ಸಖತ್ತಾಗಿದಾಳೆ ಅಂತ ಸರವಾಡಲು ಹೋದ 57ರ ಅಂಕಲ್..! ಬೆಡ್ ರೂಂನಲ್ಲಿ ಶಾಕ್ ಕೊಟ್ಟ 21ರ ಸುಂದರಿ.. ಆಗಿದ್ದೇನು ಗೊತ್ತೆ..?
Crime News : ಆ ಸುಂದರಿಯ ಒಂದು ಸ್ಮೈಲ್ ಗೆ ಅಂಕಲ್ ಕ್ಲೀಡ್ ಬೋಲ್ಡ್ ಆಗಿದ್ದ. ಜಾಲಿಜಾಲಿ ಅಂತಾ ಬ್ಯೂಟಿಯ ಸ್ಕೂಟಿ ಫಾಲೋ ಮಾಡ್ಕೊಂಡು ಆಕೆಯ ಮನೆ ಸೇರಿದ್ದ ಆ ಅಂಕಲ್. ಇನ್ನೇನು ಲಡ್ಡು ಬಂದು ಬಾಯಿಗೆ ಬಿತ್ತು ಅನ್ನೋವಷ್ಟರಲ್ಲಿ ಎಂಟ್ರಿಕೊಟ್ಟ ಗ್ಯಾಂಗ್ ಅಂಕಲ್ ಜೇಬಿಗೆ ಕತ್ತರಿ ಹಾಕಿತ್ತು. ಹಾಗಾದ್ರೆ ಏನಿದು ಅಂಕಲ್, ಸುಂದರಿ ಸ್ಟೋರಿ ಅಂತೀರಾ,ತೋರಿಸ್ತಿವಿ ನೋಡಿ.
ಬೆಂಗಳೂರು : ಈ ಪೋಟೋದಲ್ಲಿ ಕಾಣುವ ಈಕೆಯ ಹೆಸರು ನಯನಾ. ವಯಸ್ಸು ಜಸ್ಟ್ 20 ವರ್ಷ. ಮುದ್ದಾಗಿ ಕಾಣುವ ಈಕೆಯನ್ನು ಕಂಡ್ರೆ ಎಂತವರು ಬೆರಗಾಗುತ್ತಾರೆ. ಅಂತೆಯೇ ಸಿವಿಲ್ ಕಂಟ್ರಾಕ್ಟರ್ ಆಗಿದ್ದ 57 ವರ್ಷದ ಅಂಕಲ್ ಈಕೆಯ ಬುಟ್ಟಿಗೆ ಬಿದ್ದಿದ್ದ. ಒಂದು ವರ್ಷದಿಂದ ಇಬ್ಬರ ನಡುವೆ ಡಿಂಗ್ ಡಾಂಗ್ ಶುರುವಾಗಿತ್ತು. ನಯನಾ ಬೇಕು ಎಂದಾಗೆಲ್ಲಾ ತುಂಟ ಅಂಕಲ್ ಐದು, ಹತ್ತು ಸಾವಿರ ಹಣ ಕೊಡ್ತಿದ್ದ. ಇದನ್ನೇ ಬಂಡವಾಳ ಮಾಡಿಕೊಂಡ ಈ ಐನಾತಿ ಸಖತ್ ಪ್ಲಾನ್ ಮಾಡಿ ಮನೆಗೆ ಕರೆದಿದ್ದಾಳೆ. ಬ್ಯೂಟಿಯ ಸ್ಕೂಟಿ ಫಾಲೋ ಮಾಡಿಕೊಂಡು ಹೋದ ಅಂಕಲ್, ಆಕೆಯ ಮನೆಯ ಸೇರಿದ್ದ. ಆಮೇಲೆ ಅಲ್ಲಿ ನಡೆದಿದ್ದೆ ಅಂಕಲ್ ಯಾಮಾರಿಸೋ ಕೆಲಸ.
ಹೌದು ಕಳೆದ ಒಂಭತನೇ ತಾರೀಖು ಅಂಕಲ್ ಸುಂದರಿ ಮನೆಗೆ ಎಂಟ್ರಿ ಕೊಟ್ಟು ಒಳಗಡೆ ಕೂತಿದ್ದಾನೆ. ಇನ್ನೇನೂ ಪಲ್ಲಂಗದಾಟ ಶುರು ಮಾಡ್ಕೋಬೇಕು, ಅಷ್ಟರೊಳಗೆ ಒಂದು ಟೀಂ ಎಂಟ್ರಿ ಕೊಟ್ಟಿತ್ತು. ಮನೆಯ ಒಳಗಡೆ ವೈಶ್ಯಾವಾಟಿಕೆ ನಡಸುತ್ತಿದ್ದೀರಾ, ನಮಗೆ ಮಾಹಿತಿ ಬಂದಿದೆ, ನಾವು ಕ್ರೈಂ ಪೊಲೀಸರು ಅಂತಾ ಹೆದರಿಸಿದ್ದಾರೆ. ಇದರಿಂದ ಪತರುಗುಟ್ಟಿದ್ದ ಅಂಕಲ್ ನ ಬಟ್ಟೆ ಬಿಚ್ಚಿಸಿ ಹಲ್ಲೆ ಮಾಡಿ ಪೋಟೋ ತೆಗೆದುಕೊಂಡು ಎರಡು ಲಕ್ಷ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆ. ಮೈಮೇಲಿದ್ದ ಚಿನ್ನಾಭರಣ ಕಿತ್ತುಕೊಂಡು, ಪೋನ್ ಪೇ ಮೂಲಕ 26 ಸಾವಿರ ಹಣ ಹಾಕಿಸಿಕೊಂಡು ಬಿಟ್ಟು ಕಳುಹಿಸಿದ್ದಾರೆ.
ಇದನ್ನೂ ಓದಿ:ಮೊದಲ ವಾರವೇ ಎಲಿಮಿನೇಟ್ ಆಗ್ತಾರೆ ಅಂದುಕೊಂಡಿದ್ದ ಈ ಸ್ಪರ್ಧಿಯೇ ಬಿಗ್ ಬಾಸ್ ಕನ್ನಡ 11 ರ ವಿನ್ನರ್ ಆಗ್ತಾರಾ!?
ಇನ್ನೂ ಅಂಕಲ್ ಹಣ, ಚಿನ್ನ ಕಳೆದುಕೊಂಡು ಕಂಗಾಲಾಗಿದ್ದ. ಆತನಿಗೆ ನಕಲಿ ಪೊಲೀಸರು ಅಂತಾ ಅನುಮಾನ ಬಂದಿತ್ತು. ಹೀಗಾಗಿ ಪೊಲೀಸರಿಗೆ ದೂರು ಕೊಡೋಣ ಬಾ ಅಂತಾ ನಯನಾಗೆ ಕರೆದಿದ್ದ. ಆದರೆ ಹೊಸ ವರಸೆ ತೆಗೆದ ಈ ಚಾಲಾಕಿ ನಯನಾ ನಿಮ್ಮ ಮನೆ ಹತ್ತಿರ ಮಗುವನ್ನು ಕರೆದುಕೊಂಡು ಬಂದು ಗಲಾಟೆ ಮಾಡ್ತೇನೆ ಎಂದು ಬೆದರಿಕೆ ಹಾಕಿದ್ದಾಳೆ. ಆಗ ಅಂಕಲ್ ಸೀದಾ ಹೋಗಿ ಬ್ಯಾಡರಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. ತನಿಖೆ ಕೈಗೊಂಡ ಪೊಲೀಸರು ಸುಲಿಗೆ ಗ್ಯಾಂಗ್ ನ ಸಂತೋಷ್, ಅಜಯ್ ,ಜಯರಾಜ್, ಬಂಧಿಸಿದ್ದಾರೆ .ಎಸ್ಕೇಪ್ ಆಗಿರುವ ನಯನಗಾಗಿ ಪೊಲೀಸರ ಹುಡುಕಾಟ ಶುರುವಾಗಿದೆ.
ಆರೋಪಿಗಳು
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.