸ್ಎಸ್ ಸಂಸ್ಥೆಯ ವೆಬ್ ಸೈಟ್ ಕಾರ್ಯನಿರ್ವಹಿಸುತ್ತಿದ್ದು, ಈ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಕಿಶೋರ್, ಶಾರದಾ, ಶಿಲ್ಪ ಹಾಗೂ ರಾಜಣ್ಣ ಎಂಬುವರನ್ನು ಬಂಧಿಸಿ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ, ಅರುಣಾಚಲ ಪ್ರದೇಶ, ಹಿಮಾಚಲ ಪ್ರದೇಶ, ಸಿಕ್ಕಿಂ, ಪಶ್ಚಿಮ ಬಂಗಾಳ ಸೇರಿದಂತೆ 20ಕ್ಕೂ ಹೆಚ್ಚು ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಹೆಸರಿನ 1 ಸಾವಿರಕ್ಕೂ ಹೆಚ್ಚು ನಕಲಿ ಅಂಕಪಟ್ಟಿ ಹಾಗೂ 70ಕ್ಕೂ ಸೀಲು, ಹಾರ್ಡ್ ಡಿಸ್ಕ್, ಪ್ರಿಂಟರ್ ಹಾಗೂ ಮೊಬೈಲ್ ಗಳನ್ನ ಜಪ್ತಿ ಮಾಡಿಕೊಳ್ಳಲಾಗಿದೆ.
ಇದನ್ನೂ ಓದಿ- ಗುಜರಾತ್ ಚುನಾವಣೆ ಕರ್ನಾಟಕ ಚುನಾವಣೆ ಮೇಲೂ ಪ್ರಭಾವ ಬೀರುತ್ತೆ- ಶಾಸಕ ಅರವಿಂದ್ ಬೆಲ್ಲದ್
ಕಳೆದ ಐದು ವರ್ಷಗಳಿಂದ ವಿಎಸ್ ಎಸ್ ಇನ್‌ಸ್ಟಿಟ್ಯೂಟ್ ಕಾರ್ಯನಿರ್ವಹಿಸುತ್ತಿದ್ದು ಮಹಾಲಕ್ಷ್ಮೀ ಲೇಔಟ್ ಸೇರಿ ಮೂರು ಕಡೆಗಳಲ್ಲಿ ಕಚೇರಿಗಳನ್ನ ತೆರೆದು ಆನ್ ಲೈನ್ ನಲ್ಲಿ ಮುಖಾಂತರ ಜಾಹೀರಾತು ನೀಡುತಿತ್ತು. ಮಾರ್ಕ್ಸ್ ಕಾರ್ಡ್ ಅಗತ್ಯವಿರೋರನ್ನ ಸಂಪರ್ಕಿಸುತ್ತಿದ್ದ ಆರೋಪಿಗಳು ಹಣ ನೀಡಿದ ಆಭ್ಯರ್ಥಿಗಳಿಗೆ ರಾಜ್ಯ-ಅಂತರಾಜ್ಯ ವಿವಿಗಳ ಮಾರ್ಕ್ಸ್ ಕಾರ್ಡ್ ಗಳನ್ನ ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದರು.
ಇದನ್ನೂ ಓದಿ- ಡಾ.ಬಿ.ಆರ್.ಅಂಬೇಡ್ಕರ್ 66ನೇ ಪರಿನಿಬ್ಬಾಣ: ನ್ಯಾಷನಲ್ ಕಾಲೇಜಿನಲ್ಲಿ ಬೃಹತ್ ಸಮಾವೇಶ
ಇತ್ತೀಚೆಗೆ ಯುವಕನೋರ್ವನನ್ನ ಸಂಪರ್ಕಿಸಿದ ಆರೋಪಿಗಳು ಪರೀಕ್ಷೆಯಿಲ್ಲದೆ ಡಿಗ್ರಿ ಮಾರ್ಕ್ಸ್ ಕಾರ್ಡ್ ಬೇಕಾದರೆ ಒಂದು ಲಕ್ಷ ರೂಪಾಯಿ ಕೊಡು ಎಂದಿದ್ದರು. ಇದರಂತೆ ಆರೋಪಿಗಳು ಯುವಕನ ವಾಟ್ಸಾಪ್ ನಂಬರ್ ಗೆ ಫೇಕ್ ಮಾರ್ಕ್ಸ್ ಕಾರ್ಡ್ ಕಳುಹಿಸಿದ್ದರು. ಇದರಿಂದ ಅನುಮಾನಗೊಂಡ ಯುವಕ ಸೈಬರ್ ಕ್ರೈಂ ಪೊಲೀಸರಿಗೆ ನೀಡಿದ ದೂರು ಆಧರಿಸಿ ಮಹಾಲಕ್ಷ್ಮೀ ಲೇಔಟ್ ನ ಕೇಂದ್ರ ಕಚೇರಿ ಸೇರಿ ಮೂರು ಕಚೇರಿಗಳ ಮೇಲೆ ದಾಳಿ ನಡೆಸಿದಾಗ ಅಕ್ರಮ ಪತ್ತೆಯಾಗಿದೆ.
ಪ್ರತಿಷ್ಠಿತ ವಿವಿಗಳು, ಎಸ್ಸೆಸ್ಸೆಲ್ಸಿ, ಪಿಯುಸಿ ಇಂಜಿನಿಯರಿಂಗ್, ಬಿಬಿಎಂ ಸೇರಿ ಪದವಿ ಅಂಕಪಟ್ಟಿ ನೀಡುವುದಾಗಿ ವಿದ್ಯಾರ್ಥಿಗಳಿಂದ ಒಂದು ಮಾರ್ಕ್ಸ್ ಕಾರ್ಡ್ ಗೆ 50 ಸಾವಿರದಿಂದ 1 ಲಕ್ಷವರೆಗೆ ಹಣ ಪಡೆದುಕೊಳ್ಳುತ್ತಿದ್ದರು ಎಂಬ ಅಂಶ ಗೊತ್ತಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.