Video Viral : ಕುತ್ತಿಗೆಗೆ ಸುತ್ತಿಕೊಂಡು ಜೀವಂತವಾಗಿ ನುಂಗಲು ಆರಂಭಿಸಿದ ಹೆಬ್ಬಾವು! ಮುಂದೇನಾಯ್ತು?

Video Viral : ಸೋಶಿಯಲ್ ಮೀಡಿಯಾ ಪ್ರಪಂಚವು ಆಶ್ಚರ್ಯಕರ ಸಂಗತಿಗಳಿಂದ ತುಂಬಿದೆ. ಇಲ್ಲಿ ಅನೇಕ ವಿಡಿಯೋಗಳು ವೈರಲ್‌ ಆಗುತ್ತವೆ. ಅದರಲ್ಲೂ ಹಾವಿಗೆ ಸಂಬಂಧಪಟ್ಟ ವಿಡಿಯೋಗಳಂತೂ ಎಲ್ಲರ ಗಮನಸೆಳೆಯುತ್ತವೆ. ಇದೀಗ ಅಂತಹ ವಿಡಿಯೋವೊಂದು ಮುನ್ನೆಲೆಗೆ ಬಂದಿದೆ.

Written by - Chetana Devarmani | Last Updated : Nov 14, 2022, 03:11 PM IST
  • ಕುತ್ತಿಗೆಗೆ ಸುತ್ತಿಕೊಂಡು ಜೀವಂತವಾಗಿ ನುಂಗಲು ಆರಂಭಿಸಿದ ಹೆಬ್ಬಾವು!
  • ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದೆ ಭಯಾನಕ ವಿಡಿಯೋ
Video Viral : ಕುತ್ತಿಗೆಗೆ ಸುತ್ತಿಕೊಂಡು ಜೀವಂತವಾಗಿ ನುಂಗಲು ಆರಂಭಿಸಿದ ಹೆಬ್ಬಾವು! ಮುಂದೇನಾಯ್ತು? title=
ಹೆಬ್ಬಾವು

Python Video Viral : ಸೋಶಿಯಲ್ ಮೀಡಿಯಾ ಪ್ರಪಂಚವು ಆಶ್ಚರ್ಯಕರ ಸಂಗತಿಗಳಿಂದ ತುಂಬಿದೆ. ಇಲ್ಲಿ ಅನೇಕ ವಿಡಿಯೋಗಳು ವೈರಲ್‌ ಆಗುತ್ತವೆ. ಅದರಲ್ಲೂ ಹಾವಿಗೆ ಸಂಬಂಧಪಟ್ಟ ವಿಡಿಯೋಗಳಂತೂ ಎಲ್ಲರ ಗಮನಸೆಳೆಯುತ್ತವೆ. ಇದೀಗ ಅಂತಹ ವಿಡಿಯೋವೊಂದು ಮುನ್ನೆಲೆಗೆ ಬಂದಿದ್ದು, ನೋಡುಗರನ್ನು ಅಚ್ಚರಿಗೊಳಿಸುವಂತೆ ಮಾಡಿದೆ. ಹೆಬ್ಬಾವೊಂದು ವ್ಯಕ್ತಿಯ ಕುತ್ತಿಗೆಗೆ ಸುತ್ತಿಕೊಂಡು ಆತನನ್ನು ಜೀವಂತವಾಗಿ ನುಂಗಲು ಆರಂಭಿಸಿತು. ಇದನ್ನು ನೋಡಿದ ಎಂಥವರೂ ಸಹ ಒಮ್ಮೆ ಬೆಚ್ಚಿಬೀಳುತ್ತಾರೆ. 

ಇದನ್ನೂ ಓದಿ : ಕುಡಿದ ಮತ್ತಿನಲ್ಲಿ ಮಾರಾಮಾರಿ! ಮುಂದಾಗಿದ್ದನ್ನು ನೋಡಿದ್ರೆ ಎದ್ದುಬಿದ್ದು ನಗ್ತೀರಾ

ಹೆಬ್ಬಾವು ತನ್ನ ದಾರಿಯಲ್ಲಿ ತಾನು ಹೋಗುತ್ತಿತ್ತು. ಈ ವೇಳೆ ಕೆಲವು ಜನ ಅದಕ್ಕೆ ಅಡ್ಡ ಹೋಗಿ ತೊಂದರೆ ಕೊಡಲು ಆರಂಭಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹೆಬ್ಬಾವು ಪ್ರತಿದಾಳಿ ನಡೆಸಿದ್ದು, ತಕ್ಷಣ ವ್ಯಕ್ತಿಯ ಕುತ್ತಿಗೆಗೆ ಸುತ್ತಿಕೊಂಡಿದೆ. ಇದರಿಂದ ಅವರಿಗೆ ಉಸಿರಾಟದ ತೊಂದರೆ ಶುರುವಾಯಿತು. ಕುಪಿತಗೊಂಡ ಹೆಬ್ಬಾವು ವೃದ್ಧನನ್ನು ಜೀವಂತ ನುಂಗಲು ಮುಂದಾದಾಗ ಕೆಲವರು ಸಹಾಯಕ್ಕೆ ಬಂದರು. ಈ ದೃಶ್ಯ ಕಂಡರೆ ಮೈ ಜುಮ್ಮೆನ್ನುತ್ತದೆ. 

 

 

ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳ ವಿವಿಧ ವೇದಿಕೆಗಳಲ್ಲಿ ಹಂಚಿಕೊಳ್ಳಲಾಗಿದೆ. ಇದನ್ನು ಇನ್‌ಸ್ಟಾಗ್ರಾಮ್‌ನಲ್ಲಿ vishnurawal_media ಹೆಸರಿನ ಪುಟದಲ್ಲಿ ಅಪ್‌ಲೋಡ್ ಮಾಡಲಾಗಿದೆ. ಅನೇಕ ಜನರು ಈ ವಿಡಿಯೋಗೆ ಕಾಮೆಂಟ್‌ ಮಾಡುತ್ತಿದ್ದಾರೆ. ಹೆಬ್ಬಾವಿನ ಬಾಯಿಯಿಂದ ವ್ಯಕ್ತಿಯನ್ನು ಬಚಾವ್‌ ಮಾಡುವ ದೃಶ್ಯ ಸದ್ಯ ಎಲ್ಲೆಡೆ ಸಖತ್‌ ವೈರಲ್‌ ಆಗುತ್ತಿದೆ. 

ಇದನ್ನೂ ಓದಿ : ನೋಟ್ ಎಕ್ಸ್ ಚೆಂಜ್ ನೆಪದಲ್ಲಿ ಪೆಟ್ರೋಲ್ ಬಂಕ್‌ನಲ್ಲಿ ಹಣ ಕದ್ದು ಪರಾರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News