ಐಸಿಸ್ ನೊಂದಿಗೆ ನಂಟು ಹೊಂದಿದ್ದ ಒಂಭತ್ತು ಮಂದಿ ಶಂಕಿತರ ವಿರುದ್ಧ ಚಾರ್ಜ್ ಶೀಟ್
ಶಿವಮೊಗ್ಗ: ಶಿವಮೊಗ್ಗದ ತುಂಗಾ ತೀರದಲ್ಲಿ ನಡೆದ ಟ್ರಯಲ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ಅಧಿಕಾರಿಗಳು ಪೂರಕ ಚಾರ್ಜ್ ಶೀಟ್ ನ್ನು ಸಲ್ಲಿಸಿದ್ದಾರೆ.
ಐಸಿಸ್ ನೊಂದಿಗೆ ನಂಟು ಹೊಂದಿದ್ದ ಮೊಹಮ್ಮದ್ ಶಾರಿಕ್, ಮಾಜ್ ಮುನೀರ್ ಅಹ್ಮದ್, ಸೈಯದ್ ಯಾಸೀನ್, ರಿಶಾನ್ ತಾಜುದ್ದೀನ್ ಶೇಕ್, ಹುಜೈರ್ ಪರ್ಹಾನ್ ಬೇಗ್, ಮಾಜೀನ್ ಅಬ್ದುಲ್ ರೆಹಮಾನ್, ನದೀಂ ಅಹ್ಮದ್, ಜಬೀವುಲ್ಲಾ, ಮತ್ತು ನದೀಂ ಪೈಜಲ್ ಎನ್ನುವ ಒಂಭತ್ತು ಮಂದಿ ಶಂಕಿತರ ವಿರುದ್ಧ ಚಾರ್ಜ್ ಶೀಟ್ ನ್ನು ಸಲ್ಲಿಸಲಾಗಿದೆ.ಈ ಒಂಬತ್ತು ಮಂದಿ ಶಂಕಿತರ ವಿರುದ್ಧ ಯುಎಪಿಎ, ಐಪಿಸಿ, ಕೆಪಿ ಆಕ್ಟ್ ಅಡಿಯಲ್ಲಿ ಎನ್ಐಎ ಚಾರ್ಜ್ ಶೀಟ್ ಸಲ್ಲಿಸಿದೆ.
ಈ ಪ್ರಕರಣದ ಕುರಿತಾಗಿ ಸುದೀರ್ಘ ತನಿಖೆ ನಡೆಸಿರುವ ಎನ್ಐಎ ಅಧಿಕಾರಿಗಳು ಕೆಲವು ಆಘಾತಕಾರಿ ಸಂಗತಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಅದರಲ್ಲಿ ಪ್ರಮುಖವಾಗಿ ಉಗ್ರ ಕೃತ್ಯಗಳನ್ನ ಎಸಗಲು ರೊಬೋಟಿಕ್ಸ್ ಕೋರ್ಸ್ ಅಧ್ಯಯನಕ್ಕೆ ಶಂಕಿತರು ಮುಂದಾಗಿದ್ದರು ಎನ್ನಲಾಗಿದೆ.ಅಷ್ಟೇ ಅಲ್ಲದೆ ಬಂಧಿತರಲ್ಲಿ ಐವರು ತಂತ್ರಜ್ಞಾನದ ನೈಪುಣ್ಯ ಹೊಂದಿರುವುದು ತಿಳಿದು ಬಂದಿದೆ.
ಇದನ್ನೂ ಓದಿ: ಸಾರಿಗೆ ಇಲಾಖೆಯಲ್ಲಿ ಖಾಲಿ ಇರುವ 13,415 ಹುದ್ದೆಗಳ ಭರ್ತಿ: ಸಚಿವ ರಾಮಲಿಂಗಾರೆಡ್ಡಿ
ಮಾಜ್ ಮುನೀರ್ ಅಹ್ಮದ್, ಸೈಯದ್ ಯಾಸೀನ್, ರಿಶಾನ್ ತಾಜುದ್ದೀನ್ ಶೇಕ್, ಮಜೀನ್ ಅಬ್ದುಲ್ ರೆಹಮಾನ್ ಹಾಗೂ ನದೀಂ ಅಹ್ಮದ್ ಎನ್ನುವವರು ಮೆಕಾನಿಕಲ್ ಮತ್ತು ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡಿದ್ದರು ಎನ್ನಲಾಗಿದೆ. ಈ ಐವರಿಗೂ ಕೂಡ ರೋಬೋಟಿಕ್ ಕೋರ್ಸ್ ವ್ಯಾಸಂಗ ಮಾಡಲು ಟಾಸ್ಕ್ ನೀಡಲಾಗಿತ್ತು. ಅವರು ಭವಿಷ್ಯದಲ್ಲಿ ಭಾರತದಲ್ಲಿ ಉಗ್ರ ಕೃತ್ಯ ಎಸಗಲು ತಾಂತ್ರಿಕ ನೈಪುಣ್ಯ ಮತ್ತು ಹೊಸ ಕೌಶಲ್ಯ ಬೆಳೆಸಿಕೊಳ್ಳಲು ಈ ಟಾಸ್ಕ್ ಗಳನ್ನು ನೀಡಲಾಗಿತ್ತು ಎಂದು ತನಿಖೆವೇಳೆ ತಿಳಿದುಬಂದಿದೆ.
ಶಾರಿಕ್, ಮಾಜ್ ಮತ್ತು ಯಾಸೀನ್ ಕ್ರಿಮಿನಲ್ ಒಳಸಂಚು ಬಯಲಾಗಿದ್ದು, ಇವರು ವಿದೇಶಿ ಮೂಲದ ಐಸಿಸ್ ಆಪರೇಟರ್ ಗಳ ಅಣತಿಯಂತೆ ಕಾರ್ಯನಿರ್ವಹಿಸಲು ಸಂಚು ನಡೆಸಿದ್ದರು, ಆ ಮೂಲಕ ದೇಶದ ಆಂತರಿಕ ಭದ್ರತೆ, ಘನತೆ, ಸಾರ್ವಭೌಮತ್ವಕ್ಕೆ ಧಕ್ಕೆ ತರಲು ಪ್ಲಾನ್ ರೂಪಿಸಿದ್ದರು ಎನ್ನಲಾಗಿದೆ. ಇಂತಹ ಕೃತ್ಯಗಳನ್ನು ನಡೆಸಲು ಶಂಕಿತರಿಗೆ ಕ್ರಿಪ್ಟೊ ಕರೆನ್ಸಿ ಮೂಲಕ ಆನ್‌ಲೈನ್ ಹ್ಯಾಂಡ್ಲರ್ಸ್ಗಳು ಫಂಡಿಂಗ್ ಮಾಡುತ್ತಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ಕಾರ್ಯಪಾಲನ ವರದಿ ಬಿಡುಗಡೆ ಮಾಡಿದ ಸಚಿವ ಪ್ರಿಯಾಂಕ್ ಖರ್ಗೆ..!
2022 ಸೆಪ್ಟೆಂಬರ್ ನಲ್ಲಿ ತುಂಗಾ ತೀರದಲ್ಲಿ ನಡೆದ ಟ್ರಯಲ್ ಬ್ಲಾಸ್ಟ್ ಪ್ರಕರಣದ ವಿಚಾರವಾಗಿ ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದರು,ತದನಂತರ ಈ ಪ್ರಕರಣವನ್ನು ಎನ್ಐಎಗೆ ವರ್ಗಾವಣೆ ಮಾಡಲಾಗಿತ್ತು.ಪ್ರಕರಣ ದಾಖಲಿಸಿದ ಮಾಜ್ ಮತ್ತು ಸೈಯದ್ ಯಾಸೀನ್ ಅವರನ್ನು ಎನ್ಐಎ ಬಂಧಿಸಿ ತನಿಖೆ ನಡೆಸಿತ್ತು.ಈಗ ಈ ಪ್ರಕರಣದ ಕುರಿತಾಗಿ ಎನ್ಐಎ ಹೆಚ್ಚಿನ ತನಿಖೆ ಮುಂದುವರೆಸಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.