ಬೆಂಗಳೂರು : ಅಂಗಡಿ ಮಾಲೀಕನಿಗೆ ಮೋಸ ಮಾಡಿ ಅಣ್ಣತಮ್ಮಂದಿರಿಬ್ಬರು ಜೈಲು ಪಾಲಾಗಿದ್ದಾರೆ ಹೋಲ್ ಸೇಲ್ ಮೊಬೈಲ್ ಅಂಗಡಿಯಿಂದ ಮೊಬೈಲ್ ಫೋನ್‌ಗಳನ್ನ ಡಿಲವರಿ ಕೊಟ್ಟು ವಾಪಾಸ್ ಬರುವಾಗ ಸಂಚು ರೂಪಿಸಿ 5.25 ಲಕ್ಷ ರೂ ಹಣದ ಜೊತೆ ದ್ವಿಚಕ್ರ ವಾಹನ ಕಳ್ಳತನ ಮಾಡಿದ್ದ ಸಹೋದರರನ್ನ ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ. ಅಜೀಜ್ ಹಾಗೂ ಶಹಬಾದ್ ಬಂಧಿತ ಆರೋಪಿಗಳು.
ಅಬೂಬಕ್ಕರ್ ಎಂಬುವವರು ಮೈಸೂರು ರಸ್ತೆಯ ಕಸ್ತೂರಬಾ ನಗರದಲ್ಲಿ ಹೋಲ್ ಸೇಲ್ ಮೊಬೈಲ್ ಅಂಗಡಿ ನಡೆಸುತ್ತಿದ್ದರು. ಅದೇ ಅಂಗಡಿಯಲ್ಲಿ ಶಹಬಾದ್ ಸಹ ಕೆಲಸ ಮಾಡಿಕೊಂಡಿದ್ದ. ಜೂನ್ 28 ರಂದು ಕೆ.ಆರ್ ಪುರಂನ ಮೂರು ಅಂಗಡಿಗಳಿಗೆ ಮೊಬೈಲ್ ಡೆಲಿವರಿ ನೀಡಿ ಹಣ ತರುವ ಕೆಲಸವನ್ನ ಅಂಗಡಿ ಮಾಲೀಕ ಅಬೂಬಕ್ಕರ್, ಶಹಬಾದ್ ಹಾಗೂ ಮೊಹಮ್ಮದ್ ಎಂಬಾತನಿಗೆ ಒಪ್ಪಿಸಿ ತಮ್ಮ ದ್ವಿಚಕ್ರ ವಾಹನವನ್ನೂ ನೀಡಿ ಕಳುಹಿಸಿದ್ದರು.
ಇದನ್ನೂ ಓದಿ: ರೈಲ್ವೆ ಪ್ರಯಾಣಿಕರಿಗೆ ಸಿಹಿ ಸುದ್ದಿ..! ಹೆಚ್ಚುವರಿ ದಟ್ಟಣೆ ಕಡಿಕೆ ಮಾಡಲು ವಿಶೇಷ ರೈಲುಗಳ ಸೇವೆ ವಿಸ್ತರಣೆ
ಆದರೆ ರಾತ್ರಿ ಗಾಬರಿಯಿಂದ ಬಂದಿದ್ದ ಶಹಬಾದ್ ಹಾಗೂ ಮೊಹಮ್ಮದ್, ಕಸ್ತೂರಬಾ ನಗರದ 1ನೇ ಕ್ರಾಸ್ ನಲ್ಲಿ ನಮ್ಮನ್ನ ಅಡ್ಡಗಟ್ಟಿದ ಇಬ್ಬರು ವ್ಯಕ್ತಿಗಳು ಸ್ಕೂಟರ್ ನಲ್ಲಿ ಗಾಂಜಾ ಇರುವುದಾಗಿ ಪರಿಶೀಲಿಸಿದ್ದರು. ಬಳಿಕ ನಮ್ಮನ್ನ ಹೆದರಿಸಿ ಹಣವಿದ್ದ ಸ್ಕೂಟರ್ ಸಮೇತ ಪರಾರಿಯಾದರು ಎಂದು ನಾಟಕವಾಡಿದ್ದರು. ಕೆಲಸಗಾರರ ಮಾತನ್ನ ನಿಜವೆಂದು ನಂಬಿದ್ದ ಮಾಲೀಕ ಅಬೂಬಕ್ಕರ್ ಈ ಸಂಬಂಧ ಬ್ಯಾಟರಾಯನಪುರ ಠಾಣೆಗೆ ದೂರು ಸಲ್ಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೈಸೂರು ರಸ್ತೆಯ ಮೇಲ್ಸೇತುವೆ ಇಳಿದ ನಂತರ ಮುಖ್ಯರಸ್ತೆಯಲ್ಲೇ ಇದ್ದ ಅಂಗಡಿಗೆ ಬರಲು ಕೆಲಸಗಾರರು ಅಡ್ಡ ರಸ್ತೆ ಯಾಕೆ ಬಳಸಿದರು ಎಂದು ಅನುಮಾನಗೊಂಡು ವ್ಯಕ್ತಪಡಿಸಿದ್ದರು. ತನಿಖೆ ಆರಂಭಿಸಿ ಇಬ್ಬರು ಕೆಲಸಗಾರರನ್ನ ತಮ್ಮದೇ ಸ್ಟೈಲಲ್ಲಿ ವಿಚಾರಿಸಿದಾಗ ಶಾಬಾದ್‌ನ ಕಳ್ಳಾಟ ಬಯಲಾಗಿತ್ತು. ಕೆಲಸಗಾರರ ಪೈಕಿ ಕೇರಳ ಮೂಲದವನಾದ ಮೊಹಮ್ಮದ್ ಗೆ ಬೆಂಗಳೂರು ಅಷ್ಟಾಗಿ ಪರಿಚಯವಿರಲಿಲ್ಲ.
ಇದನ್ನೂ ಓದಿ: ನಾಲ್ವರು ಡ್ರಗ್ ಪೆಡ್ಲರ್‌ಗಳ ಬಂಧನ: 50 ಲಕ್ಷ ರೂ. ಮೌಲ್ಯದ 96 ಕೆಜಿ ಗಾಂಜಾ ವಶಕ್ಕೆ
ಅದನ್ನೇ ಸರಿಯಾಗಿ ಬಳಸಿಕೊಂಡಿದ್ದ ಶಾಬಾದ್, ಮೊಬೈಲ್ ಡೆಲಿವರಿ ಕೊಟ್ಟು ಹಣ ತರುವ ಮುನ್ನ ತನ್ನ ಸಹೋದರ ಅಜೀಜ್ ಗೆ ಕರೆ ಮಾಡಿದ್ದ. ತಾನು ಬರುವ ಮಾರ್ಗ, ಎಲ್ಲಿ ಹಣ ದೋಚಬಹುದು ಎಂದು ಸಹೋದರನಿಗೆ ಹೇಳಿಕೊಟ್ಟಿದ್ದ. ಅದರಂತೆ ತನ್ನಿಬ್ಬರು ಸಹಚರರೊಂದಿಗೆ ಕಾದು ಕುಳಿತಿದ್ದ ಅಜೀಜ್ ಹಣ, ಹಾಗೂ ದ್ವಿಚಕ್ರ ವಾಹನ ದೋಚಿ ಪರಾರಿಯಾಗಿದ್ದ.
ಸದ್ಯ ಶಾಬಾದ್ ನ ಅಸಲಿಯತ್ತು ತಿಳಿದ ಬಳಿಕ ಮೊಹಮ್ಮದ್ ಹಾಗೂ ಅಂಗಡಿ ಮಾಲೀಕ ಅಬೂಬಕ್ಕರ್ ದಂಗಾಗಿದ್ದಾರೆ. ಸದ್ಯ ಅಜೀಜ್ ಹಾಗೂ ಶಾಬಾದ್ ನನ್ನ ಬಂಧಿಸಿರುವ ಬ್ಯಾಟರಾಯನಪುರ ಠಾಣಾ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.