ಪೊಲೀಸರ ಹೆಸರಲ್ಲಿ ಜನರ ಸುಲಿಗೆ: ಮೂವರು ಕಿಲಾಡಿಗಳ ಬಂಧನ
ಪೊಲೀಸ್ ಭಾತ್ಮೀದಾರರೆಂದು ಹೇಳಿಕೊಂಡು ಸುಲಿಗೆ ಮಾಡುತ್ತಿದ್ದ ಈ ಮೂವರು ಆರೋಪಿಗಳಾದ ಅರುಣ್, ರಾಕೇಶ್ ಹಾಗೂ ಹರೀಶ್ ಎಂಬುವವರನ್ನ ಸದಾಶಿವ ನಗರ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು: ಅವರೆಲ್ಲರು ಸಹ ಪೊಲೀಸ್ ಇನ್ಫಾರ್ಮರ್ ಆಗಿ ಸಣ್ಣ ಪುಟ್ಟ ಕೆಲಸ ಮಾಡ್ತಾಯಿದ್ರು.. ಆದರೆ ಹಣದ ಆಸೆಗೆ ಬಿದ್ದಿದ್ದ ಆ ಖತರ್ನಾಕ್ ಗಳು ನಾವೇ ಪೊಲೀಸರು ಅಂತ ಹೇಳಿಕೊಂಡು ಸಿಕ್ಕ ಸಿಕ್ಕವರನ್ನು ಸುಲಿಗೆ ಮಾಡೋದಕ್ಕೆ ಮುಂದಾಗಿದ್ರು.. ಆದ್ರೆ ಇದರ ಬಗ್ಗೆ ಮಾಹಿತಿ ಸಿಕ್ಕ ನಂತರ ಪೊಲೀಸರು ಅವರೆಲ್ಲರಿಗು ಹೆಡೆಮುರಿ ಕಟ್ಟಿದ್ದಾರೆ.
ಪೊಲೀಸ್ ಭಾತ್ಮೀದಾರರೆಂದು ಹೇಳಿಕೊಂಡು ಸುಲಿಗೆ ಮಾಡುತ್ತಿದ್ದ ಈ ಮೂವರು ಆರೋಪಿಗಳಾದ ಅರುಣ್, ರಾಕೇಶ್ ಹಾಗೂ ಹರೀಶ್ ಎಂಬುವವರನ್ನ ಸದಾಶಿವ ನಗರ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ- Bengaluru: ಲವರ್ ಕೊಲೆ ಮಾಡಿ ಎಸ್ಕೇಪ್ ಆಗಿದ್ದ ಪ್ರೇಮಿ ಕೊನೆಗೂ ಅಂದರ್!
ಕ್ರೈಂ ಪೊಲೀಸ್ ಸೋಗಿನಲ್ಲಿ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಯೊಬ್ಬನನ್ನ ಆತನ ಹಾಸ್ಟೆಲ್ ನಿಂದ ಕಾರಿನಲ್ಲಿ ಕರೆದೊಯ್ದಿದ್ದ ಆರೋಪಿಗಳು, 'ನಾವು ಕ್ರೈಂ ಪೊಲೀಸ್ ಸಿಬ್ಬಂದಿ, ಮಾದಕ ವಸ್ತು ಪ್ರಕರಣವೊಂದರಲ್ಲಿ ನಿನ್ನ ಹೆಸರು ಕೇಳಿ ಬಂದಿದೆ. ನೀನು ಮಾದಕ ಪದಾರ್ಥ ಸೇವನೆ ಹಾಗೂ ಮಾರಾಟದಲ್ಲಿ ತೊಡಗಿರುವ ಮಾಹಿತಿ ಲಭ್ಯವಾಗಿದೆ. ಆದ್ದರಿಂದ ವೈದ್ಯಕೀಯ ತಪಾಸಣೆ ಮಾಡಬೇಕು ಎಂದು ಬೆದರಿಸಿದ್ದರು. ಬಳಿಕ ಸುಮಾರು ಮೂರು ಗಂಟೆಗಳ ಕಾಲ ಆತನನ್ನ ಕಾರಿನಲ್ಲಿ ಸುತ್ತಾಡಿಸಿ ಆತನಿಂದ ನಗದು, ಆನ್‌ಲೈನ್ ರೂಪದಲ್ಲಿ 1.70 ಲಕ್ಷ ಸುಲಿಗೆ ಮಾಡಿದ್ದರು. ನಂತರ ಈ ವಿಚಾರ ಯಾರಿಗೂ ಹೇಳದಂತೆ ಬೆದರಿಸಿ ಹಾಸ್ಟೆಲ್ ಬಳಿ ತಂದು ಬಿಟ್ಟು ಪರಾರಿಯಾಗಿದ್ದರು.
ಇದನ್ನೂ ಓದಿ- ತಹಶೀಲ್ದಾರ್ ಅಜಿತ್ ರೈ ಟೀಂಗೆ ಇತ್ತಂತೆ ʼರೈ ಸರ್ಕಾರ್ʼ ಎಂಬ ಹೆಸರು..!
ಈ ಘಟನೆಯಿಂದ ನೊಂದ ವಿದ್ಯಾರ್ಥಿ ಸದಾಶಿವನಗರ ಠಾಣಾ ಮೆಟ್ಟಿಲೇರಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ಯಶವಂತಪುರ ಠಾಣಾ ವ್ಯಾಪ್ತಿಯಲ್ಲಿ ಸಹ ಒಬ್ಬನಿಗೆ ಇದೇ ರೀತಿ ಮಾಡಿರುವುದು ಗೊತ್ತಾಗಿದೆ. ವಿಚಾರಣೆ ಸಂದರ್ಭದಲ್ಲಿ ಆರೋಪಿತರು ಇದೇ ಮಾದರಿಯಲ್ಲಿ 25ಕ್ಕೂ ಅಧಿಕ ಸುಲಿಗೆ ಮಾಡಿರುವ ವಿಚಾರ ಸಹ ಬಯಲಾಗಿದ್ದು ಲಕ್ಷಾಂತರ ರೂಪಾಯಿಯಷ್ಟು ಹಣವನ್ನು ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಂದ ಕಿತ್ತಿದ್ದಾರೆ ಅಂತ ಗೊತ್ತಾಗಿದೆ. ಒಟ್ಟಿನಲ್ಲಿ ದುಡಿದು ತಿನ್ನುವ ಬಲವಿದ್ದರೂ ಸಹ ಈ ರೀತಿ ಮೋಸ ಮಾಡಿ ಎಂಜಾಯ್ ಮಾಡುತ್ತಿದ್ದ ಆರೋಪಿಗಳು ಈಗ ಜೈಲು ಪಾಲಾಗಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.