ಧಾರವಾಡ: ಗುಜರಾತ್ ಹಾಗೂ ಹಿಮಾಚಲ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗಳು ನಡೆದಿದ್ದು, ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿ ಪರವಾಗಿಯೇ ಇವೆ. ಈ ರಾಜ್ಯಗಳ ಫಲಿತಾಂಶದ ಪ್ರಭಾವ ಕರ್ನಾಟಕದ ವಿಧಾನಸಭಾ ಚುನಾವಣೆ ಮೇಲೂ ಬೀರಲಿದೆ ಎಂದು ಶಾಸಕ ಅರವಿಂದ ಬೆಲ್ಲದ್ ಹೇಳಿದರು.
ಇಂದು ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಅರವಿಂದ್ ಬೆಲ್ಲದ್, ಗುಜರಾತ್ ಚುನಾವಣೆ ಏನಾಗುತ್ತದೆ ಎಂದು ಎಲ್ಲರೂ ಕುತೂಹಲದಿಂದ ನೋಡುತ್ತಿದ್ದಾರೆ. ಈಗಾಗಲೇ ಸಮೀಕ್ಷೆಗಳು ಬಿಜೆಪಿ ಪರವಾಗಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಉತ್ತಮ ಆಡಳಿತ ಗುಜರಾತ್ ಚುನಾವಣೆ ಮೇಲೆ ಪ್ರಭಾವ ಬೀರಿದೆ. ಅದು ಕರ್ನಾಟಕದ ವಿಧಾನಸಭಾ ಚುನಾವಣೆ ಮೇಲೂ ಪ್ರಭಾವ ಬೀರಲಿದೆ. ಗುಜರಾತ್ ಹಾಗೂ ಇತರ ರಾಜ್ಯಗಳ ಚುನಾವಣಾ ಫಲಿತಾಂಶ ನಮಗೆ ಪೂರಕ ವಾತಾವರಣ ನಿರ್ಮಿಸುತ್ತವೆ ಎಂದರು.
ಇದನ್ನೂ ಓದಿ- ಗುಜರಾತ್ ಎಕ್ಸಿಟ್ ಪೋಲ್ ಕರ್ನಾಟಕ ಚುನಾವಣೆ ಮೇಲೆ ಪರಿಣಾಮ : ಸಿಎಂ ಬೊಮ್ಮಾಯಿ
ಇದೇ ವೇಳೆ, ಎಚ್.ವಿಶ್ವನಾಥ್ ಅವರು ಕಾಂಗ್ರೆಸ್ ಅಧ್ಯಕ್ಷ್ಯ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಎಚ್. ವಿಶ್ವನಾಥ್ ಅವರು, ಬಹಳ ಹಿರಿಯ ರಾಜಕಾರಣಿ. ಅವರಿಗೆ ಎಲ್ಲರೂ ವೈಯಕ್ತಿಕವಾಗಿ ಪರಿಚಯಸ್ಥರು. ಹೀಗಾಗಿ ಅವರು ವೈಯಕ್ತಿಕ ಕೆಲಸದ ಮೇಲೆ ಖರ್ಗೆ ಅವರನ್ನು ಭೇಟಿ ಮಾಡಿರಬಹುದು ಎಂದು ತಿಳಿಸಿದರು.
ಇದನ್ನೂ ಓದಿ- ಸೆಕೆಂಡ್ ಹ್ಯಾಂಡ್ ವಸ್ತುಗಳನ್ನು ಬಳಸಿ ಸೋಲಾರ್ ಸೈಕಲ್ ತಯಾರಿಸಿದ ಐಟಿಐ ವಿದ್ಯಾರ್ಥಿಗಳು
ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಾತನಾಡಿದ ಶಾಸಕ ಅರವಿಂದ ಬೆಲ್ಲದ್ ಅವರು, ಮಹಾರಾಷ್ಟ್ರದಲ್ಲಿ ಹೊಸ ಸಿಎಂ ಬಂದಾಗೊಮ್ಮೆ ಈ ರೀತಿಯ ವಿವಾದ ಎಬ್ಬಿಸುವ ಕೆಲಸ ಮೊದಲಿನಿಂದಲೂ ನಡೆದುಕೊಂಡೇ ಬಂದಿದೆ. ಅದಕ್ಕೆ ಅಷ್ಟೊಂದು ಮಹತ್ವ ಕೊಡುವ ಅಗತ್ಯವಿಲ್ಲ. ಅಲ್ಲಿರುವುದು ಶಿವಸೇನಾ ಮುಖ್ಯಮಂತ್ರಿ. ಬಿಜೆಪಿ ಸಪೋರ್ಟ್ ಇದ್ದರೂ ಆಡಳಿತ ಮಾಡಲು ಹಾಗೂ ಗದ್ದಲ ಮಾಡಲು ನಮ್ಮ ಸಪೋರ್ಟ್ ಇಲ್ಲ. ಅದಕ್ಕೆ ನಾವು ಮಹತ್ವ ಕೊಟ್ಟರೆ ಕರ್ನಾಟಕದಲ್ಲಿರುವ ಎಂಇಎಸ್ನವರಿಗೆ ಶಕ್ತಿ ತುಂಬಿದಂತಾಗುತ್ತದೆ. ಚುನಾವಣೆ ಬಂದಾಗ ಎಂಇಎಸ್ನವರು ಇಂತಹ ಗದ್ದಲ ಮಾಡುತ್ತಾರೆ ಎಂದು ಹೇಳಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.