ಬೆಂಗಳೂರು: ಡಿಆರ್‌ಐ ಮತ್ತು ಐಸಿಜಿ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿದ್ದು, ಹಡಗುಗಳ ಮೂಲಕ ತಮಿಳುನಾಡಿಗೆ ಡ್ರಗ್‌ ಸಾಗಾಟ ಮಾಡ್ತಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ. ಜೊತೆಗೆ ಕೋಟ್ಯಾಂತರ ರೂ. ಮೌಲ್ಯದ 218 ಕೆಜಿ ಹೆರಾಯಿನ್‌ ವಶಕ್ಕೆ ಪಡೆದುಕೊಂಡಿದ್ದಾರೆ.  


COMMERCIAL BREAK
SCROLL TO CONTINUE READING

ಇದನ್ನು ಓದಿ: Health Tips: ವೀಳ್ಯದೆಲೆ ತಿನ್ನೋದ್ರಿಂದ ಆರೋಗ್ಯಕ್ಕೆಷ್ಟು ಪ್ರಯೋಜನ..?


ಲಕ್ಷದ್ವೀಪದಿಂದ ಪ್ರಿನ್ಸ್ ಮತ್ತು ಲಿಟಲ್ ಜೀಸಸ್ ಎಂಬ ಎರಡು ಹಡಗುಗಳ ಮೂಲಕ ತಮಿಳುನಾಡಿಗೆ ಹೆರಾಯಿನ್‌ನನ್ನು ಸಾಗಾಟ ಮಾಡಲಾಗುತ್ತಿತ್ತು. ಈ ಕುರಿತು ಖಚಿತ ಮಾಹಿತಿ ಪಡೆದ ಡಿಆರ್‌ಐ ಮತ್ತು ಐಸಿಜಿ ಅಧಿಕಾರಿಗಳು ಅರಬ್ಬಿ ಸಮುದ್ರದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ 1526 ಕೋಟಿ ರೂ. ಮೌಲ್ಯದ 218 ಕೆಜಿ ಹೆರಾಯಿನ್‌ ಪತ್ತೆಯಾಗಿದೆ. ಸದ್ಯ ಆರೋಪಿಗಳನ್ನು ಬಂಧಿಸಿರುವ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ. 


ಡಿಆರ್‌ಐ ಮತ್ತು ಐಸಿಜಿ ಅಧಿಕಾರಿಗಳು ಒಂದೇ ತಿಂಗಳಲ್ಲಿ ನಾಲ್ಕು ಕಡೆಗಳಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಏಪ್ರಿಲ್‌ 20 ರಂದು ಗುಜರಾತ್‌ನ ಕಾಂಡ್ಲಾ ಬಂದರಿನಲ್ಲಿ ತಪಾಸಣೆ ಮಾಡಿದ್ದ ಅಧಿಕಾರಿಗಳಿಗೆ 205 ಕೆ.ಜಿ ಹೆರಾಯಿನ್‌ ಲಭ್ಯವಾಗಿತ್ತು. ಅಷ್ಟೇ ಅಲ್ಲದೆ, ಗುಜರಾತ್‌ನ ಮತ್ತೊಂದೆಡೆ ಪಿಪಾವವ್‌ ಬಂದರಿನಲ್ಲಿ ಏಪ್ರಿಲ್‌ 29ರಂದು ದಾಳಿ ನಡೆಸಿದ್ದ ಅಧಿಕಾರಿಗಳಿಗೆ 396 ಕೆಜಿ ಹೆರಾಯಿನ್‌ ಲೇಸ್ಡ್‌ ಮತ್ತು 62 ಕೆಜಿ ಹೆರಾಯಿನ್‌ ಸಿಕ್ಕಿತ್ತು. 


Trigrahi Yog: ಮೀನ ರಾಶಿಯಲ್ಲಿ ‘ತ್ರಿಗ್ರಾಹಿ ಯೋಗ’, ಈ 3 ರಾಶಿಯವರ ಜೀವನದಲ್ಲಿ ಪ್ರಗತಿ


ಕೇವಲ ಒಂದೇ ತಿಂಗಳಲ್ಲಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳಿಗೆ ಅಪಾರ ಪ್ರಮಾಣದ ಮಾದಕವಸ್ತುಗಳು ಸಿಕ್ಕಿವೆ. ಸದ್ಯ ಆರೋಪಿಗಳ ಸಮೇತ ಅಕ್ರಮ ವಸ್ತುಗಳನ್ನು ಜಪ್ತಿ ನಡೆಸಿರುವ ಅಧಿಕಾರಿಗಳು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.