Chandrashekhar Guruji Murder: ಗುರೂಜಿ ಹಂತಕರು ಯಾರು? ಕೊಲೆಗೆ ಕಾರಣವೇನು..?
ವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ ಹತ್ಯೆಯಿಂದ ಸಾವಿರಾರು ಜನರ ಜೀವನ ಅತಂತ್ರವಾಗಿದೆ. ಮಾಜಿ ಸಿಬ್ಬಂದಿಗಳಿಂದಲೇ ಕೊಲೆಯಾದ ಮಾನವಗುರು ಸರಳವಾಸ್ತು ಪರಿಕಲ್ಪನೆ ಹುಟ್ಟು ಹಾಕಿ, ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸಿದ್ದರು.
ಹುಬ್ಬಳ್ಳಿ: ಖ್ಯಾತ ಜ್ಯೋತಿಷಿ, ವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ ಹತ್ಯೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಹುಬ್ಬಳ್ಳಿಯ ಖಾಸಗಿ ಹೋಟೆಲ್‍ನಲ್ಲಿ ಚಂದ್ರಶೇಖರ್ ಗುರೂಜಿಯನ್ನು ಭೀಕರವಾಗಿ ಕೊಲೆ ಮಾಡಿದ್ದು ಅವರ ಮಾಜಿ ಸಿಬ್ಬಂದಿ ಎಂದು ತಿಳಿದುಬಂದಿದೆ.
2012ರಿಂದ ಸರಳವಾಸ್ತು ಸಂಸ್ಥೆಯಲ್ಲಿ ಮಹಾಂತೇಶ್ ಶಿರೂರ ಮತ್ತು ವನಜಾಕ್ಷಿ ಕೆಲಸ ಮಾಡುತ್ತಿದ್ದರು. ಬಳಿಕ ಇವರಿಬ್ಬರು ಪ್ರೀತಿಸಿ ವಿವಾಹವಾಗಿದ್ದರು. ಆ ಸಮಯದಲ್ಲಿಯೇ ಮಹಾಂತೇಶ್ ಶಿರೂರ ಸರಳವಾಸ್ತುವಿನ ಮುಂಬೈ ಬ್ರಾಂಚ್ ಹೆಡ್ ಆಗಿದ್ದ. ಅಲ್ಲಿ ವಾಸ್ತು ಬಗ್ಗೆ ಸೆಮಿನಾರ್, ಇವೆಂಟ್ ಮ್ಯಾನೇಜ್‍ಮೆಂಟ್ ಹೊಣೆ ಮಹಾಂತೇಶ್ ಮೇಲಿತ್ತು. ಅದೇ ಸಮಯ ಬಳಸಿಕೊಂಡಿದ್ದ ಮಹಾಂತೇಶ್ ಸಂಸ್ಥೆಯ ಹಣ ದುರ್ಬಳಕೆ ಮಾಡಿಕೊಂಡಿದ್ದ. ಈ ವಿಚಾರ ತಿಳಿದ ಗುರೂಜಿ 2017ರಲ್ಲಿ ಆತನನ್ನು ಕೆಲಸದಿಂದ ತೆಗೆದುಹಾಕಿದ್ದರು.
ಇದನ್ನೂ ಓದಿ: ವಾಸ್ತು ಜೋತಿಷ್ಯದಿಂದ ನೊಂದವರಿಂದಲೇ ಚಂದ್ರಶೇಖರ್ ಗುರೂಜಿ ಹತ್ಯೆ?
ಮಹಾಂತೇಶ್ ಕೆಲಸ ಕಳೆದುಕೊಂಡರೂ ಆತನ ಪತ್ನಿ ವನಜಾಕ್ಷಿ 2019ರವರೆಗೂ ಅಲ್ಲಿಯೇ ಕಾರ್ಯ ನಿರ್ವಹಿಸಿದ್ದರು. ನೋಟ್ ಬ್ಯಾನ್ ಬಳಿಕ ಚಂದ್ರಶೇಖರ್ ಗುರೂಜಿ ವ್ಯವಹಾರದಲ್ಲಿ ಇಳಿಮುಖವಾಗಿತ್ತು. ಆಗ ಹೆಚ್ಚು ಸಂಬಳ ಪಡೆಯುತ್ತಿದ್ದ ವನಜಾಕ್ಷಿಯನ್ನು ಕೆಲಸದಿಂದ ತೆಗೆಯಲಾಗಿತ್ತು. ಸಾಕಷ್ಟು ನಷ್ಟ ಆದ ಕಾರಣ ಬೇನಾಮಿ ಆಸ್ತಿಯನ್ನು ಗುರೂಜಿ ವಾಪಸ್ ಕೇಳಿದ್ದರು. 2ನೇ ಆರೋಪಿ ಮಂಜುನಾಥನ ಹೆಸರಿನಲ್ಲಿಯೂ ಗುರೂಜಿ ಬೇನಾಮಿ ಆಸ್ತಿ ಮಾಡಿದ್ದರು. ಈ ಆಸ್ತಿ ವಾಪಸ್ ಕೇಳಿದ್ದರಿಂದಲೇ ತೆರೆಮರೆಯ ವಾರ್ ಶುರುವಾಗಿತ್ತು. ಆಸ್ತಿ ವಾಪಸ್ ಕೇಳಿದ್ದಕ್ಕೆ ಮಹಾಂತೇಶ್ & ಮಂಜುನಾಥ ಪಿತ್ತ ನೆತ್ತಿಗೇರಿಸಿಕೊಂಡಿದ್ದರು. ಆಸ್ತಿ ವಾಪಸ್ ಕೇಳಿದಾದ ಇಬ್ಬರು ಹಂತಕರು ಒಂದಾಗಿ ಗುರೂಜಿ ಹತ್ಯೆಗೆ ಮಾಸ್ಟರ್ ಪ್ಲಾನ್ ಮಾಡಿದ್ದರು.
ಸಾವಿರಾರು ಜನರ ಜೀವನ ಅತಂತ್ರ!
ವಾಸ್ತತಜ್ಞ ಚಂದ್ರಶೇಖರ್ ಗುರೂಜಿ ಹತ್ಯೆಯಿಂದ ಸಾವಿರಾರು ಜನರ ಜೀವನ ಅತಂತ್ರವಾಗಿದೆ. ಮಾಜಿ ಸಿಬ್ಬಂದಿಗಳಿಂದಲೇ ಕೊಲೆಯಾದ ಮಾನವಗುರು ಸರಳವಾಸ್ತು ಪರಿಕಲ್ಪನೆ ಹುಟ್ಟು ಹಾಕಿ, ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸಿದ್ದರು. ಸರಳವಾಸ್ತು ಕಾಲ್ ಸೆಂಟರ್, ವಾಸ್ತು ಎಕ್ಸಪರ್ಟ್ಸ್ ಆಗಿ ದೇಶಾದ್ಯಂತ 2 ಸಾವಿರ ಜನರಿಗೆ ಉದ್ಯೋಗ ನೀಡಿದ್ದ ಗುರೂಜಿ ಸಲಹೆ ಪಡೆದು ಸಹಸ್ರ ಜನರು ಅಭಿವೃದ್ಧಿ ಕಂಡಿದ್ದರಂತೆ. ಗುರೂಜಿ ಕಳೆದುಕೊಂಡು ಜ್ಯೋತಿಷ್ಯ ಲೋಕ ಅನಾಥವಾಗಿದೆ. ಅವರು ಜ್ಯೋತಿಷ್ಯ ಹಾಗೂ ವಾಸ್ತುಶಾಸ್ತ್ರವನ್ನು ದೊಡ್ಡ ಉದ್ಯಮವನ್ನಾಗಿಸಿದ್ದರು.
ಇದನ್ನೂ ಓದಿ: CCTV Footage: ಖ್ಯಾತ ಜೋತಿಷ್ಯಾಚಾರ್ಯ ಚಂದ್ರಶೇಖರ್ ಹತ್ಯೆ, ಇಲ್ಲಿದೆ ಹಂತಕನ CCTV ಫೂಟೇಜ್
ಇಂದು ಗುರೂಜಿ ಅಂತ್ಯಕ್ರಿಯೆ
ತಮ್ಮ ಕಚೇರಿಯ ಮಾಜಿ ಸಿಬ್ಬಂದಿಗಳಿಂದಲೇ ಬರ್ಬರವಾಗಿ ಹತ್ಯೆಯಾಗಿರುವ ವಾಸ್ತುತಜ್ಞ ಚಂದ್ರಶೇಖರ್ ಗುರೂಜಿಯವರ ಅಂತ್ಯಕ್ರಿಯೆ ಇಂದು ಹುಬ್ಬಳ್ಳಿಯಲ್ಲಿ ನಡೆಯಲಿದೆ. ಅಂತ್ಯಕ್ರಿಯೆ ಹಿನ್ನೆಲೆ ಕಿಮ್ಸ್ ನ ಶವಾಗಾರದ ಬಳಿ ಗುರೂಜಿ ಸಂಬಂಧಿಗಳು ಆಗಮಿಸಿದ್ದಾರೆ. ಶಿವಮೊಗ್ಗ ಹಾಗೂ ಬೆಂಗಳೂರು ಸೇರಿದಂತೆ ಹಲವು ಭಾಗದಿಂದ ಆಗಮಿಸಿರುವ ಸಂಬಂಧಿಕರು ಗುರೂಜಿ ಸಾವಿಗೆ ನ್ಯಾಯ ಸಿಗಬೇಕು. ಹಂತರಕರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ