2A ಮೀಸಲಾತಿ ವಿಚಾರ: ಸರ್ಕಾರಕ್ಕೆ ಮತ್ತೆ ಗಡುವು ನೀಡಿದ ಜಯಮೃತ್ಯುಂಜಯ ಸ್ವಾಮೀಜಿ!

ನಮ್ಮ ಬೇಡಿಕೆ ಈಡೇರಿಸದಿದ್ದರೆ ಹಾವೇರಿ ಜಿಲ್ಲೆಯ ಶಿಗ್ಗಾಂವ್‍ನಲ್ಲಿರುವ ಸಿಎಂ ಬೊಮ್ಮಾಯಿ ಮನೆ ಮುಂದೆ ಪಂಚಮಸಾಲಿ ಸಮುದಾಯದವರು ಧರಣಿ ನಡೆಸಲಿದ್ದಾರೆ ಎಂದು ಶ್ರೀಗಳು ಎಚ್ಚರಿಕೆ ನೀಡಿದ್ದಾರೆ.

Written by - Puttaraj K Alur | Last Updated : Jan 8, 2023, 05:20 PM IST
  • ಪಂಚಮಸಾಲಿ ಸಮಾಜಕ್ಕೆ 2A ಮೀಸಲಾತಿ ನೀಡುವ ವಿಚಾರವಾಗಿ ಮತ್ತೆ ದೊಡ್ಡಮಟ್ಟದ ಹೋರಾಟ!
  • ರಾಜ್ಯ ಬಿಜೆಪಿ ಸರ್ಕಾರಕ್ಕೆ ಮತ್ತೆ ಗಡುವು ನೀಡಿದ ಬಸವಜಯ ಮೃತ್ಯುಂಜಯ ಸ್ವಾಮೀಜಿ
  • ಜ.12ರೊಳಗೆ ಸಂಪೂರ್ಣ 2A ಮೀಸಲಾತಿ ಪ್ರಕಟಿಸಿ ಗೆಜೆಟ್ ನೋಟಿಫಿಕೇಶನ್ ಹೊರಡಿಸುಂತೆ ಆಗ್ರಹ
2A ಮೀಸಲಾತಿ ವಿಚಾರ: ಸರ್ಕಾರಕ್ಕೆ ಮತ್ತೆ ಗಡುವು ನೀಡಿದ ಜಯಮೃತ್ಯುಂಜಯ ಸ್ವಾಮೀಜಿ!  title=
ಬಿಜೆಪಿ ಸರ್ಕಾರಕ್ಕೆ ಶ್ರೀಗಳಿಂದ ಮತ್ತೆ ಗಡುವು!

ಬಾಗಲಕೋಟೆ: ಪಂಚಮಸಾಲಿ ಸಮಾಜಕ್ಕೆ 2A ಮೀಸಲಾತಿ ನೀಡುವ ವಿಚಾರವಾಗಿ ಮತ್ತೆ ದೊಡ್ಡಮಟ್ಟದ ಹೋರಾಟ ನಡೆಯುವ ನಿರೀಕ್ಷೆ ಇದೆ. ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ರಾಜ್ಯ ಬಿಜೆಪಿ ಸರ್ಕಾರಕ್ಕೆ ಮತ್ತೆ ಗಡುವು ನೀಡಿದ್ದಾರೆ.

ಬಾಗಲಕೋಟೆಯ ನವನಗರದಲ್ಲಿ ಭಾನುವಾರ ಮಾತನಾಡಿರುವ ಶ್ರೀಗಳು, ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಜನವರಿ 12ರೊಳಗಾಗಿ ಸಂಪೂರ್ಣ 2A ಮೀಸಲಾತಿ ಪ್ರಕಟಿಸಿ ಗೆಜೆಟ್ ನೋಟಿಫಿಕೇಶನ್ ಹೊರಡಿಸಬೇಕು. ಇಲ್ಲವಾದಲ್ಲಿ ಜ.13ರಂದು ಸಿಎಂ ಬಸವರಾಜ ಬೊಮ್ಮಾಯಿ ಅವರ ಮನೆ ಮುಂದೆ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ಸಂದೇಶ ರವಾಣಿಸಿದ್ದಾರೆ.

ಇದನ್ನೂ ಓದಿ: OMG: ರಾಜ್ಯದ ಜನರಲ್ಲಿ ಹೆಚ್ಚಿದ ವಿಚಿತ್ರ ಕ್ಯಾನ್ಸರ್ ಖಾಯಿಲೆ!

ನಮ್ಮ ಬೇಡಿಕೆ ಈಡೇರಿಸದಿದ್ದರೆ ಹಾವೇರಿ ಜಿಲ್ಲೆಯ ಶಿಗ್ಗಾಂವ್‍ನಲ್ಲಿರುವ ಸಿಎಂ ಬೊಮ್ಮಾಯಿ ಮನೆ ಮುಂದೆ ಪಂಚಮಸಾಲಿ ಸಮುದಾಯದವರು ಧರಣಿ ನಡೆಸಲಿದ್ದಾರೆ. ರಾಜ್ಯದ ಪಂಚಮಸಾಲಿ‌ ಸಮಾಜ ಬಾಂಧವರು ರೊಟ್ಟಿ ಬುತ್ತಿ ಕಟ್ಟಿಕೊಂಡು ಬಂದು ಧರಣಿಯಲ್ಲಿ ಭಗವಹಿಸುವಂತೆ ಇದೇ ವೇಳೆ ಶ್ರೀಗಳು ಕರೆ ನೀಡಿದ್ದಾರೆ.   

ಸಿಎಂ ಬೊಮ್ಮಾಯಿಯವರು ಬೆಳಗಾವಿ ಅಧಿವೇಶನದಲ್ಲಿ ಕೊಟ್ಟ ಮಾತನ್ನು ತಪ್ಪಿದ್ದಾರೆ. ತಾಯಿಯ ಮೇಲೆ ಆಣೆ ಮಾಡಿರುವ ಅವರು ಮಾತು ತಪ್ಪಿದ್ದಾರೆ. ಈಗಾಗಲೇ ಅವರು ನಮ್ಮ ಸಮುದಾಯಕ್ಕೆ ಘೋಷಿಸಿರುವ 2D ಮೀಸಲಾತಿ ನಮಗೆ ತೃಪ್ತಿ ತಂದಿಲ್ಲ, ಇದು ತುಂಬಾ ಗೊಂದಲ‌ವನ್ನು ಹುಟ್ಟುಹಾಕಿದೆ. ನಮಗೆ ಸಂಪೂರ್ಣ 2A ಮೀಸಲಾತಿಯೇ ಬೇಕು, ಮೀಸಲಾತಿ ಸಿಗುವವರೆಗೆ ನಾವು ಹೋರಾಟ ನಿಲ್ಲಿಸುವುದಿಲ್ಲ. ನಮ್ಮ ಹೋರಾಟ ಮುಂದುವರೆಯುತ್ತದೆ. ಜ.12ರೊಳಗೆ ಸಂಪೂರ್ಣ 2A  ಮೀಸಲಾತಿ ನೀಡಿ, ಇಲ್ಲವಾದಲ್ಲಿ ನಾವು ನಿಮ್ಮ ಮನೆಯ ಮುಂದೆ ಉಗ್ರವಾಗಿ ಧರಣಿ ನಡೆಸುತ್ತೇವೆಂದು ಸಿಎಂ ಬೊಮ್ಮಾಯಿಯವರಿಗೆ ಶ್ರೀಗಳು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ದೇವೇಗೌಡರ ಬೆನ್ನಿಗೆ ಚೂರಿ ಹಾಕಿದ ‘ಮಾನಸಪುತ್ರ’ YSV ದತ್ತಾ: ಜೆಡಿಎಸ್ ಆಕ್ರೋಶ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News