ಅಮೃತಸರ (ಪಂಜಾಬ್‌): ಕಳೆದ ಎರಡು ದಿನದ ಹಿಂದೆ ದುಬೈ ಮೂಲದ ಎನ್‌ಆರ್‌ಐ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆಗೈದಿದ್ದರು. ಈ ಪ್ರಕರಣಕ್ಕೆ ಸದ್ಯ ಟ್ವಿಸ್ಟ್‌ ಸಿಕ್ಕಿದ್ದು, ಪತ್ನಿಯ ಅಕ್ರಮ ಸಂಬಂಧಕ್ಕೆ ಪತಿ ಅಡ್ಡಿಯಾಗುತ್ತಿದ್ದ ಎಂಬ ಕಾರಣಕ್ಕೆ ಆತನನ್ನು ಕೊಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.  


COMMERCIAL BREAK
SCROLL TO CONTINUE READING

ಹತ್ಯೆಗೀಡಾದವರನ್ನು ಹರಿಂದರ್ ಸಿಂಗ್ ಎಂದು ಗುರುತಿಸಲಾಗಿದ್ದು, ಭಾನುವಾರ ಮುಂಜಾನೆ ಗೋಲ್ಡನ್ ಟೆಂಪಲ್‌ಗೆ ತನ್ನ ಕುಟುಂಬದೊಂದಿಗೆ ಪೂಜೆ ಸಲ್ಲಿಸಲು ತೆರಳುತ್ತಿದ್ದ ಸಂದರ್ಭದಲ್ಲಿ ಚೆಹರ್ತಾದ ಘನುಪುರ್ ಕಾಲೆ ಗ್ರಾಮದಲ್ಲಿ ಶಸ್ತ್ರಸಜ್ಜಿತ ದುಷ್ಕರ್ಮಿಗಳು ಹರಿಂದರ್‌ ಮೇಲೆ ಗುಂಡು ಹಾರಿಸಿದ್ದಾರೆ. ಪರಿಣಾಮ ಆತ ಸಾವನ್ನಪ್ಪಿದ್ದಾನೆ. 


ಇದನ್ನೂ ಓದಿ: "ಪ್ರವಾದಿ ಬಗ್ಗೆ ನೀಡಿದ ಹೇಳಿಕೆ ಸ್ವೀಕಾರಾರ್ಹವಲ್ಲ": ಹಿರಿಯ ಎನ್‌ಆರ್‌ಐ


ಪೋಲೀಸ್‌ ಮಾಹಿತಿ ಪ್ರಕಾರ, ಹರಿಂದರ್ ಸಿಂಗ್ ಅವರ ಪತ್ನಿ ಸತ್ನಮ್ ಕೌರ್ ಮತ್ತು ಕಾಳೆ ಗ್ರಾಮದ ಅರ್ಷದೀಪ್ ಸಿಂಗ್ ಅಕ್ರಮ ಸಂಬಂಧ ಹೊಂದಿದ್ದರು. ಇವರಿಬ್ಬರ ಸಂಬಂಧಕ್ಕೆ ಪತಿ ಹರಿಂದರ್‌ ಅಡ್ಡಿಯಾಗುತ್ತಿದ್ದ ಎಂದು ದುಷ್ಕರ್ಮಿಗಳಿಗೆ ಸುಪಾರಿ ನೀಡಿ, ಆತನನ್ನು ಕೊಲೆ ಮಾಡಿಸಿದ್ದಾರೆ. ಸದ್ಯ ಹಂತಕ ವರೀಂದರ್‌ ಸಿಂಗ್‌, ಸುಪಾರಿ ನೀಡಿದ ಅರ್ಷದೀಪ್ ಸಿಂಗ್ ಮತ್ತು ಸತ್ನಮ್ ಕೌರ್‌ನನ್ನು ಪೊಲೀಸರು ಬಂಧಿಸಿದ್ಧಾರೆ. 


ಘಟನೆ ವಿವರ: 
ಹರಿಂದರ್ ಕಳೆದ 12 ವರ್ಷಗಳಿಂದ ದುಬೈನಲ್ಲಿ ನೆಲೆಸಿದ್ದು, ಎರಡು ವಾರಗಳ ಹಿಂದೆ ವಾಪಸಾಗಿದ್ದರು. ಹರೀಂದರ್ ಮತ್ತು ಅವರ ಇಬ್ಬರು ಮಕ್ಕಳೊಂದಿಗೆ ಬೈಕ್‌ನಲ್ಲಿ ಬೆಳಗಿನ ಜಾವ 3.30 ರ ಸುಮಾರಿಗೆ ಗೋಲ್ಡನ್ ಟೆಂಪಲ್‌ಗೆ ಪೂಜೆ ಸಲ್ಲಿಸಲು ಹೋಗುತ್ತಿದ್ದಾಗ ಹರಿಕೃಷ್ಣನಗರ ಪ್ರದೇಶದ ದಶ್ಮೇಶ್ ಗನ್ ಹೌಸ್ ಬಳಿ ಬೈಕ್‌ನಲ್ಲಿ ಬಂದ ಇಬ್ಬರು ಬೈಕ್‌ನ್ನು ತಳ್ಳಿದ್ದಾರೆ. ಆ ಬಳಿಕ ಮಕ್ಕಳು ಸೇರಿ ಹರೀಂದರ್‌ ನೆಲಕ್ಕೆ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಆರೋಪಿಗಳು ಹರೀಂದರ್‌ ಮೇಲೆ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. 


ತಕ್ಷಣವೇ ಹರೀಂದರ್‌ ಸಿಂಗ್‌ರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಸಹ ಅದಾಗಲೇ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಪೊಲೀಸ್ ಕಮಿಷನರ್ ಅರುಣ್ ಪಾಲ್ ಸಿಂಗ್ ಅವರು ಈ ಪ್ರಕರಣದ ತನಿಖೆ ಕೈಗೊಂಡಿದ್ದಾರೆ. ಇನ್ನು ತನಿಖೆಯ ಸಂದರ್ಭದಲ್ಲಿ ಈ ಕೊಲೆಯನ್ನು ಹರೀಂದರ್‌ ಪತ್ನಿ ಸತ್ನಮ್ ಕೌರ್‌ ಮಾಡಿಸಿದ್ದಾರೆ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ.  


ಇದನ್ನೂ ಓದಿ: ಇನ್ಮುಂದೆ ಅಮೆರಿಕಾ ಪ್ರಯಾಣ ಸುಲಭ: ಕೊರೊನಾ ಟೆಸ್ಟ್‌ ಅಗತ್ಯವಿಲ್ಲ ಎಂದ ಯುಎಸ್‌


ಪತಿ ದುಬೈನಲ್ಲಿ ನೆಲೆಸಿರುವ ಸಂದರ್ಭದಲ್ಲಿ ಅರ್ಷದೀಪ್‌ ಜೊತೆ ಸತ್ನಮ್‌ ಅಕ್ರಮ ಸಂಬಂಧ ಹೊಂದಿದ್ದಳು. ಇದು ಹರಿಂದರ್ ಗಮನಕ್ಕೆ ಬಂದಾಗ ಅವಳ ಮೇಲೆ ಕಣ್ಣಿಟ್ಟಿದ್ದಾನೆ. ಇದರಿಂದ ಕೋಪಗೊಂಡ ಸತ್ನಮ್‌ ಪತಿಯನ್ನು ಮುಗಿಸುವ ಯೋಜನೆ ಹಾಕಿ ದುಷ್ಕರ್ಮಿಗಳಿಗೆ 2.7 ಲಕ್ಷ ರೂ. ಸುಪಾರಿ ನೀಡಿದ್ದಾಳೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ