ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬ ಲಿವ್-ಇನ್ ಇದ್ದ ತನ್ನ ಸಂಗಾತಿಯನ್ನು ಕತ್ತು ಹಿಸುಕಿ ಹತ್ಯೆ ಮಾಡಿ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ 18 ದಿನಗಳ ಕಾಲ ಪ್ರಿಡ್ಜ್‌ನಲ್ಲಿ ಇಟ್ಟು ನಂತರ ಮೆಹ್ರೌಲಿ ಅರಣ್ಯದಲ್ಲಿ ಎಸೆದ ಭಯಾನಕ ಪ್ರಕರಣವೊಂದು ಬೆಳಕಿಗೆ ಬಂದಿದೆ. ದೇಹದ ಭಾಗಗಳನ್ನು ಬಿಸಾಡಲು ಅವನು ಪ್ರತಿದಿನ ಮುಂಜಾನೆ 2 ಗಂಟೆಗೆ ಹೊರಹೋಗುತ್ತಿದ್ದ ಎಂದು ಮೂಲಗಳು ತಿಳಿಸಿವೆ. ಸದ್ಯ ಆರೋಪಿಯನ್ನು 5 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.


COMMERCIAL BREAK
SCROLL TO CONTINUE READING

ಅಫ್ತಾಬ್ ಅಮೀನ್ ಪೂನಾವಾಲಾ ಕೊಲೆಗೈದ ವ್ಯಕ್ತಿ. 28, ಮೇ 18 ರಂದು ತನ್ನ ಪ್ರೇಯಸಿ ಶ್ರದ್ಧಾ ಜೊತೆ ಜಗಳವಾಡಿ ಅವಳನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ಅವುಗಳನ್ನು ಇರಿಸಿಕೊಳ್ಳಲು 300-ಲೀಟರ್ ಫ್ರಿಜ್ ಅನ್ನು ಖರೀದಿಸಿದ್ದ. ಮುಂದಿನ 18 ದಿನಗಳಲ್ಲಿ, ಶ್ರದ್ಧಾ ದೇಹದ ತುಂಡುಗಳನ್ನು ಮೆಹ್ರೌಲಿ ಅರಣ್ಯದ ವಿವಿಧ ಪ್ರದೇಶಗಳಲ್ಲಿ ಎಸೆದಿದ್ದಾನೆ ಪೊಲೀಸರು ಮಾಹಿತಿ ನೀಡಿದ್ದಾರೆ. ಇಬ್ಬರು ಮುಂಬೈನಲ್ಲಿ ಕೆಲಸ ಮಾಡುವಾಗ ಪ್ರೀತಿ ಶುರುವಾಗಿತ್ತು. ಅವರ ಕುಟುಂಬಗಳು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಈ ಕುರಿತು ಇಬ್ಬರ ಮಧ್ಯದಲ್ಲಿ ಜಗಳವಾಗುತ್ತಿತ್ತು. ಇದು ಉಲ್ಬಣಗೊಂಡು ಆಕೆಯ ಕತ್ತು ಹಿಸುಕಿ ಕೊಂದಿದ್ದಾನೆ ಎಂದು ದಕ್ಷಿಣ ಜಿಲ್ಲೆಯ ಹೆಚ್ಚುವರಿ ಡಿಸಿಪಿ-I ಅಂಕಿತ್ ಚೌಹಾಣ್ ಹೇಳಿದ್ದಾರೆ.


ಇದನ್ನೂ ಓದಿ: 7th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ಭಾರೀ ಪ್ರಮಾಣದಲ್ಲಿ ಡಿಎ ಹೆಚ್ಚಳ-ಲೆಕ್ಕಾಚಾರ ಹೀಗಿದೆ


26 ವರ್ಷದ ಶ್ರದ್ಧಾ ಮುಂಬೈನ ಬಹುರಾಷ್ಟ್ರೀಯ ಕಂಪನಿಯ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದಳು, ಅಲ್ಲಿ ಅವಳು ಪೂನಾವಾಲಾಳನ್ನು ಭೇಟಿಯಾದಳು. ಇಬ್ಬರೂ ಡೇಟಿಂಗ್ ಮಾಡಲು ಪ್ರಾರಂಭಿಸಿದರು ಮತ್ತು ಒಟ್ಟಿಗೆ ವಾಸವಾಗಿದ್ದರು. ಅವರ ಕುಟುಂಬ ಇವರ ಪ್ರೀತಿಗೆ ಒಪ್ಪಿರಲಿಲ್ಲ. ನಂತರ, ದಂಪತಿಗಳು ಓಡಿಹೋಗಿ ದೆಹಲಿಗೆ ಬಂದು ಮೆಹ್ರೌಲಿಯ ಫ್ಲಾಟ್‌ ಒಂದರಲ್ಲಿ ವಾಸಿಸುತ್ತಿದ್ದರು. 


ಸ್ವಲ್ಪ ಸಮಯದ ನಂತರ, ಆಕೆಯ ಸ್ನೇಹಿತರೊಬ್ಬರು ಶ್ರದ್ಧಾ ಅವರ ಸಹೋದರನಿಗೆ ಕರೆ ಮಾಡಿ ಆಕೆಯ ಫೋನ್ 2 ತಿಂಗಳಿನಿಂದ ಸ್ವಿಚ್ ಆಫ್ ಆಗಿರುವ ಬಗ್ಗೆ ತಿಳಿಸಿದರು. ನವೆಂಬರ್ 8 ರಂದು, ಆಕೆಯ ತಂದೆ ವಿಕಾಸ್ ಮದನ್ ವಾಕರ್ ಅವರು ತಮ್ಮ ಮಗಳನ್ನು ಹುಡುಕುತ್ತಾ ದೆಹಲಿಗೆ ಬಂದರು. ಅವರ ಫ್ಲ್ಯಾಟ್‌ಗೆ ಬೀಗ ಹಾಕಿರುವುದು ಕಂಡುಬಂದಿದೆ. ಆಗ ಮೆಹ್ರೌಲಿ ಪೊಲೀಸರನ್ನು ಸಂಪರ್ಕಿಸಿದರು. ಮಗಳ ಅಪಹರಣವಾಗಿದೆ ಎಂಬ ಆರೋಪದ ಮೇಲೆ ದೂರು ದಾಖಲಿಸಿದರು. ಅಲ್ಲದೆ, ಪೂನಾವಾಲಾ ತಮ್ಮ ಮಗಳಿಗೆ ಹೊಡೆಯುತ್ತಿದ್ದ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.


ಇದನ್ನೂ ಓದಿ: Bank Strike: ದೇಶಾದ್ಯಂತ ಈ ದಿನ ಬ್ಯಾಂಕ್ ಮುಷ್ಕರ, ಎಟಿಎಂ ಮತ್ತು ಇತರ ಸೇವೆಗಳ ಮೇಲೂ ಪರಿಣಾಮ


ಇದರ ಆಧಾರದ ಮೇಲೆ ಪೊಲೀಸರು ಪೂನಾವಾಲಾ ಅವರನ್ನು ಶನಿವಾರ ಬಂಧಿಸಿದ್ದಾರೆ. ಶ್ರದ್ಧಾ ಅವನನ್ನು ಮದುವೆಯಾಗಲು ಬಯಸಿದ್ದರಿಂದ ಇಬ್ಬರೂ ಆಗಾಗ್ಗೆ ಜಗಳವಾಡುತ್ತಿದ್ದರು ಎಂದು ತನಿಖೆಯ ವೇಳೆ ಆತ ಬಹಿರಂಗಪಡಿಸಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪೊಲೀಸರು ಪೂನಾವಾಲಾ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಅರಣ್ಯದಿಂದ ಕೆಲವು ಅವಶೇಷಗಳನ್ನು ವಶಪಡಿಸಿಕೊಳ್ಳಲಾಗಿದೆ. ಆದರೆ ಅವು ಮಾನವ ಅವಶೇಷಗಳು ಎಂದು ಖಚಿತವಾಗಿಲ್ಲ. ಕೊಲೆ ಮಾಡಲು ಬಳಸಿದ್ದ ಚಾಕು ಸಹ ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.