"ಪ್ರವಾದಿ ಬಗ್ಗೆ ನೀಡಿದ ಹೇಳಿಕೆ ಸ್ವೀಕಾರಾರ್ಹವಲ್ಲ": ಹಿರಿಯ ಎನ್‌ಆರ್‌ಐ

“ಭಾರತವು ಶತಮಾನಗಳಿಂದ ಅರಬ್ ದೇಶದೊಂದಿಗೆ ನಿಕಟ ಮತ್ತು ಸಾಂಪ್ರದಾಯಿಕ ಸಂಬಂಧವನ್ನು ಇಟ್ಟುಕೊಂಡಿದೆ. ನಾವು ಇಡೀ ಗಲ್ಫ್‌ನಲ್ಲಿ ಬಹಳ ದೊಡ್ಡ ವಲಸಿಗ ಸಮುದಾಯವನ್ನು ರೂಪಿಸಲು ಇದುವೇ ಕಾರಣ. ಈ ರಾಷ್ಟ್ರಗಳ ಪ್ರಗತಿಯಲ್ಲಿರುವ ಪಾಲುದಾರ ಎಂದು ಕರೆಯಲಾಗುತ್ತದೆ" ಎಂದು ಹೇಳಿದರು.   

Written by - Bhavishya Shetty | Last Updated : Jun 12, 2022, 04:33 PM IST
  • ಪ್ರವಾದಿ ಮೊಹಮ್ಮದ್ ಬಗ್ಗೆ ನೀಡಿರುವ ಹೇಳಿಕೆ ಸ್ವೀಕಾರ್ಹವಲ್ಲ
  • ವಿವಾದಾತ್ಮಕ ಹೇಳಿಕೆಯನ್ನು ಖಂಡಿಸಿದ ಎಸ್‌ಕೆ ವಾಧವನ್
  • ಗಲ್ಫ್‌ ರಾಷ್ಟ್ರದಲ್ಲಿರುವ ಹಿರಿಯ ಎನ್‌ಆರ್‌ಐ ಎಸ್‌ಕೆ ವಾಧವನ್
"ಪ್ರವಾದಿ ಬಗ್ಗೆ ನೀಡಿದ ಹೇಳಿಕೆ ಸ್ವೀಕಾರಾರ್ಹವಲ್ಲ": ಹಿರಿಯ ಎನ್‌ಆರ್‌ಐ  title=
Kuwait NRI

ಕುವೈತ್‌ನಲ್ಲಿ ತಮ್ಮ ಜೀವನದ 65 ವರ್ಷಗಳನ್ನು ಕಳೆದಿರುವ ಹಿರಿಯ ಎನ್‌ಆರ್‌ಐ ಎಸ್‌ಕೆ ವಾಧವನ್ ಎಂಬವರು, ಭಾರತೀಯ ಸಮುದಾಯ ಕುವೈಟ್‌ನಲ್ಲಿ ಹೊಂದಿರುವ ಉತ್ತಮ ಬಾಂಧವ್ಯದ ಬಗ್ಗೆ ಮಾತನಾಡಿದ್ದಾರೆ. ಕುವೈತ್‌ನಲ್ಲಿ ಮಾತ್ರವಲ್ಲದೆ ಗಲ್ಫ್‌ನಾದ್ಯಂತ ಭಾರತೀಯರು ಮೆಚ್ಚುಗೆ ಮತ್ತು ಗೌರವವನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ವಾರಾಂತ್ಯದ ಟ್ರಿಪ್‌ಗೆ ರಾಷ್ಟ್ರ ರಾಜಧಾನಿಯ ಈ ಸ್ಥಳಗಳು ಬೆಸ್ಟ್‌

“ಭಾರತವು ಶತಮಾನಗಳಿಂದ ಅರಬ್ ದೇಶದೊಂದಿಗೆ ನಿಕಟ ಮತ್ತು ಸಾಂಪ್ರದಾಯಿಕ ಸಂಬಂಧವನ್ನು ಇಟ್ಟುಕೊಂಡಿದೆ. ನಾವು ಇಡೀ ಗಲ್ಫ್‌ನಲ್ಲಿ ಬಹಳ ದೊಡ್ಡ ವಲಸಿಗ ಸಮುದಾಯವನ್ನು ರೂಪಿಸಲು ಇದುವೇ ಕಾರಣ. ಈ ರಾಷ್ಟ್ರಗಳ ಪ್ರಗತಿಯಲ್ಲಿರುವ ಪಾಲುದಾರ ಎಂದು ಕರೆಯಲಾಗುತ್ತದೆ" ಎಂದು ಹೇಳಿದರು. 

ಭಾರತೀಯ ಸಂವಿಧಾನವು ತನ್ನ ಎಲ್ಲಾ ನಾಗರಿಕರಿಗೆ ಧರ್ಮದ ಸ್ವಾತಂತ್ರ್ಯವನ್ನು ಖಾತ್ರಿಪಡಿಸುತ್ತದೆ ಎಂದು ಹೇಳಿದ ವಾಧವನ್, ಪ್ರವಾದಿ ಮೊಹಮ್ಮದ್ ಬಗ್ಗೆ ನೀಡಿರುವ ವಿವಾದಾತ್ಮಕ ಹೇಳಿಕೆಯನ್ನು ಬಲವಾಗಿ ಖಂಡಿಸಿದ್ದಾರೆ. "ಈ ಹೇಳಿಕೆ ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ. ಭಾರತವು ಶತಮಾನಗಳಿಂದಲೂ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಚಿಂತನೆಗಳ ಸಮ್ಮಿಲನದ ಬಿಂದುವಾಗಿದ್ದು, ಪ್ರಪಂಚದಲ್ಲಿ ಎಲ್ಲಿಯೂ ಕಾಣದ ವಿಶಿಷ್ಟವಾದ ವಿಭಿನ್ನತೆಯನ್ನು ಹೊಂದಿದೆ" ಎಂದರು.

"ವಿವಾದಾತ್ಮಕ ಹೇಳಿಕೆ ನೀಡಿರುವವರನ್ನು ವಜಾ ಮಾಡಿರುವ ಆಡಳಿತ ಮಂಡಳಿಯ ತ್ವರಿತ ಕ್ರಮದಿಂದ ನನಗೆ ಸಂತೋಷವಾಗಿದೆ. ಭಾರತವು ಎಲ್ಲಾ ಧರ್ಮವನ್ನು ಗೌರವಿಸುತ್ತದೆ. ಇತರರ ಭಾವನೆಗಳನ್ನು ನೋಯಿಸುವ ಇಂತಹ ಯಾವುದೇ ಕಾಮೆಂಟ್‌ಗಳನ್ನು ಸಹಿಸುವುದಿಲ್ಲ ಎಂಬ ಸ್ಪಷ್ಟ ಸಂಕೇತವನ್ನು ನೀಡಿದೆ" ಎಂದರು. 

"ಇಂತಹ ತ್ವರಿತ ಕ್ರಮವು, ಸಮುದಾಯದ ಭಾವನೆಗಳಿಗೆ ಆಗಿರುವ ನೋವನ್ನು ಶಮನಗೊಳಿಸುತ್ತದೆ. ಅಂತಹ ಶಕ್ತಿಗಳು ಮತ್ತೆ ತಲೆ ಎತ್ತದಂತೆ ತಡೆಯುತ್ತದೆ" ಎಂದರು.

ಇದನ್ನೂ ಓದಿ: ವಧು ದಕ್ಷಿಣೆ ಕೊಟ್ಟು ಮೇಕೆಯನ್ನು ವರಿಸಿದ ಭೂಪ! ಕಾರಣವೇ ವಿಚಿತ್ರ

ಪ್ರಧಾನಿ ಮೋದಿಯವರು ಗಲ್ಫ್ ರಾಷ್ಟ್ರದೊಂದಿಗೆ, ವಿಶೇಷವಾಗಿ ಸೌದಿ ಅರೇಬಿಯಾ, ಯುಎಇ, ಓಮನ್‌ಗೆ ಭೇಟಿ ನೀಡುತ್ತಿದ್ದಾರೆ ಎಂಬ ವಿಷಯ ತಿಳಿದು ಹಿರಿಯ ಎನ್‌ಆರ್‌ಐ ಎಸ್‌ಕೆ ವಾಧವನ್ ಮೆಚ್ಚುಗೆ ವ್ಯಕ್ತಪಡಿಸಿದರು. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News