Shocking News: ಪ್ರೇಯಸಿಯ ಬರ್ತ್ ಡೇ ಆಚರಿಸಿ ಕೊಲೆ ಮಾಡಿದ ಪಾಗಲ್ ಪ್ರೇಮಿ!
Bangalore crime news: ಅನುಮಾನದ ಭೂತವನ್ನು ತಲೆಗೇರಿಸಿಕೊಂಡ ಪ್ರಶಾಂತ್ ನವ್ಯಾ ಜೊತೆಗೆ ಜೋರು ಗಲಾಟೆ ಮಾಡಿಕೊಂಡಿದ್ದಾನೆ. ಗಲಾಟೆ ಜಾಸ್ತಿಯಾಗಿ ಅಲ್ಲೇ ಇದ್ದ ಚಾಕು ತೆಗೆದುಕೊಂಡು ಪ್ರಶಾಂತ್ ನವ್ಯಾಳ ಕುತ್ತಿಗೆಗೆ ಇರಿದ್ದಿದ್ದಾನೆ.
ಬೆಂಗಳೂರು: ಅವರಿಬ್ಬರದ್ದು ಚೆಂದದ ಪ್ರೀತಿ. ಈ ಪ್ರೀತಿಯಲ್ಲಿ ಕೋಪ ಮುನಿಸು ಎಷ್ಟೇ ಇದ್ದರೂ ಅನುಮಾನ ಮಾತ್ರ ಬರಬಾರದು. ಅದು ಬಂದರೂ ಸಹ ಆ ಕ್ಷಣದಲ್ಲಿಯೇ ಬಗೆಹರಿಸಿಕೊಳ್ಳಬೇಕು. ಇಲ್ಲ ಅಂದರೆ ಪ್ರೀತಿ ದ್ವೇಷವಾಗಿ ದುರಂತಕ್ಕೆ ಕಾರಣವಾಗುತ್ತೆ. ಇಲ್ಲಿ ಆಗಿದ್ದು ಅದೇ ಕಥೆ.
ಆಕೆ ಪೊಲೀಸ್ ಇಲಾಖೆಯಲ್ಲಿ ಎಸ್‍ಎ ಆಗಿ ಕೆಲಸ ಮಾಡುತ್ತಿದ್ದರೆ, ಆತ ಸಿಎನ್‍ಸಿ ಆಪರೇಟರ್ ಆಗಿ ಕೆಲಸ ಮಾಡುತಿದ್ದ. ಆಕೆ ಹೆಸರು ನವ್ಯಾ. ಈತನ ಹೆಸರು ಪ್ರಶಾಂತ್. ನೋಡೋಕೆ ಇಬ್ಬರದ್ದು ಮುದ್ದಾದ ಜೋಡಿ. ಈ ಪ್ರಶಾಂತ ಹುಚ್ಚನ ರೀತಿ ನವ್ಯಾಳನ್ನು ಪ್ರೀತಿಸುತ್ತಿದ್ದ. ಅಂದರೆ ಮುಂದಿನ 18ನೇ ತಾರಿಖು ಇದ್ದ ನವ್ಯಾ ಬರ್ತ್ ಡೇಯನ್ನು ತಾನು ಊರಲ್ಲಿ ಇರೋಲ್ಲ ಅಂತಾ ನಿನ್ನೆಯೇ ಆಚರಿಸಿದ್ದ.
ಇದನ್ನೂ ಓದಿ: "ನನಗೆ ಹೊಂದಾಣಿಕೆ ರಾಜಕೀಯ ಗೊತ್ತಿಲ್ಲ. ನಾನು ಇರುವ ಪಕ್ಷದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ"
ರೂಂ ತುಂಬಾ ಬಲೂನ್ ಕಟ್ಟಿ ಅಲಂಕಾರ ಮಾಡಿ ತನ್ನ ಹುಡುಗಿ ಬರ್ತ್ ಡೇಯನ್ನು 4 ದಿನ ಮೊದಲೇ ಅಚ್ಚುಕಟ್ಟಾಗಿ ಮಾಡಿದ್ದ. ಬರ್ತ್ ಡೇ ಕೇಕ್ ಕಟ್ ಮಾಡಿ ವಾಶ್ ರೂಂಗೆ ಹೋಗಿದ್ದ ನವ್ಯಾ ಅದ್ಯಾರ ಜೊತೆಗೋ ಚಾಟ್ ಶುರುಮಾಡಿದ್ದಳು. ಇದನ್ನು ಗಮನಿಸಿದ ಪ್ರಶಾಂತ್ ಯಾರ ಜೊತೆ ಚಾಟ್ ಮಾಡುತ್ತಿದ್ದೀಯಾ? ಎಂದು ಕೇಳಿದ್ದಾನೆ. ಇದಕ್ಕೆ ಉತ್ತರ ಕೊಡಲು ನಿರಾಕರಿಸಿದ ನವ್ಯಾ ಮೊಬೈಲ್ ಲಾಕ್ ಮಾಡಿ ಏನನ್ನೋ ಮುಚ್ಚಿಡುವ ಪ್ರಯತ್ನ ಮಾಡಿದ್ದಾಳೆ. ಇಷ್ಟೇ ಸಾಕಗಿತ್ತು ಪ್ರಶಾಂತ್‍ನ ಕೋಪ ನೆತ್ತಿಗೇರಲು.
ಅನುಮಾನದ ಭೂತವನ್ನು ತಲೆಗೇರಿಸಿಕೊಂಡ ಪ್ರಶಾಂತ್ ನವ್ಯಾ ಜೊತೆಗೆ ಜೋರು ಗಲಾಟೆ ಮಾಡಿಕೊಂಡಿದ್ದಾನೆ. ಗಲಾಟೆ ಜಾಸ್ತಿಯಾಗಿ ಅಲ್ಲೇ ಇದ್ದ ಚಾಕು ತೆಗೆದುಕೊಂಡು ಪ್ರಶಾಂತ್ ನವ್ಯಾಳ ಕುತ್ತಿಗೆಗೆ ಇರಿದ್ದಿದ್ದಾನೆ. ಬರ್ತ್ ಡೇ ಸಂಭ್ರಮದ ರೂಂನಲ್ಲಿ ನವ್ಯಾ ಒದ್ದಾಡಿ ಒದ್ದಾಡಿ ಪ್ರಾಣ ಬಿಟ್ಟಿದ್ದಾಳೆ.
ಇದನ್ನೂ ಓದಿ: ಬೆಂಬಲ ಬೆಲೆಯಡಿ ಕಡಲೆ ಖರೀದಿ: ಹಣ ಪಾವತಿಯಲ್ಲಿ ವಿಳಂಬ
ಸಂಜೆ ನಡೆದ ಕೊಲೆ ನಂತರ 5 ಗಂಟೆ ಪ್ರೇಯಸಿ ಶವದ ಜೊತೆಗೆ ಪ್ರಶಾಂತ್ ಕಾಲ ಕಳೆದಿದ್ದಾನೆ. ಇನ್ನೂ ಕೊಲೆ ಪ್ರಕರಣ ಸಂಬಂಧಿಸಿ ರಾಜಗೋಪಲನಗರ ಪೊಲೀಸರು ಆರೋಪಿ ಪ್ರಶಾಂತ್‍ನ ವಶಕ್ಕೆ ಪಡೆದಿದ್ದಾರೆ. ಇತ್ತ ತಂದೆ ಸಾವಿನ ನಂತರ ಪೊಲೀಸ್ ಇಲಾಖೆಯಲ್ಲಿ ಕೆಲಸ ಗಿಟ್ಟಿಸಿದ್ದ ನವ್ಯಾ ಸಾವಿನ ಮನೆ ಸೇರಿರೋದು ಕುಟುಂಬಕ್ಕೆ ಮಾತ್ರ ತುಂಬಲಾರದ ನಷ್ಟವಾಗಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.