ಐಪಿಎಲ್ನಿಂದ ಹೆಚ್ಚಾಯ್ತು ಕ್ರಿಕೆಟ್ ಬೆಟ್ಟಿಂಗ್ ದಂಧೆ: 29 ಕೇಸ್, 33 ಆರೋಪಿಗಳು ಅರೆಸ್ಟ್
ಬಂಧಿತರಾದ ಆಯುಷ್ ಗುಪ್ತಾ, ಪ್ರದೀಪ್ ಯಾದವ್ ನೆದರ್ಲೆಂಡ್ಸ್ ಮತ್ತು ವೆಸ್ಟ್ ಇಂಡೀಸ್ ನಡುವಿನ ಪಂದ್ಯಕ್ಕೆ ಆನ್ ಲೈನ್ ಮೂಲಕ ಬೆಟ್ಟಿಂಗ್ ಆಡಿಸ್ತಿದ್ರು.
ಬೆಂಗಳೂರು: ನಗರದ ಡಿಜೆ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೊಬೈಲ್ ಮೂಲಕ ಕ್ರಿಕೆಟ್ ಬೆಟ್ಟಿಂಗ್ ಆಡಿಸ್ತಿದ್ದ ಇಬ್ಬರನ್ನ ನಿನ್ನೆ ಸಿಸಿಬಿ ಪೊಲೀಸ್ರು ಬಂಧಿಸಿದ್ದಾರೆ.
ಇದನ್ನೂ ಓದಿ: ನಿಮ್ಮ ಖಾತೆಗೆ ಬರುತ್ತಿದೆಯೇ ಗ್ಯಾಸ್ ಸಿಲಿಂಡರ್ ಸಬ್ಸಿಡಿ ? ಸುಲಭವಾಗಿ ಹೀಗೆ ತಿಳಿದುಕೊಳ್ಳಿ
ಬಂಧಿತರಾದ ಆಯುಷ್ ಗುಪ್ತಾ, ಪ್ರದೀಪ್ ಯಾದವ್ ನೆದರ್ಲೆಂಡ್ಸ್ ಮತ್ತು ವೆಸ್ಟ್ ಇಂಡೀಸ್ ನಡುವಿನ ಪಂದ್ಯಕ್ಕೆ ಆನ್ ಲೈನ್ ಮೂಲಕ ಬೆಟ್ಟಿಂಗ್ ಆಡಿಸ್ತಿದ್ರು. ಈ ವೇಳೆ ದಾಳಿ ಮಾಡಿದ ಸಿಸಿಬಿ ಪೊಲೀಸ್ರು ಇಬ್ಬರು ಆರೋಪಿಗಳನ್ನ ಬಂಧಿಸಿ ಬಂಧಿತರಿಂದ 10.45ಲಕ್ಷ ನಗದು ಹಾಗೂ ಮೂರು ಮೊಬೈಲ್ ಗಳನ್ನ ಸೀಜ್ ಮಾಡಿದ್ದಾರೆ.
ಇನ್ನೂ ಈ ಬಾರಿ ಐಪಿಎಲ್ ಸೀಜನ್ ವೇಳೆ ಹೆಚ್ಚಾಗಿ ಬೆಟ್ಟಿಂಗ್ ನಡೆದಿದ್ದು,ಸಿಸಿಬಿ ಪೊಲೀಸರಿಂದ ಕ್ರಿಕೆಟ್ ಬೆಟ್ಟಿಂಗ್ ನಡೆಸುತಿದ್ದವರ ವಿರುದ್ದ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ.
2022 ಐಪಿಎಲ್ ಸೀಜನ್ ನಲ್ಲಿ ಒಟ್ಟು 29 ಕೇಸ್ ದಾಖಲಿಸಿ 33 ಅರೋಪಿಗಳನ್ನು ಬಂಧಿಸಿ 81,45,800 ಸೀಜ್ ಮಾಡಲಾಗಿದೆ.
ಇದರಲ್ಲಿ ನಗರದ ವೆಸ್ಟ್ ಮತ್ತು ಸೌತ್ ಡಿವಿಷನ್ ನಲ್ಲಿ ಅತೀ ಹೆಚ್ಚು ಕೇಸ್ ದಾಖಲಾಗಿವೆ. ಬಸವನಗುಡಿ ಠಾಣಾ ವ್ಯಾಪ್ತಿ ಒಂದರಲ್ಲೇ ಆರು ಬೆಟ್ಟಿಂಗ್ ಪ್ರಕರಣಗಳು ದಾಖಲಾಗಿದೆ.
ಇದನ್ನೂ ಓದಿ: ರೈಲು ಚಲಿಸುವಾಗಲೇ ಹಳಿ ದಾಟಿದ ಪುಟ್ಟ ಬಾಲಕರು: ವಿಡಿಯೋ ನೋಡಿದ್ರೆ ಶಾಕ್ ಆಗ್ತೀರಾ!
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.