ಬೆಂಗಳೂರು: ಬೆಂಗಳೂರು ನಗರದ ಹಲವು ಶಾಲಾ ಮಕ್ಕಳ ಬ್ಯಾಗ್ ಗಳಲ್ಲಿ ಕಾಂಡೋಮ್ ಹಾಗೂ ಗರ್ಭ ನಿರೋಧಕ ಮಾತ್ರೆಗಳು ಪತ್ತೆಯಾಗಿವೆ. ವಿದ್ಯಾರ್ಥಿಗಳ ಬ್ಯಾಗ್ ಪರಿಶೀಲನೆಗೆ ಇಳಿದ ಶಾಲಾ ಶಿಕ್ಷಕರಿಗೆ ಶಾಕ್ ಆಗಿದೆ.


COMMERCIAL BREAK
SCROLL TO CONTINUE READING

9 ಮತ್ತು 10ನೇ ತರಗತಿ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಬ್ಯಾಗ್ ಗಳಲ್ಲಿ ಕಾಂಡೋಮ್ ಮತ್ತು ಗರ್ಭ ನಿರೋಧಕ‌ ಮಾತ್ರೆಗಳು ಪತ್ತೆಯಾಗಿವೆ. ಇದರ ಜೊತೆಗೆ ಸಿಗರೇಟ್, ಲೈಟರ್, ಫೆವಿಕಾಲ್ ಮುಂತಾದ ವಸ್ತುಗಳು ಸಹ ಪತ್ತೆಯಾಗಿವೆ.


ಇದನ್ನೂ ಓದಿ: Bengaluru: ವಿಧವೆ ಬಾಳಲ್ಲಿ ಚೆಲ್ಲಾಟ, ಉಂಡು ಹೋದ.. ‘ಚಿನ್ನ’ ಕದ್ದು ಹೋದ..!


ಈ ಬಗ್ಗೆ ಎಚ್ಚರ ವಹಿಸುವಂತೆ ಶಾಲಾ ಆಡಳಿತ ಮಂಡಳಿಗಳಿಂದ ಪೋಷಕರಿಗೆ ಸೂಚನೆ ನೀಡಲಾಗಿದೆ. ನಗರದ ಕೆಲವು ಶಾಲೆಗಳಲ್ಲಿ 10 ದಿನಗಳ ಕಾಲ ರಜೆ ಘೋಷಿಸಿ ಕೌನ್ಸಿಲಿಂಗ್ ನೀಡುವಂತೆ ಸಲಹೆ ನೀಡಲಾಗಿದೆ.


ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳ ಬಿಹೇವಿಯರ್‍ನಲ್ಲಿ ಬದಲಾವಣೆ ಕಂಡು ಬಂದ ಹಿನ್ನೆಲೆ ಬ್ಯಾಗ್ ಪರಿಶೀಲನೆ ನಡೆಸಲಾಗಿತ್ತು. ಶಾಲೆಯಲ್ಲಿ ಮೊಬೈಲ್ ಬಳಕೆ ನಿಷೇಧವಿದ್ದರೂ  ವಿದ್ಯಾರ್ಥಿ-ವಿದ್ಯಾರ್ಥಿನಿಯರು ಮೊಬೈಲ್ ಫೋನ್ ತರುತ್ತಿದ್ದರು.


ಇದನ್ನೂ ಓದಿ: ಚಿಲುಮೆ ಅವ್ಯವಹಾರದಲ್ಲಿ ತಮ್ಮದೇನು ಪಾಲಿಲ್ಲ ಎಂದ ಬಿಬಿಎಂಪಿ ಅಧಿಕಾರಿಗಳು...!


ಈ ಬಗ್ಗೆ ತಪಾಸಣೆಗೆ ಇಳಿದ ವೇಳೆ ಶಿಕ್ಷಕರಿಗೆ ಕಾಂಡೋಮ್ ಮತ್ತು ಗರ್ಭ ನಿರೋಧಕ ಮಾತ್ರೆಗಳು ಪತ್ತೆಯಾಗಿವೆ. ಇದನ್ನು ಕಂಡು ಸ್ವತಃ ಶಿಕ್ಷಕರಿಗೆ ಬಹುದೊಡ್ಡ ಶಾಕ್ ಆಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ತೆಗೆದುಕೊಳ್ಳುವಂತೆ ಖಾಸಗಿ ಶಾಲಾ ಶಿಕ್ಷಣ ಒಕ್ಕೂಟ ಆಗ್ರಹಿಸಿದೆ. ಇಲ್ಲದಿದ್ದರೆ ಮುಂದಿನ ಪೀಳಿಗೆ ತಪ್ಪು ದಾರಿಗೆ ಹೋಗುವ ಆತಂಕವನ್ನು ಶಿಕ್ಷಕರು ವ್ಯಕ್ತಪಡಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.