‘ಫ್ರಿಯಾಗಿ ಬಜ್ಜಿ- ಬೋಂಡಾ ಕೊಡದಿದ್ರೆ ಎತ್ತಂಗಡಿ ಮಾಡಸ್ತೀನಿ!’: ನಕಲಿ ಪೊಲೀಸ್ ವಿರುದ್ಧ ಪ್ರಕರಣ ದಾಖಲು
Bengaluru Crime: ಮಹಿಳೆಯ ನಡೆಯಿಂದ ಅನುಮಾನಗೊಂಡ ಶೇಕ್ ಸಲಾಂ ಪೊಲೀಸ್ ಸಹಾಯವಾಣಿ 112ಗೆ ಕರೆ ಮಾಡಿದ್ದಾರೆ. ಇದರಿಂದ ಬೆಚ್ಚಿಬಿದ್ದ ನಕಲಿ ಪೊಲೀಸ್ ತಕ್ಷಣ ತನ್ನ ಬೈಕ್‍ನಲ್ಲಿ ಪರಾರಿಯಾಗಿದ್ದಾಳೆ.
ಬೆಂಗಳೂರು: ಪೊಲೀಸರ ಹೆಸರು ಹೇಳಿಕೊಂಡು ಅಮಾಯಕರಿಗೆ ಮೋಸ ಮಾಡುವವರ ಸಂಖ್ಯೆಗೇನೂ ಕಮ್ಮಿ ಇಲ್ಲಾ.. ಸದ್ಯ ತಾನು ಲೇಡಿ ಪೊಲೀಸ್ ಅಂತಾ ಹೇಳಿ ಫ್ರಿಯಾಗಿ ಬಜ್ಜಿ-ಬೊಂಡಾ ತಿನ್ನುತ್ತಿದ್ದ ಖತರ್ನಾಕ್ ಲೇಡಿಯ ಕರಾಮತ್ತು ಬಯಲಾಗಿದೆ.
ಕೊಡಿಗೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಈ ಮೊದಲು ಕೂಡ ಈ ನಕಲಿ ಪೊಲೀಸ್ ಇದೇ ರೀತಿ ಮಾಡಿದ್ದಳಂತೆ. ಬ್ಯಾಟರಾಯನಪುರ ಅಯ್ಯಪ್ಪಸ್ವಾಮಿ ದೇವಾಲಯದ ಬಳಿ ಶೇಕ್ ಸಲಾಂ ಎಂಬುವವರು ಬಜ್ಜಿ ಅಂಗಡಿ ನಡೆಸುತ್ತಿದ್ದರು. ಅಲ್ಲಿಗೆ ಬರುತ್ತಿದ್ದ ಈ ಕಿಲಾಡಿ ಲೇಡಿ ನಾನು ಕೊಡಿಗೇಹಳ್ಳಿ ಪೊಲೀಸ್, ನಾನು ಬಂದಾಗ ಉಚಿತವಾಗಿ ಬಜ್ಜಿ-ಬೋಂಡಾ ಕೊಡಬೇಕು. ಇಲ್ಲದಿದ್ದರೆ ನಿನ್ನ ಅಂಗಡಿಯನ್ನೇ ಎತ್ತಂಗಡಿ ಮಾಡಿಸುತ್ತೇನೆ ಎಂದು ಬೆದರಿಸುತ್ತಿದ್ದಳಂತೆ.
ಇದನ್ನೂ ಓದಿ: B Puttaswamy: ರಾಜಕೀಯ ಪ್ರವೇಶಕ್ಕೆ ಪೊಲೀಸ್ ಇನ್ಸ್ಪೆಕ್ಟರ್ ಹುದ್ದೆಗೆ ರಾಜೀನಾಮೆ; ಕ್ಲಿಯರ್ ಆಯ್ತಂತೆ ಜೆಡಿಎಸ್ ಪಟ್ಟಿ..!
ಪೊಲೀಸ್ ಅಂತಾ ಹೆದರಿದ್ದ ಅಂಗಡಿ ಮಾಲೀಕ ಸಹ ಅನೇಕ ಬಾರಿ ಆಕೆಗೆ ತಿನ್ನಲು ಬಜ್ಜಿ-ಬೋಂಡಾ ನೀಡಿ ಪಾರ್ಸಲ್ ಸಹ ನೀಡುತ್ತಿದ್ದ. ಇದನ್ನೇ ಬಂಡವಾಳ ಮಾಡಿಕೊಂಡ ನಕಲಿ ಪೊಲೀಸ್ ಮತ್ತೆ ಅಂಗಡಿ ಬಳಿ ಹೋಗಿ ಹೊಟ್ಟೆ ತುಂಬಾ ಬಜ್ಜಿ ತಿಂದು ಪಾರ್ಸಲ್ ಕೇಳಿದ್ದಾಳೆ. ಇದರಿಂದ ರೋಸಿಹೋಗಿದ್ದ ಶೇಕ್ ಸಲಾಂ 100 ರೂ. ಕೊಟ್ರೆ ಮಾತ್ರ ಪಾರ್ಸಲ್ ಕೊಡುವುದಾಗಿ ಹೇಳಿದಾಗ ಈ ಲೇಡಿ ಮತ್ತೆ ಧಮ್ಕಿ ಹಾಕಿದ್ದಾಳೆ.
ಮಹಿಳೆಯ ನಡೆಯಿಂದ ಅನುಮಾನಗೊಂಡ ಶೇಕ್ ಸಲಾಂ ಪೊಲೀಸ್ ಸಹಾಯವಾಣಿ 112ಗೆ ಕರೆ ಮಾಡಿದ್ದಾರೆ. ಇದರಿಂದ ಬೆಚ್ಚಿಬಿದ್ದ ನಕಲಿ ಪೊಲೀಸ್ ತಕ್ಷಣ ತನ್ನ ಬೈಕ್‍ನಲ್ಲಿ ಪರಾರಿಯಾಗಿದ್ದಾಳೆ. ಇನ್ನೂ ಈ ಖತರ್ನಾಕ್ ಲೇಡಿ ಯಾರು ಅಂತಾ ಸಹ ಗೊತ್ತಾಗಿಲ್ಲ. ಹೀಗಾಗಿ ಕೊಡಿಗೇಹಳ್ಳಿ ಪೊಲೀಸ್ ಠಾಣೆಗೆ ಬಜ್ಜಿ ಅಂಗಡಿ ಮಾಲೀಕ ಶೇಕ್ ಸಲಾಂ ದೂರು ನೀಡಿದ್ದಾರೆ. ಸದ್ಯ ಲೇಡಿಯ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ: Breaking News: ಚರಂಡಿ ನಿರ್ಮಾಣಕ್ಕೆ ತೋಡಿದ್ದ ಗುಂಡಿಗೆ ಬಿದ್ದು ಇಬ್ಬರು ಬಾಲಕರು ಬಲಿ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.