ದಾವಣಗೆರೆ: ಕೋಳಿ ಸಾಂಬಾರ್ ಮಾಡಿಲ್ಲ ಎಂದು ಕಿರಾತಕ ಪತಿಯೊಬ್ಬ ಪತ್ನಿಯನ್ನೇ ಕೊಲೆ ಮಾಡಿದ್ದಾನೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದಲ್ಲಿ ಈ ಘಟನೆ ನಡೆದಿದೆ.


COMMERCIAL BREAK
SCROLL TO CONTINUE READING

ಶೀಲಾ(29) ಕೊಲೆಯಾದ ಮಹಿಳೆಯಾಗಿದ್ದಾರೆ. ಕೆಂಚಪ್ಪ ಪತ್ನಿ ಹತ್ಯೆ ಮಾಡಿದ ಕೀಚಕ ಪತಿ. 9 ವರ್ಷಗಳ ಹಿಂದೆ ಲವ್ ಮಾಡಿ ಈ ದಂಪತಿ ಮದುವೆಯಾಗಿದ್ದರು. ಪ್ರತಿನಿತ್ಯ ಕುಡಿದು ಬಂದು ಗಲಾಟೆ ಮಾಡುತ್ತಿದ್ದ ಕೆಂಚಪ್ಪ ಪತ್ನಿ ಜೊತೆಗೆ ಕಿರಿಕ್ ಮಾಡುತ್ತಿದ್ದ.


ಇದನ್ನೂ ಓದಿ: Video : ಚಲಿಸುತ್ತಿದ್ದ ರೈಲಿನಡಿ ಸಿಲುಕಿದ ಮಹಿಳೆಯನ್ನು ರಕ್ಷಿಸಿದ ರೈಲ್ವೇ ಪೊಲೀಸ್​ ಸಿಬ್ಬಂದಿ


ಚಿಕನ್ ತಂದು ಸಾಂಬಾರ್ ಮಾಡಿಕೊಡುವಂತೆ ಕೆಂಚಪ್ಪ ಪತ್ನಿ ಜೊತೆಗೆ ಗಲಾಟೆ ಮಾಡಿದ್ದಾನೆ. ಈ ವೇಳೆ ಪತ್ನಿ ಶೀಲಾಳಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಬಳಿಕ ಚಾಕು ಹಿಡಿದು ಸೀದಾ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.


ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಹರಿಹರ ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.


ಇದನ್ನೂ ಓದಿ: ಸಿದ್ದರಾಮಯ್ಯ ಎರಡು ತಲೆ ಹಾವು: ಸಚಿವ ಶ್ರೀರಾಮುಲು


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.