ಕಾರ್ಯಪಾಲನ ವರದಿ ಬಿಡುಗಡೆ ಮಾಡಿದ ಸಚಿವ ಪ್ರಿಯಾಂಕ್‌ ಖರ್ಗೆ..!

ಪ್ರಿಯಾಂಕ್ ಖರ್ಗೆ ಅವರು ಸಚಿವರಾಗಿ ಅಧಿಕಾರ ಸ್ವೀಕರಿಸಿ ಒಂದು ತಿಂಗಳು ತುಂಬಿದ್ದು, 29 ಮೇ 2023 - 29 ಜೂನ್ 2023 ಅವಧಿಯ ತಮ್ಮ ಮೊದಲ ತಿಂಗಳ ಕಾರ್ಯಪಾಲನ ವರದಿಯನ್ನು (ವರ್ಕ್ ರಿಪೋರ್ಟ್) ಸಾರ್ವಜನಿಕರ ಮುಂದಿಟ್ಟಿದ್ದಾರೆ.

Written by - Prashobh Devanahalli | Edited by - Krishna N K | Last Updated : Jul 1, 2023, 04:22 PM IST
  • ಪ್ರಿಯಾಂಕ್ ಖರ್ಗೆ ಅವರು ಸಚಿವರಾಗಿ ಅಧಿಕಾರ ಸ್ವೀಕರಿಸಿ ಒಂದು ತಿಂಗಳು ತುಂಬಿದೆ.
  • ಮೊದಲ ತಿಂಗಳ ಕಾರ್ಯಪಾಲನ ವರದಿ ಸಾರ್ವಜನಿಕರ ಮುಂದಿಟ್ಟ ಪ್ರಿಯಾಂಕ್‌ ಖರ್ಗೆ.
ಕಾರ್ಯಪಾಲನ ವರದಿ ಬಿಡುಗಡೆ ಮಾಡಿದ ಸಚಿವ ಪ್ರಿಯಾಂಕ್‌ ಖರ್ಗೆ..! title=

ಬೆಂಗಳೂರು : ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಗಳ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಸಚಿವರಾಗಿ ಅಧಿಕಾರ ಸ್ವೀಕರಿಸಿ ಒಂದು ತಿಂಗಳು ತುಂಬಿದ್ದು, 29 ಮೇ 2023 - 29 ಜೂನ್ 2023 ಅವಧಿಯ ತಮ್ಮ ಮೊದಲ ತಿಂಗಳ ಕಾರ್ಯಪಾಲನ ವರದಿಯನ್ನು (ವರ್ಕ್ ರಿಪೋರ್ಟ್) ಸಾರ್ವಜನಿಕರ ಮುಂದೆ ಇರಿಸಿದ್ದಾರೆ.

ಸಚಿವರು ಒಂದು ತಿಂಗಳ ಅವಧಿಯಲ್ಲಿ ಸರ್ಕಾರಿ ಮಟ್ಟದಲ್ಲಿ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಹಾಗೂ ವಿವಿಧ ಇಲಾಖೆಯ ಸಚಿವರೊಂದಿಗೆ 8 ಸಭೆಗಳಲ್ಲಿ ಪಾಲ್ಗೊಂಡಿದ್ದು, ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸಂಬಂಧಪಟ್ಟ 14 ಸಭೆಗಳನ್ನು ನಡೆಸಿದ್ದಾರೆ. ಮಾಹಿತಿ ತಂತ್ರಜ್ಞಾನ  ಹಾಗೂ ಜೈವಿಕ ತಂತ್ರಜ್ಞಾನ ಇಲಾಖೆಗೆ ಸಂಬಂಧಿಸಿದ 21 ಸಭೆಗಳನ್ನು ಸಚಿವರು ನಿರ್ವಹಿಸಿದ್ದಾರೆ. 

ಇದನ್ನೂ ಓದಿ: ಸಾರಿಗೆ ಇಲಾಖೆಯಲ್ಲಿ ಖಾಲಿ ಇರುವ 13,415 ಹುದ್ದೆಗಳ ಭರ್ತಿ: ಸಚಿವ ರಾಮಲಿಂಗಾರೆಡ್ಡಿ

ಸಚಿವ ಶ್ರೀ ಪ್ರಿಯಾಂಕ್‌ ಖರ್ಗೆ ಅವರು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ 3 ಸಭೆಗಳನ್ನು ನಡೆಸಿ ಸೂಕ್ತ ನಿರ್ದೇಶನಗಳನ್ನು ನೀಡಿದ್ದಾರೆ. ಎರಡು ಬಾರಿ ಕಲಬುರಗಿ ಜಿಲ್ಲಾ ಪ್ರವಾಸ ಕೈಗೊಂಡ ಸಚಿವರು ತಮ್ಮ ಮತಕ್ಷೇತ್ರ ಚಿತ್ತಾಪುರಕ್ಕೂ ತೆರಳಿ ಮತದಾರರಿಗೆ ಕೃತಜ್ಞತೆ ಅರ್ಪಿಸಿ ಬಂದಿದ್ದಾರೆ. 

ಒಂದು ತಿಂಗಳ ಅವಧಿಯಲ್ಲಿ ಸಚಿವರು 12 ಮಾಧ್ಯಮ ಸಂದರ್ಶನಗಳಲ್ಲಿ ಪಾಲ್ಗೊಂಡಿದ್ದಾರೆ ಸಾರ್ವಜನಿಕರು ಪ್ರತಿನಿತ್ಯ ಕಚೇರಿ ಹಾಗೂ ಗೃಹ ಕಚೇರಿಯಲ್ಲಿ ಸಚಿವರನ್ನು ಭೇಟಿ ಮಾಡಿ ತಮ್ಮ ಅಹವಾಲುಗಳನ್ನು ಹೇಳಿಕೊಳ್ಳುತ್ತಿದ್ದಾರೆ. ಪ್ರತಿ ನಿತ್ಯ 5000ಕ್ಕೂ ಹೆಚ್ಚು ಮಂದಿ ಸಾರ್ವಜನಿಕರು, ಪಕ್ಷದ ಕಾರ್ಯಕರ್ತರು, ವಿವಿಧ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಸರ್ಕಾರಿ ನೌಕರರಿಂದ ಸಚಿವರು ಮನವಿಗಳನ್ನು ಸ್ವೀಕರಿಸಿ, ಕೆಲವರೊಂದಿಗೆ ನೇರ ಮಾತುಕತೆ ನಡೆಸಿದ್ದಾರೆ. ಹೀಗೆ ಸ್ವೀಕರಿಸುತ್ತಿರುವ ಮನವಿಗಳನ್ನು ಸಂಬಂಧಿಸಿದ ಇಲಾಖೆಗಳಿಗೆ ರವಾನಿಸುವ ಪ್ರಕ್ರಿಯೆ ನಡೆಯುತ್ತಿದೆ. 

ಇದನ್ನೂ ಓದಿ:  ಎಕ್ಸ್ ಪೆರಿ ಆದ ಪದಾರ್ಥ ಮರು ಪ್ಯಾಕಿಂಗ್: ಗೋದಾಮಿನ ಮೇಲೆ ಸಿಸಿಬಿ ದಾಳಿ

ಕಳೆದ ಒಂದು ತಿಂಗಳಲ್ಲಿ ಇಲಾಖೆ ವತಿಯಿಂದ ಕೈಗೊಂಡಿರುವ ಪ್ರಮುಖ ನಿರ್ಧಾರಗಳು.

  • ಎಲ್ಲಾ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತಮ್ಮ ಕಾರ್ಯವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಪಂಚಾಯತಿ ಸದಸ್ಯರೊಂದಿಗೆ ಕಡ್ಡಾಯ ಸಭೆ ನಡೆಸಲು ಸೂಚನೆ.
  • ನವೆಂಬರ್ ತಿಂಗಳಿನಲ್ಲಿ ಬೆಂಗಳೂರು ಟೆಕ್ ಸಮ್ಮಿಟ್ ಆಯೋಜಿಸಲು ಪೂರ್ವ ತಯಾರಿ ಹಾಗೂ ದಿನಾಂಕ ಘೋಷಣೆ.
  • ಪಂಚಾಯತ್ ರಾಜ್ ಇಲಾಖೆಯನ್ನು ಮತ್ತಷ್ಟು ಜನಸ್ನೇಹಿಯಾಗಿಸಲು ಹಾಗೂ ಇಲಾಖಾ ಅಧಿಕಾರಿಗಳನ್ನು ಮತ್ತಷ್ಟು ಉತ್ತರದಾಯಿಯನ್ನಾಗಿಸಲು ಪಂಚತಂತ್ರ - 2 ಜಾರಿಗೆ ಸಕಲ ಸಿದ್ಧತೆ.
  • ಭ್ರಷ್ಟ ಅಧಿಕಾರಿಗಳ ವಿರುದ್ಧ ಸಮರ  ಸಾರುವ ನಿಟ್ಟಿನಲ್ಲಿ ಕರ್ನಾಟಕ ಗ್ರಾಮೀಣ ಮೂಲಭೂತ ಅಭಿವೃದ್ಧಿ ನಿಯಮಿತ ಹಾಗೂ ಜಲ ಜೀವನ ಮಿಷನ್ ಮೂಲಕ ನಡೆದ ಎಲ್ಲಾ ಕಾಮಗಾರಿಗಳ ಪ್ರತ್ಯೇಕ ಥರ್ಡ್ ಪಾರ್ಟಿ ಪರಿಶೀಲನೆ, ಕೆಲಸಕ್ಕೆ ಹಸಿರು ನಿಶಾನೆ, ಹಲವು ಭ್ರಷ್ಟ ಅಧಿಕಾರಗಳ ಅಮಾನತು.
  • ಕಿಯೋನಿಕ್ಸ್ ಸಂಸ್ಥೆಯನ್ನು ಉದ್ದೇಶ ಆಧಾರಿತ ಪುನಶ್ಚೇತನಕ್ಕೆ ಸಜ್ಜುಗೊಳಿಸುವುದು ಹಾಗೂ ಸಂಸ್ಥೆಯ ಅಧಿಕೃತ ಪಟ್ಟಿಯಲ್ಲಿರುವ ಎಲ್ಲಾ ಖಾಸಗಿ ಸರಬರಾಜು ಹಾಗೂ ಸೇವಾದಾರರ ಸಮಗ್ರ ಪರಿಷ್ಕರಣೆಗೆ ಸೂಚನೆ.
  • ಸ್ಟಾರ್ಟ್ ಅಪ್ ಗಳಿಗೆ ವಿಶೇಷ ಉತ್ತೇಜನ ಹಾಗೂ ಅನುಕೂಲಕರ ವಾತಾವರಣ ನಿರ್ಮಿಸಲು ಕರ್ನಾಟಕ ಕೌಶಲ್ಯ ಸಲಹಾ ಸಮಿತಿ ಸ್ಥಾಪನೆಗೆ ಕ್ರಮ.
  • ಮುಂದಿನ ಎರಡು ತಿಂಗಳಲ್ಲಿ ಎದುರಾಗಬಲ್ಲ ಕುಡಿಯುವ ನೀರಿನ ಸಮಸ್ಯೆಗೆ ಪೂರ್ವಭಾವಿಯಾಗಿ ಕಂಟಿನ್ಜೆನ್ಸಿ ಯೋಜನೆಗೆ ಕ್ರಮ. 
  • ಕಲಬುರಗಿಯಲ್ಲಿ ಪೊಲೀಸ್ ಸೇವೆಯನ್ನು ಜನಸ್ನೇಹಿಯಾಗಿಸುವುದಕ್ಕೆ ಆಪ್ ಮೂಲಕ ಫೀಡ್ ಬ್ಯಾಕ್ ಪಡೆಯಲು ಕ್ರಮ.
  • ತಂತ್ರಜ್ಞಾನ ಕಂಪನಿಗಳ ಬೇಡಿಕೆಗೆ ಅನುಗುಣವಾಗಿ ಅಭ್ಯರ್ಥಿಗಳನ್ನು ಕೌಶಲ್ಯಪೂರ್ಣವಾಗಿಸಲು ವಿಶೇಷ ಕಾರ್ಯಕ್ರಮ ರೂಪಿಸಲು ಕ್ರಮ.
  • ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ ಭಾಷೆ ಅಭಿವೃದ್ಧಿಪಡಿಸುವ ಸ್ಟಾರ್ಟ್ ಅಪ್'ಗಳಿಗೆ ವಿಶೇಷ ಪ್ರೋತ್ಸಾಹಕ್ಕೆ ಕ್ರಮ.
  • ಸ್ಟಾರ್ಟಪ್ ರಾಜಧಾನಿಯಾಗಿರುವಂತೆ ಬೆಂಗಳೂರನ್ನು ಡಿಜಿಟಲ್ ಆರ್ಥಿಕತೆಯ ರಾಜಧಾನಿಯಾಗಿಸಲು ರೂಪುರೇಷೆ ರಚನೆಗೆ ಕ್ರಮ.
  • ರಾಜ್ಯದ ಸಮಗ್ರ ಕುಡಿಯುವ ನೀರಿನ ಮೂಲಗಳ ಆಡಿಟ್ ಗೆ ಕ್ರಮ - ಈ ಮೂಲಕ ರಾಜ್ಯಾದ್ಯಂತ ಇರುವ ಪ್ರತಿಯೊಂದು ಕುಡಿಯುವ ನೀರಿನ ಮೂಲವನ್ನು ಪತ್ತೆ ಹೆಚ್ಚಿ ಅದನ್ನು ಸದ್ಬಳಕೆ ಮಾಡಲು ಸಿದ್ಧತೆ.
  • ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ವೈಜ್ಞಾನಿಕ ಮಾದರಿಯಲ್ಲಿ ಘನತ್ಯಾಜ್ಯ ವಿಲೇವಾರಿಗೆ ಘಟಕಗಳ ಸ್ಥಾಪನೆಗೆ ಕ್ರಮ. ತ್ಯಾಜ್ಯ ಪುನರ್ಬಳಕೆ ಮೂಲಕ ಪಂಚಾಯಿತಿಗಳು ಆದಾಯಗಳಿಸುವ ರೀತಿಯಲ್ಲಿ ರೂಪುರೇಷೆ ರಚನೆ.
  • ರಾಜ್ಯಾದ್ಯಂತ ಇರುವ ಎಲ್ಲಾ ಗ್ರಾಮೀಣ ರಸ್ತೆಗಳನ್ನು ವೈಜ್ಞಾನಿಕವಾಗಿ ಮೇಲ್ದರ್ಜೆಗೇರಿಸಿ, ಮರುಬಳಕೆಯ ಪ್ಲಾಸ್ಟಿಕ್ ಬಳಸಿ ಉನ್ನತೀಕರಣಗೊಳಿಸಲು ಕ್ರಮ
  • ರಾಜ್ಯಾದ್ಯಂತ ಎಲ್ಲಾ ಶುದ್ಧ ಕುಡಿಯುವ ನೀರಿನ ಘಟಕದ (RO ಪ್ಲಾಂಟ್) ಕಾಮಗಾರಿಗಳ ಮರುಪರಿಶೀಲನೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News