ಬೆಂಗಳೂರು : ಲಂಚ ಕೇಳಿದ್ದಾರೆ ಎಂದು ಲೋಕಾಯುಕ್ತಗೆ ದೂರು ನೀಡಿದಕ್ಕೆ ಅಬಕಾರಿ ಇನ್ಸ್​ಪೆಕ್ಟರ್ ಒಬ್ಬ ಬಾರ್ ಅಂಡ್ ರೆಸ್ಟೊರೆಂಟ್ ಗೆ ಬೆಂಕಿ ಹಚ್ಚಿಸಿರುವ ಘಟನೆ ನಗರದ ಸುಂಕದಕಟ್ಟೆಯಲ್ಲಿ ನಡೆದಿದೆ. 


COMMERCIAL BREAK
SCROLL TO CONTINUE READING

ಅಬಕಾರಿ ಇನ್ಸ್ ಪೆಕ್ಟರ್ ಮಂಜುನಾಥ ಬೆಂಕಿ ಇಡಿಸಿದ ಅಧಿಕಾರಿ, ಸಧ್ಯ ಈತನ ವಿರುದ್ದ ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


ಇದನ್ನೂ ಓದಿ : Omicron BF.7 : ರಾಜ್ಯದಲ್ಲೂ ಹೆಚ್ಚಾಯ್ತು BF.7 ಆತಂಕ : ಮುಂದಿನ 40 ದಿನ ಕಠಿಣ ಎಂದ ತಜ್ಞರು


ಬಾರ್ ಅಂಡ್ ರೆಸ್ಟೋರೆಂಟ್ ಗೆ ಬೆಂಕಿ ಹಚ್ಚಿದ ಘಟನೆ ಕಳೆದ ಭಾನುವಾರ ಮಧ್ಯರಾತ್ರಿ ನಡೆದಿದೆ. ಒಟ್ಟು 45 ಲಕ್ಷಕ್ಕೂ ಹೆಚ್ಚು ಮೌಲ್ಯದ ನಗದು, ಮದ್ಯ ಬೆಂಕಿಗಾಹುತಿಯಾಗಿದೆ. ಮೊದಲು ಇದು ಶಾರ್ಟ್ ಸರ್ಕ್ಯೂಟ್ ನಿಂದ ಸಂಭವಿಸಿದೆ ಎಂದು ಹೇಳಲಾಗಿತ್ತು. ಆದರೆ, ಬೆಸ್ಕಾಂ ಅಧಿಕಾರಿಗಳು ಶಾರ್ಟ್ ಸರ್ಕ್ಯೂಟ್ ನಿಂದ ಅಪಘಾತ ಸಂಭವಿಸಿಲ್ಲ ಎಂದ ವರದಿ ನೀಡಿದ್ದಾರೆ.


ಕೆಂಗೇರಿ ವಲಯ ಅಬಕಾರಿ ಇನ್ಸ್ನಪೆಕ್ಟರ್ ಮಂಜುನಾಥ್ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ. ರೆಸ್ಟೋರೆಂಟ್ ಮಾಲೀಕ ಎಸಿಬಿಗೆ ದೂರು ಕೊಟ್ಟಿದ್ದಕ್ಕೆ ಅಬಕಾರಿ ಇನ್ಸ್ ಪೆಕ್ಟರ್ ಬಾರ್ ಗೆ ಬೆಂಕಿ ಇಟ್ಟು ಪ್ರತಿಕಾರ ತೀರಿಸಿಕೊಂಡಿದ್ದಾರೆ ಎಂಬ ಆರೋಪ ಮಾಡಿದ್ದಾರೆ. 


ಏನಿದು ಪ್ರತೀಕಾರ..?


ಮಾಚೋಹಳ್ಳಿ ಬಾರ್ ಅಂಡ್ ರೆಸ್ಟೋರೆಂಟ್ ಗೆ ರಾಮಕೃಷ್ಣ ಲೈಸೆನ್ಸ್ ಗೆ ಅರ್ಜಿ ಸಲ್ಲಿಸಿದ್ದರು. ಅಬಕಾರಿ ಇನ್ಸ್ ಪೆಕ್ಟರ್ ಮಂಜುನಾಥ್ 15 ಲಕ್ಷ ಬೇಡಿಕೆ ಇಟ್ಟಿದ್ದರು. ಅದಕ್ಕೆ,  ಬಾರ್ ಮಾಲಿಕ ರಾಮಕೃಷ್ಣ ಬಂಗಾರ ಅಡ ಇಟ್ಟು 10 ಲಕ್ಷ ಹಣ ಕೊಟ್ಟಿದ್ದರು. ಉಳಿದ ಐದು ಲಕ್ಷ ಕೊಡಲೇಬೇಕು ಎಂದು ಒತ್ತಾಯಿಸಿದ್ದರು. ಇದರಿಂದ ಬೇಸತ್ತು ರಾಮಕೃಷ್ಣ ಎಸಿಬಿಗೆ ದೂರು ನೀಡಿದ್ದರು. ಇದೇ ಪ್ರಕರಣದಲ್ಲಿ ಎಸಿಬಿ ದಾಳಿಗೆ ಒಳಗಾಗಿ ಇನ್ಸ್ ಪೆಕ್ಟರ್ ಮಂಜುನಾಥ್ ಬಂಧನಕ್ಕೊಳಗಾಗಿದ್ದರು. ಇದಕ್ಕೆ ಪ್ರತೀಕಾರವಾಗಿ ರಾಮಕೃಷ್ಣ ಅವರ ಮಾಲಿಕತ್ವದ ಬಾರ್ ಗೆ ಬೆಂಕಿ ಇರಿಸಿದ ಗಂಭೀರ ಆರೋಪ ಕೇಳಿ ಬಂದಿದೆ. 


ಇದನ್ನೂ ಓದಿ : KC Narayana Gowda : ಕೆಆರ್ ಪೇಟೆ ಕ್ಷೇತ್ರ ಬಿಟ್ಟು ಕೊಡಲು ಮುಂದಾದ ಸಚಿವ ಕೆಸಿ ನಾರಾಯಣ್ ಗೌಡ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.