ಬೆಂಗಳೂರು : ಬಳಕೆಯ ಅವಧಿ ಮುಗಿದು ಹೋದ ಆಹಾರ ಉತ್ಪನ್ನಗಳನ್ನ ಮರು ಪ್ಯಾಕಿಂಗ್ ಮಾಡಿ ಮಾರಾಟ ಮಾಡುತ್ತಿದ್ದ ಗೋದಾಮಿನ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಆಹಾರ ಸುರಕ್ಷತಾ ಅಧಿಕಾರಿಗಳು ಹಾಗೂ ಸಿಸಿಬಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಲಾಗಿದ್ದು, ಕಾಟನ್ ಪೇಟೆಯ ಅರಿಹಂತ್ ಟ್ರೇಡಿಂಗ್ ಕಂಪನಿ ಹೆಸರಿನ ಗೋದಾಮಿನಲ್ಲಿ ಪರಿಶೀಲನೆ ನಡೆಸಲಾಗಿದೆ.‌ 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ರಾಜ್ಯದಲ್ಲಿ ಖಾಲಿ ಇರುವ 2.50 ಲಕ್ಷ ಹುದ್ದೆಗಳ ಭರ್ತಿಗೆ ಕ್ರಮ: ಜಿ.ಪರಮೇಶ್ವರ್


ಇಲ್ಲಿ ಪ್ರತಿಷ್ಠಿತ ಬ್ರ್ಯಾಂಡ್ ಗಳಿಗೆ ಸೇರಿದ ಎಕ್ಸ್ ಪೆರಿ ಬಿಸ್ಕೆಟ್ಸ್, ಚಾಕೊಲೇಟ್, ಚಾಕೊಲೇಟ್ ಪೌಡರ್, ಅಡುಗೆ ಏಣ್ಣೆ, ದಾಲ್ಡಾ, ರವೆ ಸೇರಿ ಅನೇಕ ಉತ್ಪನ್ನಗಳನ್ನು ಸೀಜ್ ಮಾಡಲಾಗಿದೆ. ಅಂಗಡಿಯೊಂದರಲ್ಲಿ ಅವಧಿ ಮೀರಿದ ಬಿಸ್ಕೆಟ್ ಪ್ಯಾಕ್ ಮಾರಾಟ ಮಾಡುತ್ತಿರುವುದರ ಮೂಲ ಹುಡುಕಿ  ಕಾರ್ಯಾಚರಣೆ ನಡೆಸಿದಾಗ ಈ ಅಕ್ರಮ ಬಯಲಿಗೆ ಬಂದಿದೆ‌. 


ಚಂದ್ರಪ್ರಕಾಶ್ ಎಂಬುವವರಿಗೆ ಸೇರಿದ ಗೋದಾಮು ಇದಾಗಿದ್ದು, ಸದ್ಯ ಉತ್ಪನ್ನಗಳ ಸ್ಯಾಂಪಲ್ಸ್ ಪಡೆದಿರುವ ಆಹಾರ ಸುರಕ್ಷತಾ ಅಧಿಕಾರಿಗಳು ಅವುಗಳನ್ನ ಪರಿಶೀಲನೆಗೆ ರವಾನಿಸಲಾಗಿದ್ದು, ಗೋದಾಮಿನ  ಮಾಲೀಕರಿಗೆ ನೋಟಿಸ್ ನೀಡಲಾಗಿದೆ‌‌.


ಇದನ್ನೂ ಓದಿ: ಬಟ್ಟೆ ಅಂಗಡಿಗೆ ನುಗ್ಗಿ ಚಾಕು ತೋರಿಸಿ ಸುಲಿಗೆಗೆ ಯತ್ನ: ಕಳ್ಳನನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಜನ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.