ಬೆಂಗಳೂರು: ಯುವತಿಯರ ಹೆಸರಿನಲ್ಲಿ ಆ್ಯಪ್‍ನಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಸೆಕ್ಸ್ ಗೆ ಕರೆದು ಬೆದರಿಸಿ ಸುಲಿಗೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಎಚ್ಎಸ್ಆರ್ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ನದೀಮ್ ಪಾಶಾ ಹಾಗೂ ನಾಗೇಶ್ ಬಂಧಿತ ಆರೋಪಿಗಳು.


COMMERCIAL BREAK
SCROLL TO CONTINUE READING

ಯುವತಿಯರ ಹೆಸರಿನಲ್ಲಿ ಲೊಕ್ಯಾಂಟೋ ಆ್ಯಪ್‍ನಲ್ಲಿ ನಕಲಿ ಪ್ರೊಫೈಲ್ ಸೃಷ್ಟಿಸುತ್ತಿದ್ದ ಆರೋಪಿಗಳು, ಆ ಪ್ರೊಫೈಲ್ ಮೇಲೆ ಆಸಕ್ತಿ ತೋರಿಸುವ ಗ್ರಾಹಕರನ್ನು ಯುವತಿಯರ ಸೋಗಿನಲ್ಲಿ ಲೊಕೇಷನ್ ಹಾಕಿ ಕರೆಸಿಕೊಳ್ಳುತ್ತಿದ್ದರು. ನಂತರ ಆಟೋದಲ್ಲಿ ಬಂದು ಹತ್ತಿಸಿಕೊಂಡು ಚಾಕು ತೋರಿಸಿ ಸುಲಿಗೆ ಮಾಡುತ್ತಿದ್ದರು. ಮಾತ್ರವಲ್ಲದೇ ಬ್ಯಾಂಕ್ ಖಾತೆಯಿಂದಲೂ ಹಣ ವರ್ಗಾವಣೆ  ಮಾಡಿಸಿಕೊಳ್ಳುತ್ತಿದ್ದರಂತೆ.


ಇದನ್ನೂ ಓದಿ: ಭಾರತವನ್ನು ಕಾಪಾಡಲು ನಾವೆಲ್ಲಾ ಒಂದಾಗಬೇಕಿದೆ: ಡಿಸಿಎಂ ಡಿ.ಕೆ.ಶಿವಕುಮಾರ್ ಕರೆ


ಇದೇ ರೀತಿ ಯುವಕನೊಬ್ಬನನ್ನು ಫೇಕ್ ಅಕೌಂಟ್‍ನಲ್ಲಿ ಮೋಡಿ ಮಾಡಿ ಕರೆಸಿಕೊಂಡಿದ್ದ ಆರೋಪಿಗಳು, ಆಗಸ್ಟ್ 21ರ ಸಂಜೆ 7:30ರ ಸುಮಾರಿಗೆ ಹೆಚ್ಎಸ್ಆರ್ ಲೇಔಟ್‍ನ 5ನೇ ಮುಖ್ಯ ರಸ್ತೆ ಬಳಿ ಕರೆಸಿಕೊಂಡಿದ್ದರು. ಬಳಿಕ ಆತನನ್ನು ಬಲವಂತವಾಗಿ ಆಟೋದಲ್ಲಿ ಕೂರಿಸಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಚಾಕು ತೋರಿಸಿ ಹಣ ನೀಡುವಂತೆ ಬೆದರಿಕೆ ಹಾಕಿದ್ದರು. ಬಳಿಕ ಆತನ ಬಳಿಯಿದ್ದ ನಗದು ಹಾಗೂ ಆನ್‍ಲೈನ್ ಮೂಲಕ 60 ಸಾವಿರ ರೂ. ಸುಲಿಗೆ ಮಾಡಿದ್ದರು. ನಂತರ ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಸುಮ್ಮನೆ ಬಿಡುವುದಿಲ್ಲವೆಂದು ಬೆದರಿಸಿ ಆಟೋದಿಂದ ಕೆಳಗಿಳಿಸಿ ಪರಾರಿಯಾಗಿದ್ದರು.


ಹೀಗಾಗಿ ಹಣ ಕಳೆದುಕೊಂಡು ನೊಂದ ಯುವಕ ಘಟನೆ ಸಂಬಂಧ ಎಚ್ಎಸ್ಆರ್ ಲೇಔಟ್ ಠಾಣೆಗೆ ದೂರು ನೀಡಿದ್ದ. ಸದ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.


ಇದನ್ನೂ ಓದಿ: ಮೋದಿ ನೋಡ್ಲಿ ಅಂತ ಬಿಜೆಪಿ ರಾಜ್ಯಾಧ್ಯಕ್ಷರು ಬೀದಿಯಲ್ಲಿ ನಿಂತಿದ್ದರು: ದಿನೇಷ್ ಗುಂಡೂರಾವ್


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.