ಪ್ರೇಯಸಿ ಜೊತೆ ಐಷಾರಾಮಿ ಜೀವನ ನಡೆಸೋಕೆ ಎಟಿಎಂ ದೋಚಿದ್ದ ಸೆಕ್ಯೂರಿಟಿ ಗಾರ್ಡ್ ಬಂಧನ

ಈತ ವಿಲ್ಸನ್ ಗಾರ್ಡನ್‌ನ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಎಟಿಎಂನ ಸೆಕ್ಯುರಿಟಿ ಕೆಲಸ ಮಾಡಿಕೊಂಡಿದ್ದ. ಎಟಿಎಂಗೆ ಹಣ ತುಂಬಿಸಲು ಬರುವ ಕಸ್ಟೋಡಿಯನ್ ಸಿಬ್ಬಂದಿಯ ವಿಶ್ವಾಸ ಗಳಿಸಿದ್ದ. ಹಣ ಹಾಕಲು ಬರುತ್ತಿದ್ದವರು ಬಳಸುವ ಐಡಿ ಹಾಗೂ ಪಾಸ್ ವರ್ಡ್ ತಿಳಿದುಕೊಂಡಿದ್ದ. ಅದೇ ಐಡಿ - ಪಾಸ್ ವರ್ಡ್ ಬಳಸಿ 19.96 ಲಕ್ಷ ದೋಚಿ ಅಸ್ಸಾಂನ ಚಪರ್ ಮುಖ್ ಜಿಲ್ಲೆಗೆ ಹೋಗಿ ತಲೆಮರೆಸಿಕೊಂಡಿದ್ದ.

Written by - VISHWANATH HARIHARA | Edited by - Bhavishya Shetty | Last Updated : Nov 29, 2022, 09:43 AM IST
    • ಎಟಿಎಂ ದೋಚಿ ಪರಾರಿಯಾಗಿದ್ದ ಭದ್ರತಾ ಸಿಬ್ಬಂದಿ
    • ಪ್ರೀತಿಸುತ್ತಿದ್ದ ಯುವತಿಯೊಂದಿಗೆ ಮದುವೆಯಾಗುವ ಸಲುವಾಗಿ ಕಳ್ಳತನ
    • ಅಸ್ಸಾಂ ಮೂಲದ ವ್ಯಕ್ತಿಯನ್ನು ಬಂಧಿಸಿದ ಪೊಲೀಸರು
ಪ್ರೇಯಸಿ ಜೊತೆ ಐಷಾರಾಮಿ ಜೀವನ ನಡೆಸೋಕೆ ಎಟಿಎಂ ದೋಚಿದ್ದ ಸೆಕ್ಯೂರಿಟಿ ಗಾರ್ಡ್ ಬಂಧನ  title=
ATM Theft

ಬೆಂಗಳೂರು: ಪ್ರೀತಿಸುತ್ತಿದ್ದ ಯುವತಿಯೊಂದಿಗೆ ಮದುವೆಯಾಗುವ ಸಲುವಾಗಿ ಕೆಲಸ ಮಾಡುತ್ತಿದ್ದ ಎಟಿಎಂ ದೋಚಿ ಪರಾರಿಯಾಗಿದ್ದ ಭದ್ರತಾ ಸಿಬ್ಬಂದಿಯನ್ನ ವಿಲ್ಸನ್ ಗಾರ್ಡನ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಅಸ್ಸಾಂ ಮೂಲದ ದಿಪೋಂಕರ್ ನೋಮೋಸುಂದರ್ (23) ಬಂಧಿತ ಆರೋಪಿ.

ಇದನ್ನೂ ಓದಿ: ಮೈಸೂರು ಪೇಂಟ್ ಆಧುನೀಕರಣಕ್ಕೆ ಅಗತ್ಯ ನೆರವು: ಸಿಎಂ ಬೊಮ್ಮಾಯಿ

ಈತ ವಿಲ್ಸನ್ ಗಾರ್ಡನ್‌ನ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಎಟಿಎಂನ ಸೆಕ್ಯುರಿಟಿ ಕೆಲಸ ಮಾಡಿಕೊಂಡಿದ್ದ. ಎಟಿಎಂಗೆ ಹಣ ತುಂಬಿಸಲು ಬರುವ ಕಸ್ಟೋಡಿಯನ್ ಸಿಬ್ಬಂದಿಯ ವಿಶ್ವಾಸ ಗಳಿಸಿದ್ದ. ಹಣ ಹಾಕಲು ಬರುತ್ತಿದ್ದವರು ಬಳಸುವ ಐಡಿ ಹಾಗೂ ಪಾಸ್ ವರ್ಡ್ ತಿಳಿದುಕೊಂಡಿದ್ದ. ಅದೇ ಐಡಿ - ಪಾಸ್ ವರ್ಡ್ ಬಳಸಿ 19.96 ಲಕ್ಷ ದೋಚಿ ಅಸ್ಸಾಂನ ಚಪರ್ ಮುಖ್ ಜಿಲ್ಲೆಗೆ ಹೋಗಿ ತಲೆಮರೆಸಿಕೊಂಡಿದ್ದ.

ತನಿಖೆಯ ವೇಳೆ ಆರೋಪಿಯು ಅಸ್ಸಾಂನಲ್ಲಿ ಯುವತಿಯೊಬ್ಬಳನ್ನ ಪ್ರೀತಿಸುತ್ತಿದ್ದು, ಆಕೆಯೊಂದಿಗೆ ಮದುವೆಯಾಗಿ ಐಷಾರಾಮಿ ಜೀವನ ನಡೆಸಲು ಕಳ್ಳತನ ಮಾಡಿರುವುದು ಬಯಲಾಗಿದೆ. ಕದ್ದ ಹಣದಲ್ಲಿ ಒಂದು ಹೋಟೆಲ್ ತೆರೆಯುವ ಯೋಜನೆ ಹಾಕಿಕೊಂಡಿದ್ದ. ಆರೋಪಿ ಚೆನ್ನಾಗಿ ದುಡಿದು ನಂತರ ಪ್ರೀತಿಸಿದ್ದ ಯುವತಿಯ ಮದುವೆ ಮಾಡಿಕೊಳ್ಳುವ ಪ್ಲ್ಯಾನ್ ಮಾಡಿದ್ದ.

ಇದನ್ನೂ ಓದಿ: ನಂಜನಗೂಡು ಕ್ಷೇತ್ರವನ್ನು ಧಾರ್ಮಿಕ ಹಾಗೂ ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿ : ಸಿಎಂ ಬೊಮ್ಮಾಯಿ

ಸಿಸಿಟಿವಿಯಲ್ಲಿ ಸೆರೆಯಾಗಿದ್ದ ಆರೋಪಿಯ ಕಳ್ಳತನ ದೃಶ್ಯಗಳನ್ನ ಆಧರಿಸಿದ ವಿಲ್ಸನ್ ಗಾರ್ಡನ್ ಠಾಣಾ ಪೊಲೀಸರು ಅಸ್ಸಾಂಗೆ ತೆರಳಿ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.‌ ಸದ್ಯ ಬಂಧಿತನಿಂದ 14.20 ಲಕ್ಷ ರೂ ವಶಪಡಿಸಿಕೊಂಡಿದ್ದಾರೆ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News