Daler Mehndi Arrest: ಖ್ಯಾತ ಪಂಜಾಬಿ ಗಾಯಕ ದಲೇರ್ ಮೆಹಂದಿ ಅವರನ್ನು ಬಂಧಿಸಲಾಗಿದೆ. ವಿದೇಶಕ್ಕೆ ಮಾನವ ಸಾಗಾಣಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರಿಗೆ 2 ವರ್ಷ ಜೈಲು ಶಿಕ್ಷೆಯಾಗಿದೆ. ಅಕ್ರಮವಾಗಿ ವಿದೇಶಗಳಿಗೆ ಜನರನ್ನು ಕಳುಹಿಸಿದ ಆರೋಪ ಅವರ ಮೇಲಿದೆ. ಇದಕ್ಕೂ ಮೊದಲು ಪಟಿಯಾಲಾದ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟ್ ಮೆಹಂದಿ ವರಿಗೆ 2 ವರ್ಷ ಜೈಲು ಶಿಕ್ಷೆ ಹಾಗೂ 2 ಸಾವಿರ ದಂಡ ವಿಧಿಸಿ ಆದೇಶ ನೀಡಿತ್ತು. ಈ ಹಿನ್ನೆಲೆ ಗುರುವಾರ ಅವರನ್ನು ಬಂಧಿಸಲಾಗಿದೆ. 


COMMERCIAL BREAK
SCROLL TO CONTINUE READING

ಈ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ನಡೆಯುತ್ತಿತ್ತು
27 ಆಗಸ್ಟ್ 2003ರಲ್ಲಿ ನಮೂದಾದ ಎಫ್ಐಆರ್ ಸಂಖ್ಯೆ 498ರ IPS u/s 406,420,120B, 465,468,471 ಮತ್ತು ಭಾರತೀಯ ಪಾಸ್‌ಪೋರ್ಟ್ ಕಾಯ್ದೆಯ ಅಡಿ ಈ ಪ್ರಕರಣ ನಮೂದಿಸಲಾಗಿತ್ತು, HS ಗ್ರೆವಾಲ್ ನ್ಯಾಯಾಲಯವು ಆರೋಪಿ ಗಾಯಕ ದಲೇರ್ ಮೆಹಂದಿ ಅವರು ಸಲ್ಲಿಸಿದ್ದ  ಮೇಲ್ಮನವಿಯ ವಿರುದ್ಧ 2 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ದಲೇರ್ ಮೆಹಂದಿ ಅವರಿಗೆ 16 ಮಾರ್ಚ್ 2018 ರಂದು ಜೆಎಂಐಸಿ ಪಟಿಯಾಲ 2 ವರ್ಷಗಳ ಶಿಕ್ಷೆ ವಿಧಿಸಿತ್ತು. ಇದೀಗ ಪಂಜಾಬ್‌ನ ಪಟಿಯಾಲ ಸೆಷನ್ಸ್ ನ್ಯಾಯಾಲಯವು ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ಅವರಿಗೆ ವಿಧಿಸಿದ್ದ ಜೈಲು ಶಿಕ್ಷೆಯನ್ನು ಎತ್ತಿ ಹಿಡಿದಿದೆ.


ಇದನ್ನೂ ಓದಿ-ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜೀಗೆ ಈ ಭಾಷೆ ಕಲಿಯಬೇಕಂತೆ..!


18 ವರ್ಷ ಹಳೆಯ ಪ್ರಕರಣ
ಈ ಮಾನವ ಕಳ್ಳಸಾಗಣೆ ಪ್ರಕರಣ ವರ್ಷ 2003ಕ್ಕೆ ಸಂಬಂಧಿಸಿದೆ. ಪ್ರಕರಣದಲ್ಲಿ ದಲೇರ್ ಮೆಹಂದಿ ಮತ್ತು ಅವರ ಸಹೋದರನ ವಿರುದ್ಧ ಒಟ್ಟು 31 ಪ್ರಕರಣಗಳು ದಾಖಲಾಗಿದ್ದವು.


ಇದನ್ನೂ ಓದಿ-NABARD Grade A Recruitment 2022 : NABARD ದಲ್ಲಿ 170 ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ : ವಿವರಗಳಿಗೆ ಇಲ್ಲಿ ಓದಿ


ಏನಿದು ಪ್ರಕರಣ?
2003 ರಲ್ಲಿ ದಾಖಲಾದ ಪ್ರಕರಣದ ಪ್ರಕಾರ, ಮೆಹಂದಿ ಸಹೋದರರು 1998 ಮತ್ತು 1999 ರಲ್ಲಿ ಎರಡು ತಂಡಗಳನ್ನು ರಚಿಸಿದ್ದರು. ಈ ಸಂದರ್ಭದಲ್ಲಿ 10 ಮಂದಿಯನ್ನು ಗ್ರೂಪ್ ಸದಸ್ಯರನ್ನಾಗಿ ಅಮೆರಿಕಕ್ಕೆ ಕರೆದೊಯ್ಯಲಾಗಿತ್ತು ಮತ್ತು ನಂತರ ಅವರನ್ನು ಅಲ್ಲಿಯೇ ಅಕ್ರಮವಾಗಿ ಬಿಟ್ಟು ಬಂದಿದ್ದಾರೆ ಎನ್ನಲಾಗಿದೆ. ಇದಕ್ಕಾಗಿ ಮೆಹಂದಿ ಸಹೋದರರು ಅಪಾರ ಹಣವನ್ನು ಕೂಡ ಪಡೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. 


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.