ಬೆಂಗಳೂರು : ಅದು ಖರ್ತನಾಕ್ ಗಂಡ ಹೆಂಡತಿ ಜೋಡಿ. ಮೈ ತುಂಬಾ ರೋಲ್ಡ್ ಗೋಲ್ಡ್ ಜ್ಯುವೆಲ್ಸ್ ಹಾಕ್ಕೊಂಡು, ಟೆಂಪಲ್ ರನ್ ಮಾಡ್ತಿದ್ರು. ದೇವರ ದರ್ಶನಕ್ಕೆಂದು ಹೋಗ್ತಿದ್ದವರು ದೇವಾಲಯಕ್ಕೆ ಬರ್ತಿದ್ದವರಿಗೆ ಸಖತ್ತಾಗಿ ಉಂಡೇನಾಮ ತಿಕ್ತಿದ್ರು. ನಮಗೆಲ್ಲ ಗೊತ್ತು, ನಮಗೆಲ್ಲರು ಗೊತ್ತು, ಯಾರ್ ಹತ್ರ ಏನ್ ಕೆಲ್ಸ ಆಗ್ಬೇಕ್ ಹೇಳಿ ಮಾಡ್ಸೊಣ ಅಂತಿದ್ದೋರು ಸದ್ಯ ಪೊಲೀಸರ ಅತಿಥಿಯಾಗಿದ್ದಾರೆ....! ಅರೇ ಯಾರ್ ಅವ್ರು ಅಂದ್ಕೊಳ್ತಿದಿರಾ ನಾವ್ ತೋರಿಸ್ತೀವ್ ನೋಡಿ....!


COMMERCIAL BREAK
SCROLL TO CONTINUE READING

ಹೀಗೆ ನೋಡಲಿಕ್ಕೆ ಸಭ್ಯಸ್ಥರಂತೆ ಕಾಣೋ ಈ ದಂಪತಿ ಹೆಸ್ರು ಪ್ರಕಾಶ್ ಹಾಗೂ ಮಧು, ಬೆಂಗಳೂರಿನ ವಿದ್ಯಾರಣ್ಯಪುರ ನಿವಾಸಿಗಳಾಗಿರೋ ಈ ಜೋಡಿ ಜೀವನೋಪಾಯಕ್ಕೆ ಮಾಡ್ತಿದಿದ್ದು ಮಾತ್ರ ಖರ್ತನಾಕ್ ಐನಾತಿ ಕೆಲಸ. ಪ್ರತಿದಿನ ಬೆಳಗ್ಗೆಯಾದ್ರೆ  ದೇವಾಲಯಗಳಿಗೆ ಭೇಟಿ ಕೊಡ್ತಿದ್ದ ಈ ಜೋಡಿ ದೇವರ ಬಳಿ ಹರಕೆ ಕಟ್ಟೊರನ್ನ ಟಾರ್ಗೆಟ್ ಮಾಡ್ತಿದ್ರು. ಕಷ್ಟದಲ್ಲಿ ಇರೋರು ಇವರನ್ನ ಸಲೀಸಾಗಿ ನಂಬಬೇಕೆಂದು ಮೈತುಂಬಾ ನಕಲಿ ಚಿನ್ನಾಭರಣ ಧರಿಸಿ ಶ್ರೀಮಂತರಂತೆ ಬಿಲ್ಡಪ್ ಕೊಡ್ತಿದ್ರು. ಅಷ್ಟೇ ಅಲ್ಲದೇ ಕಷ್ಟಸುಖ ವಿಚಾರಿಸುವ ನೆಪದಲ್ಲಿ ದೇವಾಲಯಕ್ಕೆ ಬರುವ ಭಕ್ತರಿಗೆ ಹತ್ತಿರವಾಗ್ತಿದ್ರು. ನಮಗೆ ಹಲವು ಕಂಪನಿಗಳ ಮಾಲೀಕರು ಪರಿಚಯ. ಒಳ್ಳೆ ಕೆಲಸದ ಜೊತೆ ಒಳ್ಳೆಯ ಸಂಬಳ ಕೂಡ ಸಿಗತ್ತೆ ಅಂತ ನಂಬಿಸ್ತಿದ್ರು.


ಇದನ್ನೂ ಓದಿ:"ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದ ಬಿಜೆಪಿ ಪರಿವಾರದವರು ರಾಷ್ಟ್ರೀಯವಾದಿಗಳಾಗಲು ಹೇಗೆ ಸಾಧ್ಯ?"


ಹೀಗೆ ಪರಿಚಯ ಆದ ಮೇಲೆ ಐನಾತಿ ಜೋಡಿ ಮುಂದೆ ಶುರು ಮಾಡ್ತಿದಿದ್ದೆ ಸಲೀಸಾಗಿ ಉಂಡೇನಾಮ ತಿಕ್ಕೊ ಕೆಲಸ. ನಿಮಗೆ ಕೆಲಸ ಆಗಬೇಕಂದ್ರೆ ಕಂಪನಿಯವರು ಹಣ ಕೇಳ್ತಾರೆ. ನಿಮಗೂ ಒಳ್ಳೆ ಕೆಲಸ ಸಿಗತ್ತೆ. ಕೈ ತುಂಬಾ ಸಂಬಳವನ್ನು ಕೊಡಿಸ್ತೀವೆಂದು ಹಣ ಪಡಿತಿದ್ರು. ಇದೇ ರೀತಿಯಾಗಿ ವಿದ್ಯಾರಣ್ಯಪುರ ಏರಿಯಾ ಸುತ್ತಮುತ್ತಲಿನ ಮೂವರಿಂದ 34 ಲಕ್ಷ ಹಣ ಪಡೆದಿದ್ರು. ನಂತರ ಕೆಲಸವನ್ನೂ ಕೊಡಿಸದೇ ಹಣವನ್ನು ವಾಪಸ್ ಕೊಡದೇ ಎಸ್ಕೇಪ್ ಆಗಿದ್ರು. ಹಣ ಪಡೆದವರಿಗೆ ನೀಡಿದ್ದ ಮೊಬೈಲ್ ಸಂಖ್ಯೆ ಆಗಾಗ್ಗೆ ಆನ್ & ಆಫ್ ಆಗ್ತಿತ್ತು. ದೂರು ದಾಖಲು ಆಗ್ತಿದ್ದಂತೆ ಅಲರ್ಟ್ ಆಗಿದ್ದ ಮೋಸ ವಿದ್ಯಾರಣ್ಯಪುರ ಪೊಲೀಸರು ಮೊಬೈಲ್ ನಂಬರ್ ಟ್ರೇಸ್ ಮಾಡಿ ವಂಚಕ ದಂಪತಿಯನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.


ಸದ್ಯ ಐನಾತಿ ದಂಪತಿ ಅಮಾಯಕರಿಗೆ ವಂಚಿಸಿ ಪಡೆದಿದ್ದ ಹಣದಲ್ಲಿ ಚಿನ್ನಾಭರಣ ಖರೀದಿ ಮಾಡಿರೋದು ಪೊಲೀಸರ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಆರೋಪಿ ದಂಪತಿಯಿಂದ ಮೊಬೈಲ್ ಪೊನ್ ಡೆಬಿಟ್ ಕಾರ್ಡ್‌ ಕೃತ್ಯಕ್ಕೆ ಬಳಸ್ತಿದ್ದ ನಕಲಿ ‍ಚಿನ್ನಾಭರಣದ ಜೊತೆಗೆ ಕೃತ್ಯದ ನಂತರ ಖರೀದಿಸಿದ್ದ ಅಸಲಿ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. ನೋಡಿದ್ರಲ್ಲ ಯಾವ ರೀತಿ ದೇವಸ್ಥಾನಗಳ ಮುಂದೆನೇ ವಂಚನೆ ಮಾಡೋರು ಹೇಗೆ ಆಕ್ಟೀವ್ ಇರ್ತಾರೆ ಅನ್ನೊದನ್ನ. ಇನ್ಮುಂದೆ ಈ ರೀತಿಯ ವಂಚಕರನ್ನ ನಂಬುವ ಮುನ್ನಾ ಹುಷಾರಾಗಿರಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.