Omicron BF.7 : ರಾಜ್ಯದಲ್ಲೂ ಹೆಚ್ಚಾಯ್ತು BF.7 ಆತಂಕ : ಮುಂದಿನ 40 ದಿನ ಕಠಿಣ ಎಂದ ತಜ್ಞರು

Omicron BF.7 : ವಿದೇಶಗಳಲ್ಲಿ ಕೊರೊನ ಆರ್ಭಟ ರಾಜ್ಯದಲ್ಲೂ ಹೆಚ್ಚಾಯ್ತು ಆತಂಕ ಹೆಚ್ಚಾಗಿದೆ. ಕರುನಾಡಲ್ಲಿ  ಒಮಿಕ್ರಾನ್​​ ಉಪತಳಿ BF.7 ಭೀತಿ ಸೃಷ್ಟಿಸಿದೆ. ಹೀಗಾಗಿ, ತಜ್ಞರು ಮುಂದಿನ 40 ದಿನಗಳು ನಿರ್ಣಾಯಕವಾಗಿದೆ ಎಂದು ಹೇಳಿದ್ದಾರೆ. 

Written by - Channabasava A Kashinakunti | Last Updated : Jan 2, 2023, 10:54 AM IST
  • ವಿದೇಶಗಳಲ್ಲಿ ಕೊರೊನ ಆರ್ಭಟ
  • ರಾಜ್ಯದಲ್ಲೂ ಹೆಚ್ಚಾಯ್ತು ಆತಂಕ ಹೆಚ್ಚಾಗಿದೆ
  • ತಜ್ಞರು ಮುಂದಿನ 40 ದಿನಗಳು ನಿರ್ಣಾಯಕವಾಗಿದೆ ಎಂದ ತಜ್ಞರು
Omicron BF.7 : ರಾಜ್ಯದಲ್ಲೂ ಹೆಚ್ಚಾಯ್ತು BF.7 ಆತಂಕ : ಮುಂದಿನ 40 ದಿನ ಕಠಿಣ ಎಂದ ತಜ್ಞರು title=

ಬೆಂಗಳೂರು : ವಿದೇಶಗಳಲ್ಲಿ ಕೊರೊನ ಆರ್ಭಟ ರಾಜ್ಯದಲ್ಲೂ ಹೆಚ್ಚಾಯ್ತು ಆತಂಕ ಹೆಚ್ಚಾಗಿದೆ. ಕರುನಾಡಲ್ಲಿ ಒಮಿಕ್ರಾನ್​​ ಉಪತಳಿ BF.7 ಭೀತಿ ಸೃಷ್ಟಿಸಿದೆ. ಹೀಗಾಗಿ, ತಜ್ಞರು ಮುಂದಿನ 40 ದಿನಗಳು ನಿರ್ಣಾಯಕವಾಗಿದೆ ಎಂದು ಹೇಳಿದ್ದಾರೆ. 

ಜನವರಿ - ಫೆಬ್ರವರಿ ತಿಂಗಳಲ್ಲಿ ಸೋಂಕು ಹೆಚ್ಚಳ ಸಾಧ್ಯತೆ ಇದೆ. ಅಲ್ಲದೆ, ಕೊರೊನಾ ಪ್ರಕರಣಗಳು ತೀವ್ರಗತಿಯಲ್ಲಿ ಏರಿಕೆಯಾಗಲಿದೆ. ಬಳಿಕ ಸೋಂಕು ಹೆಚ್ಚಳದ ಪ್ರಮಾಣ ಅಂದಾಜಿಸಲು ತೀರ್ಮಾನ ಮಾಡಲಾಗುತ್ತದೆ. ಮುಂದಿನ ಎರಡು ತಿಂಗಳಲ್ಲಿ ಸೋಂಕಿನ ಪ್ರಕರಣ ಏರಿಕೆಯಾಗಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. 

ಇದನ್ನೂ ಓದಿ : KC Narayana Gowda : ಕೆಆರ್ ಪೇಟೆ ಕ್ಷೇತ್ರ ಬಿಟ್ಟು ಕೊಡಲು ಮುಂದಾದ ಸಚಿವ ಕೆಸಿ ನಾರಾಯಣ್ ಗೌಡ!

ಹೀಗಾಗಿ, ಕೊರೊನಾ ಪರಿಸ್ಥಿತಿ ಎದುರಿಸಲು ತಾಂತ್ರಿಕ ಸಲಹಾ ಸಮಿತಿ ಸಿದ್ಧತೆ ನಡೆಸುತ್ತಿದೆ. ಸೋಂಕು ಹೆಚ್ಚಳದ ಅಂದಾಜು ವರದಿ ರೂಪಿಸಲು ಸಜ್ಜಾಗಿವೆ. ಹೀಗಾಗಿ, ರಾಜ್ಯ ಸರ್ಕಾರವು ಇಂಡಿಯನ್ ಇನ್​ಸ್ಟಿಟ್ಯೂಟ್​​ ಆಫ್​ ಸೈನ್ಸ್​ ಹಾಗೂ ಇಂಡಿಯನ್​ ಸ್ಟ್ಯಾಟಿಸ್ಟಿಕಲ್​​ ಸಂಸ್ಥೆ ಮೊರೆ ಹೋಗಿದೆ. ಸದ್ಯದ ಪ್ರಕರಣ ಆಧರಿಸಿ ಸೋಂಕು ಹೆಚ್ಚಳದ ಮಾದರಿ ವರದಿ ಅಲ್ಲಿಗೆ ಕಳುಹಿಸಲಾಗಿದೆ. 

ಮುಂದಿನ 2 ತಿಂಗಳಲ್ಲಿ ಅಂದಾಜು ಎಷ್ಟು ಕೇಸ್​ ದಾಖಲು ಸಾಧ್ಯತೆ ಇದೆ. ಸೋಂಕು ಹೆಚ್ಚಳದ ವರದಿ ಆಧರಿಸಿ ಪರಿಸ್ಥಿತಿ ಎದುರಿಸಲು ಸಿದ್ಧತೆ ನಡೆಸಲಾಗುತ್ತಿದೆ. ಸೋಂಕು ಹೆಚ್ಚಾದಾಗ ಬೇಕಾಗುವ ಬೆಡ್​​, ಔಷಧಗಳ ಬಗ್ಗೆ ಲೆಕ್ಕಾಚಾರ, ಎಷ್ಟು ಕೇಸ್​ ದಾಖಲಾಗಬಹುದೆಂದು ನೋಡಿಕೊಂಡು ಚಿಕಿತ್ಸೆಗೆ ಸಿದ್ಧತೆ ನಾಡಲಾಗುತ್ತಿದೆ. 

ತಜ್ಞರು ನೀಡುವ ವರದಿ ಆಧರಿಸಿ ತಾಂತ್ರಿಕ ಸಲಹಾ ಸಮಿತಿಯಿಂದ ಕ್ರಮ ಕೈಗೊಳ್ಳಲಿದೆ. ಅಂದಾಜು ವರದಿ ಸಿದ್ಧಪಡಿಸುವುದು ಅಷ್ಟು ಸುಲಭದ ಕೆಲಸವಲ್ಲ. ಚೀನಾದಿಂದ ಸೋಂಕಿನ ಬಗ್ಗೆ ಸರಿಯಾದ ಅಂಕಿ- ಸಂಖ್ಯೆ ಸಿಗುತ್ತಿಲ್ಲ. ಹೀಗಾಗಿ ಸೋಂಕು ಹೆಚ್ಚಳದ ಅಂದಾಜು ವರದಿ ತಯಾರಿಸುವುದು ಸವಾಲಾಗಿದೆ ಎಂದು ತಿಳಿಸಿದ್ದಾರೆ. 

ಇದನ್ನೂ ಓದಿ : ನಂದಿನಿ ತನ್ನ ಪ್ರತ್ಯೇಕ ಅಸ್ತಿತ್ವವನ್ನು ಸದಾ ಕಾಯ್ದುಕೊಳ್ಳಲಿದೆ: ಸಿಎಂ ಬೊಮ್ಮಾಯಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News