ಉತ್ತರ ಪ್ರದೇಶದ ಸಿದ್ಧಾರ್ಥನಗರ ಜಿಲ್ಲೆಯಲ್ಲಿ ಇಬ್ಬರು ಮಕ್ಕಳ ಮೇಲೆ ಕಳ್ಳತನದ ಅನುಮಾನದ ಮೇಲೆ ಅಮಾನುಷ ಕೃತ್ಯ ಎಸಗಲಾಗಿದ್ದು, ಅದನ್ನು ಕೇಳಿ ನೀವೂ ಕೂಡ ಬೆಚ್ಚಿಬೀಳುವಿರಿ. ಮಕ್ಕಳಿಗೆ ಬಲವಂತವಾಗಿ ಮೂತ್ರ ಕುಡಿಸಿ, ಅವರ ಖಾಸಗಿ ಅಂಗಗಳಿಗೆ ಹಸಿ ಮೆಣಸಿನಕಾಯಿ ಹಾಕಿ, ಇಂಜೆಕ್ಷನ್ ನೀಡಲಾಗಿದೆ. ಇಷ್ಟಾದರೂ ಕೂಡ ಸುತ್ತಮುಂತ್ತ ನೆರೆದ ಜನರು ಮಾತ್ರ ಪ್ರೇಕ್ಷಕರಂತೆ ನಿಂತು ಘಟನೆ ನೋಡಿದ್ದಾರೆ. ಆದರೆ, ಇದೀಗ ಘಟನೆಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಈ ವೇಳೆ ಸುತ್ತಲೂ ನಿಂತಿರುವ ಜನರು ಬಾಯಿಗೆ ಬಂದ ಹಾಗೆ ಮಾತನಾಡುತ್ತಾ, ಸಂತ್ರಸ್ತರಿಗೆ ಚಿತ್ರಹಿಂಸೆ ನೀಡುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಆರೋಪಿ ಇಷ್ಟಕ್ಕೇ ನಿಂತಿಲ್ಲ. ಯಾವುದೋ ಒಂದು ಔಷಧಿ ತುಂಬಿದ ಇಂಜೆಕ್ಷನ್ ನಿಂದ ಖಾಸಗಿ ಅಂಗಕ್ಕೆ ಚುಚ್ಚುಮದ್ದು ನೀಡಿದ್ದಾನೆ ಮತ್ತು ಅವರ ಖಾಸಗಿ ಅಂಗಕ್ಕೆ ಹಸಿಮೆಣಸಿನಕಾಯಿ ಹಾಕಿದ್ದಾನೆ. ಪೀಡಿತ ಬಾಲಕರ ವಯಸ್ಸು 10 ರಿಂದ 15 ವರ್ಷಗಳು ಎಂದು ಹೇಳಲಾಗಿದೆ. ಈ ಪ್ರಕರಣವು ಪತ್ರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಠಾಣೆ ಎಸ್‌ಎಚ್‌ಒ ಅಜಯ್‌ಕುಮಾರ್‌ ತಿಳಿಸಿದ್ದಾರೆ.


ಇದನ್ನೂ ಓದಿ-ಈ ಐದು ಬ್ಯಾಂಕ್ ಗಳಲ್ಲಿ SB Account ಮೇಲೆಯೇ ಸಿಗುತ್ತಿದೆ ಶೇ.7.5 ರಷ್ಟು ಬಡ್ಡಿ!


ಮಕ್ಕಳ ಮೇಲೆ ದೌರ್ಜನ್ಯ ನಡೆದಿದ್ದೇಕೆ?
ಇನ್ನಿಬ್ಬರು ಆರೋಪಿಗಳ ಮೇಲೆ ನಿಗಾ ಇರಿಸಲಾಗಿದ್ದು, ಆದಷ್ಟು ಬೇಗ ಅವರನ್ನು ಕೂಡ ಬಂಧಿಸಲಾಗುವುದು ಎಂದು ಎಸ್‌ಎಚ್‌ಒ ಅಜಯ್ ಕುಮಾರ್ ಹೇಳಿದ್ದಾರೆ. ಈ ಪ್ರಕರಣದಲ್ಲಿ ತಕ್ಷಣವೇ ಎಫ್‌ಐಆರ್ ದಾಖಲಿಸಲಾಗಿದೆ. ಈ ದೌರ್ಜನ್ಯ ನಡೆದಿರುವ ಮಕ್ಕಳು ಮಾನಸಿಕವಾಗಿಯೂ ದುರ್ಬಲರಾಗಿದ್ದಾರೆ. ಮಕ್ಕಳು ಗಲ್ಲೆಯಿಂದ ಹಣವನ್ನು ಕದ್ದಿದ್ದಾರೆ ಎಂದು ಆರೋಪಿಗಳು ಆರೋಪಿಸಿದ್ದಾರೆ. ಕೋಳಿ ಅಂಗಡಿಯೊಂದರಲ್ಲಿ ಈ ಘಟನೆ ನಡೆದಿದೆ ಎಂಬುದು ಅವರ ಆರೋಪ.


ಇದನ್ನೂ ಓದಿ-ಕೇವಲ 25 ಸಾವಿರ ಹೂಡಿಕೆ ಮಾಡಿದ್ರೆ 70 ಲಕ್ಷಕ್ಕೂ ಅಧಿಕ ಲಾಭ ಕೊಡುತ್ತೇ ಈ ಉದ್ಯಮ!


ಮಕ್ಕಳೊಂದಿಗೆ ನಡೆದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ
ಮಕ್ಕಳೊಂದಿಗೆ ನಡೆದ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆರೋಪಿಗಳು ಕಲ್ಲು ಮನಸ್ಸಿನವರಾಗಿದ್ದು, ದೌರ್ಜನ್ಯದ ಬಳಿಕ ಇಬ್ಬರು ಮಕ್ಕಳಿಗೂ ಬಲವಂತವಾಗಿ ಮೂತ್ರ ಕೂಡಿಸಿದ್ದಾರೆ. ಈ ವಿಡಿಯೋ ಪತ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ಕಂಕಟಿ ಚೌಕದ ಬಳಿ ನಡೆದಿದೆ. ಪೊಲೀಸರು ಇದೀಗ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.