CCTV Footage: ಖ್ಯಾತ ಜೋತಿಷ್ಯಾಚಾರ್ಯ ಚಂದ್ರಶೇಖರ್ ಹತ್ಯೆ, ಇಲ್ಲಿದೆ ಹಂತಕರ CCTV ಫೂಟೇಜ್

CCTV Footage: ಜ್ಯೋತಿಶಾಚಾರ್ಯ ಚಂದ್ರಶೇಖರ್ ಅವರು ಹುಬ್ಬಳ್ಳಿಯ ಪ್ರೆಸಿಡೆಂಟ್ ಹೊಟೇಲ್‌ನಲ್ಲಿದ್ದಾಗ ಕೆಲವರು ಅವರನ್ನು ಭೇಟಿ ಮಾಡಲು ಹೋಟೆಲ್ ಲಾಬಿಗೆ ಬಂದಿದ್ದರು ಎನ್ನಲಾಗಿದೆ.  

Written by - Zee Kannada News Desk | Last Updated : Jul 5, 2022, 05:55 PM IST
  • ಸರಳ ವಾಸ್ತು ಖ್ಯಾತಿಯ ಜ್ಯೋತಿಷಿ ಚಂದ್ರಶೇಖರ್ ಹತ್ಯೆ
  • ಘಟನಾ ಸ್ಥಳದ ಸಿಸಿಟಿವಿ ಫೂಟೇಜ್ ಬಹಿರಂಗ
  • ದೃಶ್ಯಾವಳಿಯಲ್ಲಿ ಕಂಡ ಹಂತಕರು
CCTV Footage: ಖ್ಯಾತ ಜೋತಿಷ್ಯಾಚಾರ್ಯ ಚಂದ್ರಶೇಖರ್ ಹತ್ಯೆ, ಇಲ್ಲಿದೆ ಹಂತಕರ CCTV ಫೂಟೇಜ್ title=
CCTV Footage

CCTV Footage:  ಕರ್ನಾಟಕದ ಹುಬ್ಬಳ್ಳಿಯಲ್ಲಿ ಮಂಗಳವಾರ ಸರಳ ವಾಸ್ತು ಖ್ಯಾತಿಯ ಜ್ಯೋತಿಷಿ ಚಂದ್ರಶೇಖರ್ ಅವರನ್ನು ಹತ್ಯೆ ಮಾಡಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಜ್ಯೋತಿಶಾಚಾರ್ಯ ಚಂದ್ರಶೇಖರ್ ಹುಬ್ಬಳ್ಳಿಯ ಪ್ರೆಸಿಡೆಂಟ್ ಹೋಟೆಲ್‌ನಲ್ಲಿದ್ದಾಗ ಕೆಲವರು ಅವರನ್ನು ಭೇಟಿ ಮಾಡಲು ಹೋಟೆಲ್ ಲಾಬಿಗೆ ಬಂದಿದ್ದರು ಎನ್ನಲಾಗಿದೆ. ಅವರಲ್ಲಿದ್ದ ದಾಳಿಕೋರ ಮೊದಲು ಗುರೂಜಿಯವರ ಪಾದ ಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆದಿದ್ದಾನೆ ಎನ್ನಲಾಗಿದೆ. ನಂತರ ಮುಂದಿನ ಕ್ಷಣವೇ ಅವರ ದೇಹವನ್ನು ಆತ ಚಾಕುವಿನಂತಹ ಹರಿತವಾದ ಆಯುಧದಿಂದ ಹಲವು ಬಾರಿ ಇರಿದಿದ್ದಾನೆ. ದಾಳಿಕೋರ ಗುರೂಜಿಯ ಮೇಲೆ ಒಟ್ಟು 17 ಬಾರಿ ದಾಳಿ ನಡೆಸಿದ್ದಾನೆ ಎನ್ನಲಾಗಿದ್ದು, ನಂತರ ಅವರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ-Big News: ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಭೀಕರ ಕೊಲೆ

ಸಿಸಿಟಿವಿ ಕಣ್ಣಲ್ಲಿ ಸೆರೆಯಾದ ಘಟನೆ
ಈ ವೇಳೆ ಹೋಟೆಲ್ ಆವರಣದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ದೃಶ್ಯಾವಳಿಯಲ್ಲಿ ಇಡೀ ಘಟನೆ ಸೆರೆಯಾಗಿದೆ. ಇದರಲ್ಲಿ ಆರೋಪಿಗಳು ಕೊಲೆ ಮಾಡಿ ಓಡಿ ಹೋಗುತ್ತಿರುವುದು ಕಂಡು ಬರುತ್ತಿದೆ. ದಾಳಿಕೋರರು ಯಾರು ಮತ್ತು ಕೊಲೆಗೆ ಕಾರಣವೇನು ಎಂಬ ಬಗ್ಗೆ ಏನೂ ತಿಳಿದುಬಂದಿಲ್ಲ. ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಘಟನೆ ಕುರಿತು ತನಿಖೆ ಆರಂಭಿಸಿದ್ದಾರೆ. ಚಂದ್ರಶೇಖರ ಗುರುಗಳು ಮೂಲತಃ ಬಾಗಲಕೋಟೆಯವರಾಗಿದ್ದು, ಯಾವುದೋ ಕುಟುಂಬ ಕಾರಣದಿಂದ ಹುಬ್ಬಳ್ಳಿಗೆ ಬಂದಿದ್ದರು ಎನ್ನಲಾಗಿದೆ.

ಇದನ್ನೂ ಓದಿ-30 ವರ್ಷಗಳ ಬಳಿಕ ತನ್ನ ಮೂಲ ತ್ರಿಕೋನ ರಾಶಿಯಲ್ಲಿ ಈ ಗ್ರಹ, ವಿಶೇಷ ಕಾಕತಾಳೀಯದಿಂದ ಈ ಜನರ ಕನಸು ನನಸು

ಮೂಲಗಳ ಪ್ರಕಾರ ಇಂದು ಮಧ್ಯಾಹ್ನ 12ರ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಇಬ್ಬರು ದಾಳಿಕೋರರು ಗುರುಗಳನ್ನು ಸಮೀಪಿಸುತ್ತಿದ್ದಂತೆ ಚಾಕುವಿನಂತ ಕಾಣುತ್ತಿರುವ ಹರಿತವಾದ ಆಯುಧದಿಂದ ಈ ಹತ್ಯೆ ನಡೆಸಿದ್ದಾರೆ. ಪೊಲೀಸ್ ಕಮಿಷನರ್ ಎಲ್ ರಾಮ್, ಡಿಸಿಪಿ ಕಾನೂನು ಮತ್ತು ಸುವ್ಯವಸ್ಥೆ, ಡಿಇಸಿಪಿ ಕ್ರೈಂ ಮತ್ತು ಟ್ರಾಫಿಕ್ ಹತ್ಯೆ ನಡೆದ ತಕ್ಷಣ ಸ್ಥಳಕ್ಕೆ ಆಗಮಿಸಿದ್ದಾರೆ. ಆರೋಪಿಗಳ ಪತ್ತೆಗೆ ಶ್ವಾನದಳವನ್ನು ಕರೆಸಲಾಗಿದೆ. ಅದೇ ವೇಳೆ ಮೃತದೇಹವನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News