Video : ಚಲಿಸುತ್ತಿದ್ದ ರೈಲಿನಡಿ ಸಿಲುಕಿದ ಮಹಿಳೆಯನ್ನು ರಕ್ಷಿಸಿದ ರೈಲ್ವೇ ಪೊಲೀಸ್​ ಸಿಬ್ಬಂದಿ

ರೈಲು ನಿಲ್ದಾಣಕ್ಕೆ ತಡವಾಗಿ ಬಂದಿದ್ದ ಮಹಿಳೆಯೊಬ್ಬರು ಇನ್ನೇನು ರೈಲು ಹೊರಟೇಬಿಟ್ಟಿತ್ತು ಅನ್ನೋವಷ್ಟರಲ್ಲಿ ಓಡೋಡಿ ಹೋಗಿ ರೈಲು ಹತ್ತಲು ಯತ್ನಿಸಿದ್ದಾರೆ.

Written by - Ranjitha R K | Last Updated : Jun 9, 2022, 01:33 PM IST
  • ರೈಲಿನಡಿ ಸಿಲುಕಿದ ಮಹಿಳೆ
  • ಪೋಲಿಸ್ ಸಿಬ್ಬಂದಿಯಿಂದ ಮಹಿಳೆ
  • ವೈರಲ್ ಆಯಿತು ವಿಡಿಯೋ
Video : ಚಲಿಸುತ್ತಿದ್ದ ರೈಲಿನಡಿ ಸಿಲುಕಿದ ಮಹಿಳೆಯನ್ನು ರಕ್ಷಿಸಿದ  ರೈಲ್ವೇ ಪೊಲೀಸ್​ ಸಿಬ್ಬಂದಿ  title=
women rescue

ಗದಗ : ಚಲಿಸುತ್ತಿದ್ದ ರೈಲು ಹತ್ತುವ ವೇಳೆ ಆಯ ತಪ್ಪಿ ರೈಲಿನಡಿ ಸಿಲುಕಿದ  ಮಹಿಳೆಯನ್ನು ಸ್ಥಳದಲ್ಲಿದ್ದ ರೈಲ್ವೇ ಪೊಲೀಸ್ ಸಿಬ್ಬಂದಿ ರಕ್ಷಿಸಿದ್ದಾರೆ. ಗದಗ ರೈಲ್ವೇ ಜಂಕ್ಷನ್​ನಲ್ಲಿ ಘಟನೆ ನಡೆದಿದ್ದು, ಪೊಲೀಸ್ ಸಿಬ್ಬಂದಿಯ ಸಮಯ ಪ್ರಜ್ಞೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. 

ಗದಗ ರೈಲ್ವೇ ನಿಲ್ದಾಣದಿಂದ ರೈಲು ಪ್ರಯಾಣ ಬೆಳೆಸಿತ್ತು. ರೈಲು ನಿಲ್ದಾಣಕ್ಕೆ ತಡವಾಗಿ ಬಂದಿದ್ದ ಮಹಿಳೆಯೊಬ್ಬರು ಇನ್ನೇನು ರೈಲು ಹೊರಟೇಬಿಟ್ಟಿತ್ತು ಅನ್ನೋವಷ್ಟರಲ್ಲಿ ಓಡೋಡಿ ಹೋಗಿ ರೈಲು ಹತ್ತಲು ಯತ್ನಿಸಿದ್ದಾರೆ. ಆದರೆ, ಆ ಹೊತ್ತಿಗಾಗಲೇ ರೈಲು ಹೊರಟಿದ್ದರಿಂದ ಮಹಿಳೆಗೆ ಆಯ ತಪ್ಪಿದೆ. ಪರಿಣಾಮವಾಗಿ ಅವರೂ ರೈಲಿನಡಿ ಸಿಲುಕಿದ್ದಾರೆ. 

ಇದನ್ನೂ ಓದಿ : #ಚಡ್ಡಿರಾಮಯ್ಯನವರೇ ರಾಜ್ಯದಲ್ಲಿ ನೀವು ಸಿಎಂ ಆಗಿದ್ದಾಗ ಮಾಡಿದ್ದೇನು?: ಬಿಜೆಪಿ

ಆದರೆ ಅಲ್ಲಿಯೇ ಇದ್ದ ಅನ್ವರ್ ಎಂಬ ಪೊಲೀಸ್ ಸಿಬ್ಬಂದಿ, ಮಹಿಳೆಯ ರಕ್ಷಣೆಗೆ ಧಾವಿಸಿದ್ದಾರೆ. ಕೂಡಲೇ ಮಹಿಳೆಯನ್ನು ಹೊರಗೆಳೆಯುವಲ್ಲಿ ಅನ್ವರ್ ಯಶಸ್ವಿಯಾಗಿದ್ದಾರೆ. ಇದಾದ ಬಳಿಕ ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ರೈಲು ಸ್ವಲ್ಪ ಹೊತ್ತು ತಡವಾಗಿ ಚಲಿಸಿದೆ. 

ಪೋಲಿಸ್ ಸಿಬ್ಬಂದಿ ಮಹಿಳೆಯನ್ನ ರಕ್ಷಣೆ ಮಾಡಿರುವ ವಿಚಾರ ತಿಳಿಯುತ್ತಿದ್ದಂತೆಯೇ, ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಅನ್ವರ್​ ಅವರ ಕಾರ್ಯವನ್ನ ಶ್ಲಾಘಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ  ಭಾರೀ ವೈರಲ್ ಆಗಿದ್ದು ಅನ್ವರ್ ಸಮಯ ಪ್ರಜ್ಞೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. 

ಇದನ್ನೂ ಓದಿ : 'ಆಹಾರ ಭದ್ರತೆ ಹಾಗೂ ಸುರಕ್ಷತೆ ಸೂಚ್ಯಂಕದಲ್ಲಿ ಕರ್ನಾಟಕ ಮತ್ತೆ ಕುಸಿತ ಆತಂಕಕಾರಿ'

 

Trending News