ಕಳೆದುಹೋದ ಮೊಬೈಲ್ ಪತ್ತೆ ಮಾಡಿ, ಅದನ್ನು ಲಾಕ್ ಮಾಡಲು ಸಿಂಪಲ್ ಟಿಪ್ಸ್ ಇಲ್ಲಿದೆ

ಈಗ ಕಳೆದು ಹೋದ ಮೊಬೈಲ್  ಅನ್ನು ಮನೆಯಲ್ಲಿದ್ದುಕೊಂಡೇ ಹುಡುಕುವುದು ತುಂಬಾ ಸುಲಭದ ಕೆಲಸ.  ಮನೆಲ್ಲಿದ್ದುಕೊಂಡೇ ಕಳೆದು ಹೋದ ಮೊಬೈಲಿನ ಅಲಾರಮ್  ಸೆಟ್ ಮಾಡಬಹುದು. ಅದನ್ನು ಲಾಕ್ ಮಾಡಬಹುದು. ಇವೆಲ್ಲಾ ಬಹಳ ಸುಲಭ.

Written by - Ranjitha R K | Last Updated : Apr 14, 2021, 10:04 AM IST
  • ಮೊಬೈಲ್ ಕಳೆದುಹೋಗುವುದು ವಿಶೇಷ ಸಂಗತಿಯೇನಲ್ಲ.
  • ಅದರಲ್ಲಿರುವ ಸೂಕ್ಷ್ಮ ಮಾಹಿತಿಗಳು ಕಳ್ಳರ ಪಾಲಾಗದಂತೆ ತಡೆಯುವುದು ಮುಖ್ಯ
  • ಕಳೆದು ಹೋದ ಮೊಬೈಲ್‍ನ್ನು ಮನೆಯಲ್ಲಿದ್ದುಕೊಂಡೇ ಹುಡುಕುವುದು ಹೇಗೆ.?
ಕಳೆದುಹೋದ ಮೊಬೈಲ್ ಪತ್ತೆ ಮಾಡಿ, ಅದನ್ನು ಲಾಕ್ ಮಾಡಲು  ಸಿಂಪಲ್ ಟಿಪ್ಸ್  ಇಲ್ಲಿದೆ title=
ಕಳೆದು ಹೋದ ಮೊಬೈಲ್‍ನ್ನು ಮನೆಯಲ್ಲಿದ್ದುಕೊಂಡೇ ಹುಡುಕುವುದು ಹೇಗೆ.? (file photo)

ನವದೆಹಲಿ: ಮೊಬೈಲ್ ಕಳೆದುಹೋಗುವುದು ವಿಶೇಷ ಸಂಗತಿಯೇನಲ್ಲ. ಆದರೆ, ಕಳೆದು ಹೋದ ಮೊಬೈಲ್ ಹುಡುಕುವುದು ಮತ್ತು ಅದರಲ್ಲಿರುವ ಸೂಕ್ಷ್ಮ ಮಾಹಿತಿಗಳು ಕಳ್ಳರ ಪಾಲಾಗದಂತೆ ತಡೆಯುವುದು ಅತ್ಯಂತ ಮಹತ್ವದ ವಿಷಯ. ಈಗ ಎಲ್ಲರ ಮೊಬೈಲ್ ಸ್ಮಾರ್ಟ್‍ಫೋ ನ್ (Smartphone) ಆಗಿದೆ. ಆದರಲ್ಲಿ ಬ್ಯಾಂಕ್ ಆಪ್, ಪಾಸ್ ವರ್ಡ್, ವಾಟ್ಸ್ ಆಪ್ ಚಾಟ್   (WhatsApp), ಮಹತ್ವದ ಮೇಲ್ ಎಲ್ಲಾ ಇರುತ್ತದೆ. ಇವೆಲ್ಲಾ ಒಂದು ವೇಳೆ ಕಳ್ಳರ ಪಾಲಾದಾರೆ ಅನರ್ಥ ಖಂಡಿತಾ. ಅದನ್ನು ತಪ್ಪಿಸುವುದು ಹೇಗೆ. ಕಳೆದು ಹೋದ ಮೊಬೈಲ್‍ ಅನ್ನು ಮನೆಯಲ್ಲಿದ್ದುಕೊಂಡೇ ಹುಡುಕುವುದು ಹೇಗೆ.?  ಮನೆಯಲ್ಲಿದ್ದುಕೊಂಡೇ ಅದರಲ್ಲಿರುವ ಡಾಟಾ ಡಿಲಿಟ್ (Data Delete) ಮಾಡುವುದು ಹೇಗೆ.? ಎಂಬುದನ್ನು ತಿಳಿದುಕೊಳ್ಳೋಣ.

ಹೀಗೆ ಮಾಡಿ, ನಿಮ್ಮ ಮೊಬೈಲ್‍ ಅನ್ನು ಸೇಫಾಗಿಡಿ.

ಈಗ ಕಳೆದು ಹೋದ ಮೊಬೈಲ್ (Mobile) ಅನ್ನು ಮನೆಯಲ್ಲಿದ್ದುಕೊಂಡೇ ಹುಡುಕುವುದು ತುಂಬಾ ಸುಲಭದ ಕೆಲಸ.  ಮನೆಲ್ಲಿದ್ದುಕೊಂಡೇ ಕಳೆದು ಹೋದ ಮೊಬೈಲಿನ ಅಲಾರಮ್ (Mobile alarm) ಸೆಟ್ ಮಾಡಬಹುದು. ಅದನ್ನು ಲಾಕ್ ಮಾಡಬಹುದು. ಇವೆಲ್ಲಾ ಬಹಳ ಸುಲಭ.

ಇದನ್ನೂ ಓದಿ : BSNL ಹೊಸ 249 ರೂಪಾಯಿ ಯೋಜನೆಯಲ್ಲಿ ಸಿಗಲಿದೆ Double Data, Free Calling ಸೌಲಭ್ಯ

1. ಡೌನ್‍ಲೋಡ್ ಮಾಡಿ find my device:
ನೀವು ನಿಮ್ಮ ಮೊಬೈಲ್‍ನಲ್ಲಿ ಗೂಗಲ್ ಪ್ಲೇಸ್ಟೋರ್ (Google  Playstore) ಮುಖಾಂತರ ಫೈಂಡ್ ಮೈ ಡಿವೈಸ್ ಆಪ್ (Find My Devise App) ಡೌನ್‍ಲೋಡ್ ಮಾಡಬಹುದಾಗಿದೆ. ಈ ಆಪ್ ಮೂಲಕ ನೀವು ನಿಮ್ಮ ಕಳೆದುಹೋದ ಮೊಬೈಲ್‍ನ್ನು ಟ್ರ್ಯಾಕ್ ಮಾಡಬಹುದಾಗಿದೆ. ನಿಮ್ಮ ಮೊಬೈಲ್‍ನ್ನು ಲಾಕ್ ಕೂಡಾ ಮಾಡಬಹುದಾಗಿದೆ. ಅದರಲ್ಲಿರುವ ಡಾಟಾವನ್ನು ಮನೆಯಲ್ಲಿದ್ದುಕೊಂಡೇ ಡಿಲೀಟ್ ಮಾಡಬಹುದಾಗಿದೆ.

2. ಮೊಬೈಲ್‍ಗೆ ವಿಶೇಷ ಸಂದೇಶ ಕಳುಹಿಸಿ..! 
ಗೂಗಲಿನ ಈ ವಿಶಿಷ್ಟ ಆಪ್‍ನಲ್ಲಿ ಇನ್ನೂ ಅನೇಕ ಪೀಚರ್ಸ್ ಇವೆ. ಕಳೆದು ಹೋದ ಮೊಬೈಲಿನ ಡಿಸ್‍ಪ್ಲೇಯಲ್ಲಿ ಯಾವುದಾದರೂ ವಿಶೇಷ ಮೆಸೆಜ್ ಕಳುಹಿಸಬಹುದಾಗಿದೆ. ಈ ಮೂಲಕ ನೀವು ಮೊಬೈಲ್ ಸಿಕ್ಕಿದ ವ್ಯಕ್ತಿಯನ್ನು ಸಂಪರ್ಕಿಸಿ ಅವರಿಂದ  ಮಾಹಿತಿ ಪಡೆಯಬಹುದು. 

ಇದನ್ನೂ ಓದಿ : Offer Never Before: 70 ಸಾವಿರ ರೂ. ಬೆಲೆಯ ಈ Dual Screen ಸ್ಮಾರ್ಟ್ ಫೋನ್ ಕೇವಲ ರೂ.30 ಸಾವಿರಕ್ಕೆ ಸಿಗುತ್ತಿದೆ

3. ಈ ಸೆಟ್ಟಿಂಗ್ ಆನ್ ಮಾಡಿಟ್ಟುಕೊಳ್ಳಿ.
ಫೈಂಡ್ ಮೈ ಡಿವೈಸ್ ಬಳಸಬೇಕಾದರೆ ನಿಮ್ಮ ಮೊಬೈಲಿನಲ್ಲಿ ಒಂದು ಸೆಟ್ಟಿಂಗ್ ಆನ್ ಮಾಡಿಟ್ಟುಕೊಳ್ಳಬೇಕಾಗುತ್ತದೆ.  ಆದು ಆಫ್ ಆಗಿದ್ದರೆ  ನಿಮಗೆ ಮನೆಯಲ್ಲಿದ್ದುಕೊಂಡೇ  ನಿಮ್ಮ ಮೊಬೈಲ್ ಅಕ್ಸೆಸ್ ಮಾಡಲು ಸಾಧ್ಯವಿಲ್ಲ. 

4. ಲೊಕೇಶನ್ ಹೀಗೆ ಪತ್ತೆ ಮಾಡಿ.
ಮೊಬೈಲ್ ಕಳೆದು ಹೋದ ತಕ್ಷಣ ಮೊದಲು android.com ಗೆ ಹೋಗಿ. ಗೂಗಲ್ ಅಕೌಂಟ್ ಮೂಲಕ ಲಾಗಿನ್ ಆಗಿ. ಇದರಲ್ಲಿ ನೀವು ನಿಮ್ಮ ಮೊಬೈಲಿನ ಕೆಲವೊಂದು ಅಗತ್ಯ ಮಾಹಿತಿ ಹಾಕಬೇಕಾಗುತ್ತದೆ. ನಂತರ ನಿಮ್ಮ ಮೊಬೈಲಿನ ಸರಿಯಾದ ಲೊಕೇಶನ್ ಮ್ಯಾಪ್‍ನಲ್ಲಿ (Location map)ನಿಮಗೆ ಗೊತ್ತಾಗುತ್ತದೆ. 

ಇದನ್ನೂ ಓದಿ : Subscription ಇಲ್ಲದೆಯೇ FREEಯಾಗಿ ವೀಕ್ಷಿಸಬಹುದು Netflix

5. ಕಳೆದು ಹೋದ ಮೊಬೈಲಿನಲ್ಲಿ ಅಲಾರಮ್ ಬಾರಿಸಿ:
ನಿಮ್ಮ ಮೊಬೈಲಿನ ಲೊಕೇಶನ್ (Mobile Location) ಗೊತ್ತಾದ ಕೂಡಲೆ ಆ ಸ್ಥಳಕ್ಕೆ ಹೋಗಿ.  ಸೌಂಡ್ ಪ್ಲೇ ಆಪ್ಸನ್ ಸೆಲೆಕ್ಟ್ ಮಾಡಿ. ಈ ಅಪ್ಶನ್ ಕ್ಲಿಕ್ ಮಾಡಿದ ತಕ್ಷಣ ನಿಮ್ಮ ಮೊಬೈಲಿನಲ್ಲಿ ನಿರಂತರ 5 ನಿಮಿಷ ಅಲಾರಮ್ ಬಾರಿಸುತ್ತದೆ. ಸೈಲೆಂಟ್ ಮೋಡ್ ನಲ್ಲಿದ್ದರೂ  ಮೊಬೈಲಿನಲ್ಲಿ ಅಲಾರಮ್ ಬಾರಿಸುತ್ತದೆ. ಕಳೆದು ಹೋದ ಮೊಬೈಲಿನ ಬಗ್ಗೆ ಪೊಲೀಸರಿಗೂ ದೂರು ಕೊಡಬಹುದಾಗಿದೆ. 

6. ಫೋನ್ ಲಾಕ್ ಮಾಡಿ, ಡಾಟಾ ಡಿಲೀಟ್ ಮಾಡಿ:
ಬಳಿಕ ಸೆಕ್ಯೂರ್ ಡಿವೈಸ್ ಅಪ್ಶನ್ ಕ್ಲಿಕ್ ಮಾಡಿ, ಫೋನ್ ಲಾಕ್ ಕೂಡಾ ಮಾಡಬಹುದಾಗಿದೆ.  ಇರೇಸ್ ಡಿವೈಸ್ ಅಪ್ಶನ್ ಕ್ಲಿಕ್ ಮಾಡಿದರೆ, ಮೊಬೈಲಿನಲ್ಲಿರುವ ಎಲ್ಲಾ ಡಾಟಾ ಡಿಲೀಟ್ ಆಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News